

ಬೆಳಗಾವಿ: ತನ್ನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಇಸ್ಲಾಮ್ ಗೆ ಮತಾಂತರವಾಗುವಂತೆ ಹಿಂಸಿಸುತ್ತಿದ್ದದ್ದನ್ನು ತಡೆಯಲಾರದೇ ವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ರಾಮದುರ್ಗದಲ್ಲಿ ವರದಿಯಾಗಿದೆ.
ಮಕ್ತುಮಸಾಬ್ ಪಾಟೀಲ್ ಎಂಬಾತನ ಈ ಕಿರುಕುಳಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಗೃಹಿಣಿಯನ್ನು ನಾಗವ್ವ ವಂಟಮೂರಿ(28) ಎಂದು ಗುರುತಿಸಲಾಗಿದೆ. ಮುಸ್ಲಿಂ ಧರ್ಮಕ್ಕೆ ಮತಾಂತರವಾಗದೇ ಇದ್ದಲ್ಲಿ ಕೊಲೆ ಮಾಡುವುದಾಗಿ ಮಕ್ತುಮಸಾಬ್ ಪಾಟೀಲ್ ಜೀವ ಬೆದರಿಕೆ ಹಾಕುತ್ತಿದ್ದ ಎಂದು ಆರೋಪಿಸಲಾಗಿದೆ.
9 ವರ್ಷಗಳ ಹಿಂದೆ ದೇಮಪ್ಪ-ನಾಗವ್ವ ಮದುವೆಯಾಗಿದ್ದರು. ಮದುವೆಯಾದ 1 ವರ್ಷಕ್ಕೆ ನಾಗವ್ವಗೆ ಮಕ್ತುಮ್ಸಾಬ್ ಪರಿಚಯವಾಗಿದ್ದ. ಪರಿಚಯ ಅನೈತಿಕ ಸಂಬಂಧವಾಗಿ ಬೆಳೆದಿತ್ತು. ಈ ವಿಚಾರ ನಾಗವ್ವನ ಮನೆಯಲ್ಲಿ ಗೊತ್ತಾಗಿ ಮಕ್ತುಮ್ಸಾಬ್ ಪಾಟೀಲ್ ಸಂಪರ್ಕ ತ್ಯಜಿಸುವಂತೆ ಬುದ್ಧಿವಾದ ಹೇಳಿದ್ದರು.
ಮನೆಯವರ ಸೂಚನೆ ಮೇರೆಗೆ ನಾಗವ್ವ ಆತನ ಸಂಪರ್ಕ ಕಡಿತಗೊಳಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಮಕ್ತುಮಸಾಬ್ ಪಾಟೀಲ್ ಧಮ್ಕಿ ಹಾಕುತ್ತಿದ್ದ. ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಕಿರುಕುಳ ನೀಡುತ್ತಿದ್ದ. ಮತಾಂತರ ಆಗದಿದ್ದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ನಾಗವ್ವ ಕುಟುಂಬದವರು ಆರೋಪಿಸಿದ್ದಾರೆ.
Advertisement