

ಬೆಂಗಳೂರು: ಮಾಗಡಿ ರಸ್ತೆಯನ್ನು ಮೈಸೂರು ರಸ್ತೆಗೆ ಸಂಪರ್ಕಿಸುವ ಆರು ಪಥಗಳ ಮೇಜರ್ ಆರ್ಟೀರಿಯಲ್ ರಸ್ತೆ (MAR) ಕಾಮಗಾರಿ ವೇಗ ಪಡೆದುಕೊಂಡಿದ್ದು, ಜನವರಿಯಲ್ಲಿ ಮೂರು ಪಥಗಳು ಸಾರ್ವಜನಿಕರಿಗೆ ಮುಕ್ತವಾಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಅಧಿಕಾರಿಗಳು ತಿಳಿಸಿದ್ದಾರೆ.
ಬಾಕ್ಸ್-ಪುಶ್ ತಂತ್ರಜ್ಞಾನವನ್ನು ಬಳಸಿಕೊಂಡು ನಾಡಪ್ರಭು ಕೆಂಪೇಗೌಡ ಲೇಔಟ್ ಅನ್ನು ಸಂಪರ್ಕಿಸುವ ಅಂಡರ್‌ಪಾಸ್ ನಿರ್ಮಾಣವಾಗುತ್ತಿದ್ದು, ಉಕ್ಕಿನ ಗಿರ್ಡರ್ ಅಳವಡಿಸುವ ಕಾಮಗಾರಿ ಮುಗಿದಿದೆ. ಸ್ಟೀಲ್ ಗಿರ್ಡರ್‌ಗಳ ಅಳವಡಿಕೆ ಮುಗಿದ ನಂತರ ರಸ್ತೆ ಕಾಮಗಾರಿ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರಿಂದಾಗಿ ಹಳಿಯಲ್ಲಿ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಗಿತ್ತು. ಬೆಂಗಳೂರು ಮತ್ತು ಮೈಸೂರು ನಡುವೆ ಚಲಿಸುವ ಎರಡು ಹಳಿಗಳಲ್ಲಿ ಒಂದರ ಕೆಳಗೆ ಗಿರ್ಡರ್ ಅಳವಡಿಕೆಯೊಂದಿಗೆ ರೈಲುಗಳು ಈಗ ಸುರಕ್ಷಿತವಾಗಿ ಮೇಲೆ ಚಲಿಸಬಹುದಾಗಿದೆ. ಆದರೆ ಕೆಳಗೆ ರಸ್ತೆ ಅಗೆಯುವಿಕೆ ಮತ್ತು ನಿರ್ಮಾಣ ಮುಂದುವರಿಯುತ್ತದೆ.
ಎರಡೂ ರೈಲ್ವೆ ಹಳಿಗಳಲ್ಲಿ ಉಕ್ಕಿನ ಗಿರ್ಡರ್ ಅಳವಡಿಸಿದ ನಂತರ, ಬಿಡಿಎ ಬಾಕ್ಸ್-ಪುಶ್ ತಂತ್ರಜ್ಞಾನ ಪ್ರಕ್ರಿಯೆಯನ್ನು ಆರಂಭಿಸಲಿದೆ. MAR ನಲ್ಲಿ ವಾಹನಗಳ ಸುಗಮ ಸಂಚಾರಕ್ಕಾಗಿ ಅಂಡರ್‌ಪಾಸ್ ನಿರ್ಮಿಸಲು ಕಾಂಕ್ರೀಟ್ ಬಾಕ್ಸ್ ಗಳನ್ನು ರೈಲ್ವೆ ಮಾರ್ಗದ ಕೆಳಗೆ ಇರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಗಿರ್ಡರ್ ಅಳವಡಿಕೆ ಮತ್ತು ಬಾಕ್ಸ್-ಪುಶ್ ಕಾಮಗಾರಿ ಚುರುಕಾಗಿ ನಡೆದರೆ ಮೊದಲ ಮೂರು ಲೇನ್‌ಗಳು ಜನವರಿಯಲ್ಲಿ ಸಾರ್ವಜನಿಕರಿಗೆ ಮುಕ್ತವಾಗುವ ಸಾಧ್ಯತೆಯಿದೆ ಎಂದು ಯೋಜನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಂಡರ್‌ಪಾಸ್ ಪೂರ್ಣಗೊಂಡ ನಂತರ, ಕಾರಿಡಾರ್ ಅನ್ನು ಸಿಗ್ನಲ್ ಮುಕ್ತವಾಗಿಸಲು ಕ್ಲೋವರ್‌ಲೀಫ್ ಇಂಟರ್‌ಚೇಂಜ್ ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಭಾಗವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೆತ್ತಿಕೊಳ್ಳುತ್ತದೆ. ಯೋಜನೆ ಪೂರ್ಣಗೊಂಡ ಬಳಿಕ ಈ ರಸ್ತೆ ದಕ್ಷಿಣ ಮತ್ತು ಪಶ್ಚಿಮ ಬೆಂಗಳೂರು ನಡುವಿನ ಪ್ರಯಾಣದ ಅವಧಿಯನ್ನು 60 ನಿಮಿಷಗಳಿಂದ 10 ನಿಮಿಷಗಳಿಗೆ ಕಡಿಮೆ ಮಾಡುವ ನಿರೀಕ್ಷೆಯಿದೆ. ಈ ಯೋಜನೆ ನವೆಂಬರ್ ತಿಂಗಳೊಳಗೆ ಮುಗಿಸಲು ಗಡುವು ನೀಡಲಾಗಿತ್ತು.
Advertisement