
ಬೆಳಗಾವಿ: ಅಕ್ರಮಗಳ ವಿರುದ್ಧ ವ್ಯಾಪಕ ಕ್ರಮ ಕೈಗೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರ ಗೋಕಾಕ್ ತಾಲ್ಲೂಕಿನ ಶಿಂದಿಕುರಬೆಟ್ ಗ್ರಾಮ ಪಂಚಾಯತ್‌ನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ 26 ಸದಸ್ಯರನ್ನು ರಾಜ್ಯ ಸರ್ಕಾರ ವಜಾಗೊಳಿಸಿದೆ.
ಅಕ್ರಮ ಆಸ್ತಿ ವರ್ಗಾವಣೆ ಆರೋಪ ಸಾಬೀತಾದ ಕಾರಣ ಎಲ್ಲಾ 28 ಸದಸ್ಯರನ್ನು ವಜಾಗೊಳಿಸಲಾಗಿದೆ, ಜೊತೆಗೆ ಮುಂದಿನ ಆರು ವರ್ಷಗಳ ಕಾಲ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಲಾಗಿದೆ. ದಾಖಲೆಗಳ ಸರಿಯಾದ ಪರಿಶೀಲನೆಯಿಲ್ಲದೆ ಪಂಚಾಯತ್ ಆಸ್ತಿ ವರ್ಗಾವಣೆಗೆ ಅನುಮೋದನೆ ನೀಡಿದೆ ಎಂದು ತನಿಖೆ ದೃಢಪಡಿಸಿದ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಈ ಆದೇಶ ಹೊರಡಿಸಿದ್ದಾರೆ.
ಈ ಉಲ್ಲಂಘನೆಗಳು ಫೆಬ್ರವರಿ 25 ಮತ್ತು ಮಾರ್ಚ್ 25, 2022 ರಂದು ನಡೆದ ಸಾಮಾನ್ಯ ಸಭೆಗಳಿಗಳಲ್ಲಿ ಬೆಳಕಿಗೆ ಬಂದವು. ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಸಮ್ಮುಖದಲ್ಲಿ, ಸದಸ್ಯರು ಭೂ ದಾಖಲೆಗಳ ಸರಿಯಾದ ಪರಿಶೀಲನೆಯಿಲ್ಲದೆ ಆಸ್ತಿ ವರ್ಗಾವಣೆಗೆ ಅನುಮೋದನೆ ನೀಡಿದರು. ಪರಿಣಾಮವಾಗಿ, ಶಾಂತಾ ನಾಗಪ್ಪ ಪೋತದಾರ ಅವರ ಹೆಸರಿನಲ್ಲಿರುವ ಆಸ್ತಿಯನ್ನು ಕಾನೂನುಬಾಹಿರವಾಗಿ ರಾಮಚಂದ್ರ ದಾನಪ್ಪ ಪೋತದಾರ ಅವರಿಗೆ ವರ್ಗಾಯಿಸಲಾಯಿತು. ತನಿಖೆಯ ನಂತರ, ಆರೋಪಗಳನ್ನು ಎತ್ತಿಹಿಡಿಯಲಾಯಿತು.
ಪಂಚಾಯತ್ ಅಧ್ಯಕ್ಷೆ ರೇಣುಕಾ ಈರಪ್ಪ ಪಾಟೀಲ್, ಉಪಾಧ್ಯಕ್ಷ ಭೀಮಪ್ಪ ಯಲ್ಲಪ್ಪ ಬರನಾಳಿ ವಜಾಗೊಂಡವರಲ್ಲಿ ಸೇರಿದ್ದಾರೆ. ಶಿಂದಿಕುರಬೆಟ್ ಗ್ರಾಮ ಪಂಚಾಯತ್ ತನ್ನ ಎಲ್ಲಾ ಸದಸ್ಯರನ್ನು ವಜಾಗೊಳಿಸಿ ಶಿಂದಿಕುರಬೆಟ್ ಗ್ರಾಮ ಪಂಚಾಯತ್ ವಿಸರ್ಜನೆಗೊಂಡಿದೆ.
Advertisement