

ಮಂಗಳೂರು: ‘ಕಾಂತಾರ: ಚಾಪ್ಟರ್ 1’ (Kantara Chapter 1) ಯಶಸ್ಸು ಕಂಡ ನಂತರ ರಿಷಬ್ ಶೆಟ್ಟಿ ಕಾಂತಾರಾ ಚಿತ್ರತಂಡದವರ ಜೊತೆ ಮಂಗಳೂರಿಗೆ ಹೋಗಿ ಹರಕೆ ಕೋಲ ಒಪ್ಪಿಸಿದ್ದರು. ಕೋಲದ ವೇಳೆ ದೈವ ನರ್ತಕ ರಿಷಬ್ ಶೆಟ್ಟಿ ಜೊತೆಗೆ ವರ್ತಿಸಿದ ರೀತಿ ಕರಾವಳಿಯ ದೈವಾರಾಧಕರಿಗೆ ಇಷ್ಟವಾಗಿಲ್ಲ. ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡು ದೈವಕ್ಕೆ ಅಪಚಾರವೆಸಗಿದ್ದಾರೆ ಎಂದು ಹೇಳುತ್ತಾರೆ ದೈವರಾಧಕ ತಮ್ಮಣ್ಣ ಶೆಟ್ಟಿಎಂಬುವವರು.
ಮಂಗಳೂರಿನ ಬಾರೆಬೈಲ್ ಅಲ್ಲಿ ವಾರಾಹಿ ಪಂಜುರ್ಲಿ, ಅರಸು ಜಾರಂದಾಯ ಹಾಗು ಬಂಟ ದೈವಸ್ಥಾನದಲ್ಲಿ ಹರಕೆ ಕೋಲ ನಡೆಯಿತು. ಈ ವೇಳೆ ದೈವ ನರ್ತಕ ರಿಷಬ್ ಕಾಲ ಮೇಲೆ ಮಲಗಿದ್ದರು. ಕೋಲದ ವೇಳೆ ದೈವ ನರ್ತಕ ರಿಷಬ್ ಜೊತೆಗೆ ವರ್ತಿಸಿದ ರೀತಿ ವಿರುದ್ಧ ಟೀಕೆ ವ್ಯಕ್ತವಾಗಿದೆ.
‘ತುಳುನಾಡಿನ ದೈವಾರಾಧನೆಯಲ್ಲಿ ದೈವಗಳು ಈ ರೀತಿ ವರ್ತಿಸುವುದಿಲ್ಲ.ರಿಷಬ್ ಕಾಲ ಮೇಲೆ ಮಲಗಿದ್ದು ಪಂಜುರ್ಲಿಯಲ್ಲ,ದೈವವಲ್ಲ ಬದಲಾಗಿ ನರ್ತಕ’ ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಮಂಗಳೂರಿನಲ್ಲಿ ತಮ್ಮಣ್ಣ ಶೆಟ್ಟಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿ, ʻಕಾಂತಾರದಿಂದ ದೈವಗಳು ಇಂದು ಬೀದಿಗೆ ಬರುವಂತಾಗಿದೆ. ಈಗ ಹರಕೆಯ ನೇಮೋತ್ಸವದಿಂದ ದೈವರಾಧನೆ ಸಂಪೂರ್ಣ ಮುಗೀತು ಎಂಬಷ್ಟರ ಮಟ್ಟಿಗೆ ಬಂದಿದೆ. ಹರಕೆ ನೀಡುವುದುಕ್ಕೂ ಅದರದ್ದೆ ಆದ ಕಟ್ಟುಪಾಡುಗಳಿವೆ. ಹರಕೆಯ ನೇಮ ಅಂತಾ ಇಲ್ಲ. ಧರ್ಮ ನೇಮ ನೀಡುವ ಕ್ರಮ ಇದೆ. ಕಾಲಾವಧಿ ನೇಮ ಕಾಲಾವಧಿ ನಡಾವಳಿ ಇರುವಂತದ್ದು. ಮೊನ್ನೆ ಮಾಡಿರೋದು ದೈವರಾಧನೆಯ ನಿಯಮಕ್ಕೆ ವಿರುದ್ಧ. ರಿಷಬ್ ಶೆಟ್ಟಿ ಗೆ ಡೇಟ್ ಕೊಟ್ಟಿದ್ದೇವೆ ಎಂದು ಕದ್ರಿ ಮಂಜುನಾಥನನ್ನು ಬದಿಗೆ ಬಿಟ್ಟು ಇವರು ನೇಮ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ದೈವಗಳು ಬಟ್ಟೆ ಧರಿಸುತ್ತವೆಯೇ?
ʻನರ್ತಕ ಹಾಕಿದ ಬಟ್ಟೆಗಳು ದೈವರಾಧನೆಗೆ ವಿರುದ್ಧ. ದೈವ ಕಡ್ತಳೆಯನ್ನು ತಲೆಗೆ ಹೊಡೆದುಕೊಳ್ಳುವುದಿಲ್ಲ. ತಟ್ಟೆಯನ್ನು ಹೊಡೆದುಕೊಳ್ಳುವುದಕ್ಕಿಲ್ಲ. ಪಲ್ಟಿ ಹೊಡೆಯುವ ದೈವಗಳೆ ಬೇರೆ ಇದೆ. ಅಲ್ಲಿ ಮೊನ್ನೆ ನಡೆದಿರುವುದೆಲ್ಲಾ ದೈವರಾಧನೆಯ ನಿಯಮಕ್ಕೆ ವಿರುದ್ಧವಾಗಿದೆ. ಇದನ್ನು ನೋಡಿದವರು ಏನು ತಿಳಿದುಕೊಳ್ಳಬಹುದು. ಮುಂದೆ ಅತೀದೊಡ್ಡ ಬಿಲ್ ಇವರ ಕೈಗೆ ಸಿಗುತ್ತದೆ. ಮುಂದಿನ ದಿನ ಭಾರಿ ದೊಡ್ಡ ಬೆಲೆ ತೆರಬೇಕಾಗುತ್ತದೆ. ಜನರನ್ನು ಮೆಚ್ಚಿಸಲು ಮೋಸ ಮಾಡಬೇಡಿ. ರಿಷಬ್ ಶೆಟ್ಟಿ ವ್ಯಾಪಾರಕ್ಕೆ ಸಿನಿಮಾ ಮಾಡಿದ್ದಾರೆ. ರಿಷಬ್ ಶೆಟ್ಟಿಯ ಕಾಲ ಬುಡದಲ್ಲಿ ದೈವ ಹೇಗೆ ಬೀಳುತ್ತೆ. ಈ ದೈವ ನರ್ತಕನೇ ದೈವರಾಧನೆಯ ಅಸ್ಮಿತೆಯನ್ನು ರಿಷಬ್ ಶೆಟ್ಟಿಗೆ ಮಾರಾಟ ಮಾಡಿದ್ದು. ದೈವಕ್ಕೂ ರಿಷಬ್ ಶೆಟ್ಟಿಗೂ ಏನು ಸಂಬಂಧ ಇದೆ ಎಂದು ಕೇಳಿದ್ದಾರೆ.
ದೈವ ಮನುಷ್ಯರನ್ನು ಮುಟ್ಟುವುದಿಲ್ಲ
ಶರ್ಟ್ ಹಾಕಿದವರನ್ನು ಯಾವ ದೈವವೂ ಮುಟ್ಟಲ್ಲ. ಹೊರಳಾಡಿ, ಬಕೆಟ್ ಹಿಡಿದು ಯಾರನ್ನು ಮಾತನಾಡಲ್ಲ. ಹೊರಳಾಟ, ಮುದ್ದು ಮಾಡೋದು ಎಲ್ಲಾ ಇಲ್ಲ. 20 ವರ್ಷದಿಂದ ದೈವರಾಧನೆಯನ್ನು ವ್ಯಾಪಾರ ಮಾಡಿ ಆಗಿದೆ. ಜನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಇದೆಲ್ಲಾ ದೈವ ಮೆಚ್ಚುವ ಕೆಲಸವಲ್ಲ. ಇವೆಲ್ಲಾ ನಾಟಕ, ಭಾರಿ ದೊಡ್ಡ ಗಂಡಾಂತರದ ಕೆಲಸ ಆಗಿದೆ. ರಿಷಬ್ ಶೆಟ್ಟಿ ಹರಕೆ ಕೊಟ್ಟಿದಲ್ಲ ದೊಡ್ಡ ಹೂತ ತೆಗೆದುಕೊಂಡು ಹೋಗಿದ್ದಾರೆ. ದೈವರಾಧನೆಯಲ್ಲಿ ನಾಟಕ ಮಾಡುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
Advertisement