
ಬೆಂಗಳೂರು: ಗಣೇಶ ಹಬ್ಬ ಬಂತೆಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸಂಭ್ರಮ ಸಡಗರ, ಅನೇಕ ಮನೆಗಳಲ್ಲಿ ಹಾಗೂ ಏರಿಯಾಗಳಲ್ಲಿ ಗಣೇಶನನ್ನು ತಂದು ಪ್ರತಿಷ್ಠಾಪಿಸುತ್ತಾರೆ.
ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ತಮ್ಮ ಏರಿಯಾಗಳಲ್ಲಿ ಸಿದ್ಧಿ ವಿನಾಯಕನನ್ನು ಕೂರಿಸಲು ಪುಟಾಣಿ ಮಕ್ಕಳು ಕಲೆಕ್ಷನ್ ಆರಂಭಿಸಿದ್ದಾರೆ. ಏರಿಯಾದ ಸುತ್ತ ಮುತ್ತ ಓಡಾಡುವ ಬೈಕ್, ಕಾರುಗಳನ್ನು ಅಡ್ಡಗಟ್ಟಿ ಕಲೆಕ್ಷನ್ಗೆ ಇಳಿದಿದ್ದಾರೆ.
ಪುಟಾಣಿ ಮಕ್ಕಳು ಶಾಸಕರ ಬಳಿ ಹಣ ಕೇಳುತ್ತಿದ್ದ ವಿಡಿಯೋ ವೈರಲ್ ಆಗುತ್ತಿದೆ. ಗಣೇಶನಿಗಾಗಿ ಹಣ ಕಲೆಕ್ಷನ್ ಮಾಡಲು ಮುಂದಾಗಿರುವ ಮಕ್ಕಳು ಗೊತ್ತಿಲ್ಲದೇ ಶಾಸಕರ ಕಾರನ್ನು ಅಡ್ಡಗಟ್ಟಿದ್ದಾರೆ. ಇದೇ ವೇಳೆ ಕಾರಿನಲ್ಲಿ ತಮಿಳುನಾಡು ಡಿಎಂಕೆ ಪಕ್ಷದ ಶಾಸಕ ವೈ ಪ್ರಕಾಶ್ ಅವರು ಪ್ರಯಾಣಿಸುತ್ತಿದ್ದರು. ಗಣೇಶ ಹಬ್ಬಕ್ಕೆ ಮಕ್ಕಳು ಶಾಸಕರ ಬಳಿ ಹಣ ಕೇಳಲು ಹೋಗಿದ್ದಾರೆ.
ಮಕ್ಕಳನ್ನು ನೋಡುತ್ತಿದ್ದಂತೆ ಕಾರನ್ನು ನಿಲ್ಲಿಸಿ ಅವರ ಜೊತೆಗೆ ಮಾತಾಡಿದ್ದಾರೆ. ಮಕ್ಕಳ ಜೊತೆಗೆ ಡಿಎಂಕೆ ಪಕ್ಷದ ಶಾಸಕ ವೈ ಪ್ರಕಾಶ್ ಅವರು ಕನ್ನಡದಲ್ಲೇ ಮಾತನಾಡಿ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ.ನಾನು ಯಾರು ಗೊತ್ತಾ ಎಂದು ಮಕ್ಕಳಿಗೆ ಕೇಳಿದ್ದಾರೆ. ಆಗ ಮಕ್ಕಳು ಗೊತ್ತಿಲ್ಲಾ ಸರ್ ಎಂದು ತಮಿಳಿನಲ್ಲೇ ಹೇಳಿದ್ದಾರೆ. ಆಗ ಗಣೇಶ ಕೂರಿಸಿ ಖುಷಿ ಪಡಲಿ ಎಂದು ಶಾಸಕ 100 ರೂಪಾಯಿ ಕೊಟ್ಟಿದ್ದಾರೆ.
ಇದಾದ ಬಳಿಕ ನಿಮ್ಮ ಹೆಸರು ಏನು ಸರ್ ಎಂದು ಮಕ್ಕಳು ಕೇಳಿದ್ದಾರೆ. ಶಾಸಕ ತಮ್ಮ ಹೆಸರನ್ನ ಪೇಪರ್ ಮೇಲೆ ಬರೆಯುವಾಗ ಮಕ್ಕಳು ಶಾಕ್ ಆಗಿದ್ದಾರೆ. ಇವರು ಶಾಸಕ ಪ್ರಕಾಶ್ ಎಂದು ಮಕ್ಕಳು ಖುಷಿ ಪಟ್ಟಿದ್ದಾರೆ.ಒಳೆಳೆಯ ಗಣೇಶನನ್ನು ಇಡಿ ಎಂದು ಹೇಳಿದ್ದಾರೆ ಶಾಸಕರ ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಬಾರಿ ಗಣೇಶ ಚತುರ್ಥಿಯನ್ನು ಆಗಸ್ಟ್ 27ರಂದು ಆಚರಿಸಲಾಗುತ್ತದೆ.
Advertisement