
ಮಂಗಳೂರು: ಧರ್ಮಸ್ಥಳದ ಬುರುಡೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿಕೊಂಡು ಬಂದಿದ್ದ ದೂರದಾರನನ್ನೇ ಇದೀಗ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದು ಆತನ ಅಸಲಿ ಮುಖ ಬಹಿರಂಗಗೊಂಡಿದೆ. ಮಾಸ್ಕ್ ಮ್ಯಾನ್ ಎಂದೇ ಗುರುತಿಸಲಾಗುತ್ತಿದ್ದ ದೂರದಾರ ಅಸಲಿ ಮುಖ ಬಹಿರಂಗಗೊಂಡಿದ್ದು ಆತ ಯಾರೆಂಬುದು ಪತ್ತೆಯಾಗಿದೆ. ಹೌದು... ಇಷ್ಟು ದಿನ ಮಾಸ್ಕ್ ಹಾಕಿಕೊಂಡು ಹತ್ತಾರು ಕಡೆ ಶವಗಳನ್ನು ಹೂತ್ತಿದ್ದಾಗಿ ಹೇಳುತ್ತಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ ಎಂಬುದು ಪತ್ತೆಯಾಗಿದೆ.
ದೂರುದಾನ ಚಿನ್ನಯ್ಯ ಬಂಧನ ಬೆನ್ನಲ್ಲೇ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು, ಧರ್ಮಸ್ಥಳದ ವಿರುದ್ಧ ಪಿತೂರಿ ನಡೆದಿವೆ ಎಂಬ ಒಂದೊಂದೆ ಸಂಗತಿಗಳು ಹೊರಬರುತ್ತಿವೆ. ಇದು ಹಿಂದೂ ನಂಬಿಕೆಗಳ ಮೇಲೆ ಮಾಡಿದ ನೇರ ದಾಳಿ ಎಂದು ಹೇಳಿದ್ದಾರೆ.
ಇನ್ನು ಶ್ರೀಧರ್ಮಸ್ಥಳ ಮಂಜುನಾಥ ದೇವಸ್ಥಾನದ ಟ್ರಸ್ಟ್ ಇದೀಗ ಶಿವತಾಂಡವದ ಫೋಟೋ ಪೋಸ್ಟ್ ಮಾಡಿದೆ. ನಮೋ ಮಂಜುನಾಥ ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.
Advertisement