
ಬೆಂಗಳೂರು: ನಾಳೆ ಗೌರಿ ಹಬ್ಬ, ನಾಡಿದ್ದು ಗಣೇಶ ಹಬ್ಬ. ಇದಕ್ಕಾಗಿ ನಾಡಿನ ಜನತೆ ಭರ್ಜರಿ ಸಿದ್ದತೆ ಮಾಡಿಕೊಂಡಿದ್ದು, ಸಡಗರ- ಸಂಭ್ರಮದಿಂದ ಆಚರಿಸಲು ತಯಾರಿ ನಡೆಸಿದ್ದಾರೆ.
ಮಾರುಕಟ್ಟೆಯಲ್ಲಿ ತರಹೇವಾರಿ ಮೂರ್ತಿಗಳು ಲಗ್ಗೆ ಇಟ್ಟಿದ್ದು, ಖರೀದಿ ಭರಾಟೆ ಜೋರಾಗಿ ನಡೆಯುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ವಿಘ್ನ ವಿನಾಶಕ, ಪ್ರಥಮ ಪೂಜಿತನ ಅದ್ದೂರಿ ಆಚರಣೆಗೆ ಜನರು ಬೇಕಾದ ಅಗತ್ಯ ಸಿದ್ದತೆಯಲ್ಲಿ ತೊಡಗಿದ್ದಾರೆ.
ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿನ ಜನತೆಗೆ ಗೌರಿ - ಗಣೇಶ ಹಬ್ಬದ ಹಾರ್ದಿಕ ಶುಭಾಶಯ ಕೋರಿದ್ದಾರೆ.
ಜಲಚರಗಳಿಗೆ, ಪರಿಸರಕ್ಕೆ ಹಾನಿಕಾರಕವಾದ ರಾಸಾಯನಿಕಯುಕ್ತ ಗಣೇಶ ಮೂರ್ತಿಯ ಬದಲಿಗೆ ಮಣ್ಣಿನಿಂದಷ್ಟೇ ಮಾಡಿದ ಪರಿಸರಸ್ನೇಹಿ ಗಣೇಶನನ್ನು ಪೂಜಿಸೋಣ ಎಂದು ಕರೆ ನೀಡಿದ್ದಾರೆ.
ಹಬ್ಬವನ್ನು ಸಂಭ್ರಮ - ಸಡಗರದೊಂದಿಗೆ ಆಚರಿಸುವ ಜೊತೆಗೆ ಪರಿಸರ ಕಾಳಜಿಯನ್ನು ಮರೆಯದಿರೋಣ. ವಿಘ್ನನಿವಾರಕನಾದ ಗಣೇಶನು ನಿಮ್ಮೆಲ್ಲಾ ಕಷ್ಟಗಳನ್ನು ಕಳೆದು ಸುಖ ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.
Advertisement