ಕೊಡಗು: ಕಾಫಿ ಎಸ್ಟೇಟ್‌ನಲ್ಲಿ ಕಾಣೆಯಾಗಿದ್ದ 2 ವರ್ಷದ ಬಾಲಕಿಯನ್ನು ಪತ್ತೆ ಹಚ್ಚಿದ ಸಾಕು ನಾಯಿ!

ಶನಿವಾರ ನಾಗಿಣಿ ಮತ್ತು ಸುನಿಲ್ ಎಸ್ಟೇಟ್ ಕೆಲಸಕ್ಕೆ ಹೋದಾಗ ಸುನನ್ಯಾ ಅವರನ್ನು ಇತರ ಮಕ್ಕಳೊಂದಿಗೆ ಆಟವಾಡಲು ಬಿಡಲಾಗಿತ್ತು.
Two-year-old kid Sunanya along with people who were involved in the search.
ಶೋಧ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದ ತಂಡ
Updated on

ಮಡಿಕೇರಿ: ಎಸ್ಟೇಟ್ ಹೌಸ್‌ನಿಂದ ಕಾಣೆಯಾಗಿದ್ದ ಎರಡು ವರ್ಷದ ಬಾಲಕಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸಾಕು ನಾಯಿಯ ಸಹಾಯದಿಂದ ಪತ್ತೆ ಹಚ್ಚಿ ಮತ್ತೆ ಆಕೆಯ ಪೋಷಕರ ಮಡಿಲಿಗೆ ಸಾಕಿದ್ದಾರೆ.

ದಕ್ಷಿಣ ಕೊಡಗಿನ ಬಿ ಶೆಟ್ಟಿಗೇರಿ ಗ್ರಾಮದ ಅರಣ್ಯದ ಅಂಚಿನಲ್ಲಿರುವ ಕೊಂಗಣ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ಜೇನು ಸಾಕಣೆ ಕುಟುಂಬದಿಂದ ಬಂದ ಎಸ್ಟೇಟ್ ಕಾರ್ಮಿಕರಾದ ಸುನಿಲ್ ಮತ್ತು ನಾಗಿಣಿ ಐದು ದಿನಗಳ ಹಿಂದೆ ಬಿ ಶೆಟ್ಟಿಗೇರಿಯ ಖಾಸಗಿ ಎಸ್ಟೇಟ್‌ನಲ್ಲಿ ಕೆಲಸ ಮಾಡಲು ಬಂದಿದ್ದರು. ದಂಪತಿಗೆ ಎರಡು ವರ್ಷದ ಸುನನ್ಯಾ ಎಂಬ ಮಗಳಿದ್ದಾಳೆ.

ಮೂಲಗಳ ಪ್ರಕಾರ, ದಂಪತಿಗಳು ಕೆಲಸಕ್ಕೆ ಹೋದಾಗ ಮಗುವನ್ನು ಎಸ್ಟೇಟ್ ಲೈನ್ ಮನೆಯ ಬಳಿ ಎಸ್ಟೇಟ್ ಕಾರ್ಮಿಕರ ಇತರ ಮಕ್ಕಳೊಂದಿಗೆ ಬಿಟ್ಟು ಹೋಗಿದ್ದರು. ಶನಿವಾರ ನಾಗಿಣಿ ಮತ್ತು ಸುನಿಲ್ ಎಸ್ಟೇಟ್ ಕೆಲಸಕ್ಕೆ ಹೋದಾಗ ಸುನನ್ಯಾ ಅವರನ್ನು ಇತರ ಮಕ್ಕಳೊಂದಿಗೆ ಆಟವಾಡಲು ಬಿಡಲಾಗಿತ್ತು. ಆದಾಗ್ಯೂ, ದಂಪತಿಗಳು ಕೆಲಸದಿಂದ ಹಿಂತಿರುಗಿದಾಗ, ಸುನನ್ಯಾ ಕಾಣೆಯಾಗಿದ್ದಳು. ಸುನನ್ಯಾ ಜೊತೆಗಿದ್ದ ಇತರ ಮಕ್ಕಳಿಗೂ ಆಕೆ ಎಲ್ಲಿಗೆ ಹೋದಳೆಂದು ತಿಳಿದಿರಲಿಲ್ಲ.

ಈ ವೇಳೆ ಶೋಧ ಕಾರ್ಯಾಚರಣೆ ನಡೆಸಲಾಯಿತು, ದಂಪತಿಗಳು, ಇತರ ಎಸ್ಟೇಟ್ ಕಾರ್ಮಿಕರೊಂದಿಗೆ ಎಲ್ಲೆಜೆದ್ಯಂತ ಸುನನ್ಯಾ ಅವರನ್ನು ಹುಡುಕಲು ಪ್ರಾರಂಭಿಸಿದರು. ಆಕೆಯನ್ನು ಪತ್ತೆಹಚ್ಚಲು ಸಾಧ್ಯವಾಗದಿದ್ದಾಗ, ಎಸ್ಟೇಟ್ ಮಾಲೀಕರಿಗೆ ಮಾಹಿತಿ ನೀಡಲಾಯಿತು ಮತ್ತು ಗೋಣಿಕೊಪ್ಪಲ್ ಪೊಲೀಸರಿಗೆ ದೂರು ನೀಡಲಾಯಿತು.

Two-year-old kid Sunanya along with people who were involved in the search.
ಬೆಂಗಳೂರು: ಖಾಸಗಿ ಪುನರ್ವಸತಿ ಕೇಂದ್ರದಲ್ಲಿ ಯುವಕನ ಶವ ಪತ್ತೆ; ನಾಲ್ವರು ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲು

ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಅರಣ್ಯಾಧಿಕಾರಿಗಳು ಹುಲಿಯ ಹೆಜ್ಜೆಗುರುತುಗಳನ್ನು ಸಹ ಪತ್ತೆ ಹಚ್ಚಿದರು. ಅರಣ್ಯದ ಅಂಚಿನಲ್ಲಿ ಕಾಡು ಪ್ರಾಣಿಗಳು ಅರ್ಧ ತಿಂದುಹೋದ ಮೃತದೇಹವನ್ನು ಅವರು ಕಂಡುಕೊಂಡರು. ಈ ವೇಳೆ ಆತಂಕಗೊಂಡ ತಂಡವು ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿತು. 30 ಕ್ಕೂ ಹೆಚ್ಚು ಅರಣ್ಯಾಧಿಕಾರಿಗಳು ಮಧ್ಯರಾತ್ರಿಯವರೆಗೆ ಹುಡುಕಾಟವನ್ನು ಮುಂದುವರೆಸಿದರು.

ಗ್ರಾಮಸ್ಥರು ಮತ್ತು ಬಿ ಶೆಟ್ಟಿಗೇರಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೊಲ್ಲಿರ ಬೋಪಣ್ಣ ಮತ್ತು ಅವರ ಪರಿಚಯಸ್ಥ ಅನಿಲ್ ಕಾಳಪ್ಪ ಭಾನುವಾರ ಬೆಳಿಗ್ಗೆ ಶೋಧ ಕಾರ್ಯಾಚರಣೆಯಲ್ಲಿ ಸೇರಿಕೊಂಡರು. ಅನಿಲ್ ತನ್ನ ಸಾಕು ನಾಯಿಗಳಾದ ಓರಿಯೊ, ಡ್ಯೂಕ್, ಲಾಲಾ ಮತ್ತು ಚುಕ್ಕಿಯನ್ನು ಶೋಧ ಕಾರ್ಯಾಚರಣೆಗೆ ಕರೆದೊಯ್ದರು. ನಾಯಿಗಳು ಎಸ್ಟೇಟ್ ಪ್ರದೇಶವನ್ನು ಪರಿಶೀಲಿಸಿದವು, ಸಾಕು ನಾಯಿಗಳಲ್ಲಿ ಒಂದಾದ ಓರಿಯೊ ಎಸ್ಟೇಟ್‌ನ ಎತ್ತರದ ಸ್ಥಳದಿಂದ ಜೋರಾಗಿ ಬೊಗಳಲು ಪ್ರಾರಂಭಿಸಿತು.

ಗ್ರಾಮಸ್ಥರು ಸ್ಥಳಕ್ಕೆ ಧಾವಿಸುವಾಗ, ಸುನನ್ಯಾ ಎಸ್ಟೇಟ್ ಮಿತಿಯಲ್ಲಿರುವ ಕಾಫಿ ಗಿಡದ ಬಳಿ ಕುಳಿತಿದ್ದಳು, ಅರಣ್ಯದ ಅಂಚಿನಲ್ಲಿ ಇಡೀ ರಾತ್ರಿ ಒಂಟಿಯಾಗಿ ಕಳೆದಿದ್ದಳು. ಗೋಣಿಕೊಪ್ಪಲು ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಪ್ರದೀಪ್ ಕುಮಾರ್, ಇಂತಹ ಘಟನೆಗಳನ್ನು ತಪ್ಪಿಸಲು ಪೋಷಕರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು.

ಅರಣ್ಯ ಇಲಾಖೆ ಡಿಆರ್‌ಎಫ್‌ಒ ಶ್ರೀಧರ್, ನಾಗೇಶ್, ದಿವಾಕರ್, ಮಂಜುನಾಥ್, ಕಿರಣ್ ಆಚಾರ್ಯ, ಗಸ್ತು ಅರಣ್ಯ ರಕ್ಷಕರಾದ ಪೊನ್ನಪ್ಪ, ಸೋಮಣ್ಣ ಗೌಡ, ಆಂಟನಿ ಪ್ರಕಾಶ್ ಮತ್ತು ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಎಸಿಎಫ್ ನೆಹರು ಮತ್ತು ಇತರರು ಸ್ಥಳಕ್ಕೆ ಭೇಟಿ ನೀಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com