
ಬೆಂಗಳೂರು: ಆನ್ಲೈನ್ ಬೆಟ್ಟಿಂಗ್ ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಚಿತ್ರದುರ್ಗ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅವರನ್ನು ವಿಶೇಷ ಕೋರ್ಟ್ ಮತ್ತೆ ಆರು ದಿನ ಜಾರಿ ನಿರ್ದೇಶನಾಲಯ(ED)ದ ವಶಕ್ಕೆ ನೀಡಿ ಗುರುವಾರ ಆದೇಶ ಹೊರಡಿಸಿದೆ.
ವಿರೇಂದ್ರ ಪಪ್ಪಿ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಇಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮುಂದೆ ಆರೋಪಿಯನ್ನು ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗಜಾನನ ಭಟ್ ಅವರು, ಕಾಂಗ್ರೆಸ್ ಶಾಸಕನನ್ನು ಮತ್ತೆ ಆರು ದಿನ ಇಡಿ ವಶಕ್ಕೆ ನೀಡಿ ಆದೇಶಿಸಿದರು.
ಈ ವೇಳೆ ಇಡಿ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು, ಆರೋಪಿ ವಿರೇಂದ್ರ ಪಪ್ಪಿ ಅವರಿಗೆ ನಿದ್ದೆಗೆ ಸಮಯ ನೀಡಬೇಕು. ಶುದ್ಧ ಕುಡಿಯುವ ನೀರು, ಔಷಧ, ವಿಶ್ರಾಂತಿಗೆ ಅವಕಾಶ ಸೇರಿದಂತೆ ಮೂಲಸೌಕರ್ಯ ಒದಗಿಸಬೇಕೆಂದು ಸೂಚನೆ ನೀಡಿದರು. ಅಲ್ಲದೇ ಪ್ರತಿದಿನ 30 ನಿಮಿಷ ವಕೀಲರ ಭೇಟಿಗೆ ಅವಕಾಶ ನೀಡುವಂತೆ ಕೋರ್ಟ್ ಸೂಚಿಸಿದೆ.
ಬಂಧಿಸುವಾಗ ಆರೋಪಿ ವಿರುದ್ಧ ಯಾವ ಕೇಸ್‌ಗಳನ್ನ ಉಲ್ಲೇಖಿಸಿದ್ದೀರಿ? 2011ರ ಕೇಸ್ ರದ್ದಾಗಿದೆ, 2016ರ ಸಿಬಿಐ ಕೇಸ್ ಸಹ ಕ್ಲೋಸ್ ಆಗಿದೆ. ಆರೋಪಿ ಬಂಧನ ನಂತರ ಯಾವುದೋ ಕೇಸ್‌ಗಳನ್ನ ಉಲ್ಲೇಖಿಸುತ್ತಿದ್ದೀರಿ. ಯಾವ ಪ್ರಕರಣ ಆಧರಿಸಿ ಇಸಿಐಆರ್ ದಾಖಲಿಸಿದ್ದೀರಿ? ಕೋರ್ಟ್‌ನ್ನು ಏಕೆ ಮಿಸ್ ಲೀಡ್ ಮಾಡುತ್ತಿದ್ದೀರಿ ಎಂದು ಇಡಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳ ಕೋರ್ಟ್‌ನ ಜಡ್ಜ್ ಗಜಾನನ ಟ್ ತರಾಟೆಗೆ ತೆಗೆದುಕೊಂಡರು. ಬಳಿಕ ಇಡಿ ಪರ ವಕೀಲ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು.
Advertisement