ಉಡುಪಿಯಲ್ಲಿ ಪ್ರಧಾನಿ ಕಾರ್ಯಕ್ರಮಕ್ಕೆ ಪ್ರಮೋದ್ ಮಧ್ವರಾಜ್ ಗೈರು: ಬಿಜೆಪಿ ನಾಯಕರಿಂದ ಉದ್ದೇಶಪೂರ್ವಕ ನಿರ್ಲಕ್ಷ್ಯ!

ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಆಶಯವನ್ನು ಈಡೇರಿಸಲು ಮಧ್ವರಾಜ್ ಕಿಟಕಿಗೆ ಚಿನ್ನದ ಲೇಪನ ಮತ್ತು ಪಕ್ಕದ ಕನಕದಾಸ ಗುಡಿಯ ನವೀಕರಣವನ್ನು ಕೈಗೊಂಡಿದ್ದರು.
Pramod madhvaraj
ಪ್ರಮೋದ್ ಮಧ್ವರಾಜ್
Updated on

ಉಡುಪಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕೃಷ್ಣನಗರಿ ಉಡುಪಿ ಭೇಟಿ, ಅಭೂತಪೂರ್ವ ಯಶಸ್ಸನ್ನು ಪಡೆದಿತ್ತು. ಜಿಲ್ಲೆಯ ಜನತೆಗೆ ಅಪರೂಪ ಎನ್ನುವಂತೆ, ರೋಡ್ ಶೋಗೆ, ಜನರು ಇಕ್ಕೆಲಗಳಲ್ಲಿ ನಿಂತು, ಪುಷ್ಪವೃಷ್ಟಿಯ ಮೂಲಕ ಸ್ವಾಗತವನ್ನು ಕೋರಿದ್ದರು. ಆದರೆ, ಜಿಲ್ಲಾ ಬಿಜೆಪಿ ಘಟಕದಲ್ಲಿ ಏನಾದರೂ ಷಡ್ಯಂತ್ರ ನಡೆದಿತ್ತೇ ಎನ್ನುವ ವಿಚಾರ, ರಾಜ್ಯ ಬಿಜೆಪಿಯಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.

ನವೆಂಬರ್ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀ ಕೃಷ್ಣ ಮಠದಲ್ಲಿ ಚಿನ್ನದ ಲೇಪಿತ 'ಕನಕನ ಕಿಂಡಿ'ಯನ್ನು ಅನಾವರಣಗೊಳಿಸುವ ಸಂದರ್ಭದಲ್ಲಿ ಮಾಜಿ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರ ಗೈರು ಸಾರ್ವಜನಿಕ ವಲಯಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕನಕನ ಕಿಂಡಿ ಎಂದರೆ 16 ನೇ ಶತಮಾನದಲ್ಲಿ ಸಂತ-ಕವಿ ಕನಕದಾಸರು ಶ್ರೀಕೃಷ್ಣನ 'ದರ್ಶನ' ಪಡೆದಿದ್ದಾರೆಂದು ನಂಬಲಾದ ಕಿಟಕಿಯಾಗಿದೆ.

ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಆಶಯವನ್ನು ಈಡೇರಿಸಲು ಮಧ್ವರಾಜ್ ಕಿಟಕಿಗೆ ಚಿನ್ನದ ಲೇಪನ ಮತ್ತು ಪಕ್ಕದ ಕನಕದಾಸ ಗುಡಿಯ ನವೀಕರಣವನ್ನು ಕೈಗೊಂಡಿದ್ದರು. ನವೆಂಬರ್ 26 ರಂದು, ಮಧ್ವರಾಜ್ ಅವರು ಕಾಮಗಾರಿಯನ್ನು ಪರಿಶೀಲಿಸಲು ಮಠಕ್ಕೆ ಭೇಟಿ ನೀಡಿದರು.

ಪ್ರಧಾನಿ ಸ್ವತಃ ಕನಕದಾಸರ ಗುಡಿಯಲ್ಲಿರುವ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿರುವುದು "ಪವಾಡ" ಎಂದು ಪ್ರಮೋದ್ ಮಧ್ವರಾಜ್ ಬಣ್ಣಿಸಿದರು. ಇದನ್ನು 1965 ರಲ್ಲಿ ಅವರ ತಂದೆ ಮಲ್ಪೆ ಮಧ್ವರಾಜ್ ನಿರ್ಮಿಸಿದ್ದರು ಮತ್ತು ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಉದ್ಘಾಟಿಸಿದ್ದರು. ಇದನ್ನು ಸ್ಮರಣೀಯ ಕ್ಷಣ ಎಂದು ಅವರು ಬಣ್ಣಿಸಿದರು.

Pramod madhvaraj
ಸಂಸತ್ ಚಳಿಗಾಲದ ಅಧಿವೇಶನ: ಸೋಲಿನ ಭೀತಿ ಚರ್ಚೆಗೆ ಕಾರಣವಾಗಬಾರದು: ವಿಪಕ್ಷಗಳಿಗೆ ಪ್ರಧಾನಿ ಮೋದಿ ಟಾಂಗ್!

ಸಾಮಾಜಿಕ ಮಾಧ್ಯಮ ತಂಡವನ್ನು ಹೊಂದಿರುವ ಬಿಜೆಪಿ ನಾಯಕರೊಬ್ಬರು ಈ ಸಂದರ್ಭದಲ್ಲಿ ಉಪಸ್ಥಿತರಿಲ್ಲದಿರುವುದು ಅಚ್ಚರಿ ಮೂಡಿಸಿದೆ ಎಂದು ಪತ್ರಕರ್ತ ರಾಜರಾಮ್ ತಲ್ಲೂರು ಹೇಳಿದ್ದಾರೆ. ಪ್ರಮೋದ್ ಮದ್ವರಾಜ್ ಅವರನ್ನು ಕಾರ್ಯಕ್ರಮದಿಂದ ಹೊರಗಿಡುವುದು "ದೊಡ್ಡ ತಪ್ಪು" ಎಂದು ಸಾಮಾಜಿಕ ಕಾರ್ಯಕರ್ತ ಡಾ. ಪಿ.ವಿ. ಭಂಡಾರಿ ಬಣ್ಣಿಸಿದ್ದಾರೆ.

ಆಸ್ಪತ್ರೆಗಳಿಗೆ ನೀಡುವ ಕೊಡುಗೆಗಳು ಧಾರ್ಮಿಕ ದೇಣಿಗೆಗಳಿಗಿಂತ ಬಡವರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತವೆ ಎಂದು ಶ್ರೀ ರಾಮ ಸೇನೆ ಮಂಗಳೂರು ವಿಭಾಗೀಯ ಅಧ್ಯಕ್ಷ ಜಯರಾಮ್ ಅಂಬೆಕಲ್ಲು ಹೇಳಿದರು, ಆದರೆ ಮಧ್ವರಾಜ್ ಅವರನ್ನು ಆಹ್ವಾನಿಸಬೇಕಿತ್ತು ಎಂದು ಅವರು ಹೇಳಿದರು.

ಚಿನ್ನದ ಲೇಪನ ಯೋಜನೆ ಮತ್ತು ಕನಕದಾಸ ಗುಡಿಯ ದುರಸ್ತಿ ಎರಡನ್ನೂ ಶ್ರೀಗಳ ಇಚ್ಛೆಯಂತೆ ತಾವು ಕೈಗೆತ್ತಿಕೊಂಡಿರುವುದಾಗಿ ಮಧ್ವರಾಜ್ ಟಿಎನ್‌ಐಇಗೆ ತಿಳಿಸಿದರು. ಸಮಾರಂಭಕ್ಕೆ ಆಹ್ವಾನಿಸದಿದ್ದಕ್ಕೆ ತಮಗೆ ಯಾವುದೇ ಬೇಸರವಿಲ್ಲ, ಆದರೆ ಆಹ್ವಾನಿಸಿದ್ದರೆ ಸಂತೋಷವಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

ಪ್ರಧಾನಿಯವರ ಕಾರ್ಯಕ್ರಮದ ಸಮಯದಲ್ಲಿ ಬಿಜೆಪಿಯಿಂದ ಅವರನ್ನು ಕಡೆಗಣಿಸಲಾಗಿದೆ ಎಂಬ ಊಹಾಪೋಹದ ಬಗ್ಗೆ ಮಾತನಾಡಿದ ಮಧ್ವರಾಜ್, ಆ ಕಾರ್ಯಕ್ರಮದಲ್ಲಿ ತಮ್ಮನ್ನು ಸೇರಿಸಿಕೊಳ್ಳುವಂತೆ ಪಕ್ಷವನ್ನು ಎಂದಿಗೂ ಕೇಳಿಕೊಂಡಿಲ್ಲ ಮಠದ ಅಧಿಕಾರಿಗಳೊಂದಿಗೆ ಮಾತ್ರ ಅವರ ಸಂವಹನವಿತ್ತು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com