ಕಲಬುರಗಿ: 'ಸಿದ್ರಾಮುಲ್ಲಾಖಾನ್' ಎಂದು ಸ್ಟೇಟಸ್ ಹಾಕಿದ PDO ವಿರುದ್ಧ ಎಫ್ಐಆರ್ ದಾಖಲು

'ಸಿದ್ರಾಮುಲ್ಲಾಖಾನ್' ಎಂದು ವಾಟ್ಸ್ ಆಪ್ ಸ್ಟೇಟಸ್‌ ಹಾಕಿದ್ದ ಪ್ರವೀಣಕುಮಾರ್ ವಿರುದ್ಧ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಎಫ್ಐಆರ್ ದಾಖಲಿಸಲಾಗಿದೆ.
Derogatory post against CM Siddaramaiah: FIR lodged against PDO
ಪ್ರವೀಣಕುಮಾರ್ ಉಡಗಿ - ಸಿದ್ದರಾಮಯ್ಯ
Updated on

ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅವಹೇಳನಕಾರಿಯಾಗಿ ವಾಟ್ಸ್ ಆಪ್ ಸ್ಟೇಟಸ್ ಹಾಕಿದ ಆರೋಪದ ಮೇಲೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸುಂಟನೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಪ್ರವೀಣಕುಮಾರ್ ಉಡಗಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

'ಸಿದ್ರಾಮುಲ್ಲಾಖಾನ್' ಎಂದು ವಾಟ್ಸ್ ಆಪ್ ಸ್ಟೇಟಸ್‌ ಹಾಕಿದ್ದ ಪ್ರವೀಣಕುಮಾರ್ ವಿರುದ್ಧ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಎಫ್ಐಆರ್ ದಾಖಲಿಸಲಾಗಿದೆ.

ಪ್ರವೀಣಕುಮಾರ್ ಅವರು ಆಗಸ್ಟ್ 21ರಂದು 'ಸಿದ್ರಾಮುಲ್ಲಾಖಾನ್' ಎಂಬ ಬರಹದ ಜೊತೆಗೆ ಸಿದ್ದರಾಮಯ್ಯ ಅವರ ತಲೆಗೆ ಮುಸ್ಲಿಮರು ಧರಿಸುವ ಟೊಪ್ಪಿ ಹಾಕಿರುವಂತೆ ಎಡಿಟ್ ಮಾಡಲಾದ ಚಿತ್ರವನ್ನು ಸ್ಟೇಟಸ್‌ ಇಟ್ಟುಕೊಂಡಿದ್ದನ್ನು ಗಮಿನಿಸಿದ ಸುಂಟನೂರ ಗ್ರಾಮದ ಮುಖಂಡ ಮಲ್ಲಿಕಾರ್ಜುನ ಡಣ್ಣೂರ ಅವರು ಪಿಡಿಒ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.

Derogatory post against CM Siddaramaiah: FIR lodged against PDO
ಸಂತ ಶಿಶುನಾಳ ಷರೀಫರ ಪರಂಪರೆ ನಮ್ಮದು: 'ಸಿದ್ರಾಮುಲ್ಲಾಖಾನ್ ಎಂದು ಮುಸ್ಲಿಮ್ ಹೆಸರು ಸೇರಿಸಿರುವ ಬಗ್ಗೆ ನನಗೇನು ಬೇಸರವಿಲ್ಲ!

ಪಿಡಿಒ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಗ್ರಾಮದ ಮುಖಂಡರಾದ ಮಹಾಲಿಂಗಪ್ಪ ಹರವಾಳ, ಆಳಂದ ತಾಲೂಕು ಕುರುಬರ ಸಂಘದ ಯುವ ಘಟಕದ ಅಧ್ಯಕ್ಷ ಬೀರಣ್ಣ ಪೂಜಾರಿ ಸೇರಿ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಕುರಿತು ನಿಂಬರ್ಗಾ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com