

ದಾವಣಗೆರೆ: ಕಳೆದ ರಾತ್ರಿ ಏಕಾಂಗಿಯಾಗಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ಎರಡು ರಾಟ್ ವೀಲರ್ ನಾಯಿಗಳು ದಾಳಿ ಮಾಡಿದ್ದು ಗಂಭೀರವಾಗಿ ಗಾಯಗೊಂಡಿದ್ದ ಗೃಹಿಣಿ ಅನಿತಾ ಸಾವನ್ನಪ್ಪಿದ್ದಾಳೆ. ರಾಷ್ಟ್ರೀಯ ಹೆದ್ದಾರಿ 48ರ ದಾವಣಗೆರೆಯ ಹೊನ್ನೂರು ಗೊಲ್ಲರಹಟ್ಟಿಯ ಗ್ರಾಮಕ್ಕೆ ತಡರಾತ್ರಿ ನಡೆದುಕೊಂಡು ಹೋಗುತ್ತಿದ್ದ ಅನಿತಾ ಮೇಲೆ ಎರಡು ನಾಯಿಗಳು ದಾಳಿ ಮಾಡಿತ್ತು. ವ್ಯಕ್ತಿಯೊಬ್ಬ ನಾಯಿಗಳನ್ನು ಸಾಕಲಾಗದೇ ಅವುಗಳನ್ನು ತಂದು ಗೊಲ್ಲರಹಟ್ಟಿ ಕ್ರಾಸ್ ಬಳಿ ಬಿಟ್ಟು ಹೋಗಿದ್ದನು. ದುರಂತವೆಂದರೆ ಅನಿತಾ ಪತಿ ಐದು ವರ್ಷಗಳ ಹಿಂದೆ ಸಾವನ್ನಪ್ಪಿದ್ದು ಇದೀಗ ಅನಿತಾ ಸಹ ಮೃತಪಟ್ಟಿರುವುದರಿಂದ ಆಕೆಯ ಮೂವರು ಮಕ್ಕಳ ಅನಾಥವಾಗಿವೆ. ನಾಯಿ ದಾಳಿ ಗ್ರಾಮಸ್ಥರ ಭಯಕ್ಕೂ ಕಾರಣವಾಗಿತ್ತು. ಕೊನೆಗೂ ಗ್ರಾಮಸ್ಥರು ಹರಸಾಹಸ ಪಟ್ಟು ಎರಡು ನಾಯಿಗಳನ್ನು ಸೆರೆ ಹಿಡಿದಿದ್ದಾರೆ.
Advertisement