

ಬೆಳಗಾವಿ: ಪ್ರತಿ ಬಾರಿ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಕುರಿತ ಚರ್ಚೆ ಕೊನೆಯ ಆದ್ಯತೆಯಾಗುತ್ತಿತ್ತು. ಬೆಳಗಾವಿ ಅಧಿವೇಶನ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಆದ್ಯತೆ ನೀಡಬೇಕಾದ ವೇದಿಕೆಯಾಗಿದೆ.
ದಶಕಗಳಿಂದ ನಡೆಯುತ್ತಿರುವ ಪ್ರಾದೇಶಿಕ ನಿರ್ಲಕ್ಷ್ಯವನ್ನು ನಿಭಾಯಿಸಲು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ದಿಟ್ಟ ಕ್ರಮ ಕೈಗೊಂಡಿದ್ದಾರೆ. ಎಲ್ಲಾ ಪ್ರಧಾನ ಕಾರ್ಯದರ್ಶಿಗಳು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮತ್ತು ಇಲಾಖಾ ಮುಖ್ಯಸ್ಥರಿಗೆ ತುರ್ತು ಪತ್ರ ಬರೆದಿದ್ದಾರೆ.
ಮುಂದಿನ ಸಚಿವ ಸಂಪುಟ ಸಭೆಯು ಬೆಳಗಾವಿಯಲ್ಲಿ ನಡೆಯುತ್ತಿದ್ದು, ಚಳಿಗಾಲದ ಅಧಿವೇಶನ ಮಧ್ಯದಲ್ಲಿ ಮುಕ್ತಾಯಗೊಳ್ಳುವುದರಿಂದ ಫೈಲ್‌ಗಳನ್ನು ತ್ವರಿತವಾಗಿ ಪಟ್ಟಿ ಮಾಡಲು ಸೂಚಿಸಿದ್ದಾರೆ. ಉತ್ತರ ಕರ್ನಾಟಕದ ದೀರ್ಘಕಾಲದಿಂದ ನಿರ್ಲಕ್ಷಿಸಲ್ಪಟ್ಟ ಬೇಡಿಕೆಗಳು ಈ ಬಾರಿ ಅಧಿವೇಶನದಲ್ಲಿ ಈಡೇರುವ ಸಾಧ್ಯತೆಯಿದೆ.
ಸರ್ಕಾರವು ಉದ್ದೇಶಪೂರ್ವಕವಾಗಿ ಸಚಿವ ಸಂಪುಟ ಸಭೆಯಲ್ಲಿ ಉತ್ತರ ಕರ್ನಾಟಕ ಜಿಲ್ಲೆಗಳ ಸಮಸ್ಯೆಗಳಿಗೆ "ಪ್ರಾಮುಖ್ಯತೆ" ನೀಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಆಸ್ಪತ್ರೆಗಳು, ಕಾಲೇಜುಗಳು, ರಸ್ತೆಗಳು ಅಥವಾ ಮೂಲಭೂತ ನಾಗರಿಕ ಸೌಲಭ್ಯಗಳಾಗಿರಬಹುದು, ಉತ್ತರ ಕರ್ನಾಟಕದ ಮೂಲಸೌಕರ್ಯವು ಬೆಂಗಳೂರು ಮತ್ತು ಇತರ ದಕ್ಷಿಣ ಪ್ರದೇಶಗಳಲ್ಲಿನ ಸೌಲಭ್ಯಗಳಿಗಿಂತ "ತುಂಬಾ ಹಿಂದುಳಿದಿದೆ" ಎಂದು ಪ್ರಾದೇಶಿಕ ಅಸಮತೋಲನ ಆಯೋಗದ ಸಂಶೋಧನೆಗಳ ತಿಳಿಸಿವೆ.
ಹೊಸ ನಾಗರಿಕ ಮೂಲಸೌಕರ್ಯ, ಆರೋಗ್ಯ, ಶಿಕ್ಷಣ, ವೈದ್ಯಕೀಯ ಕಾಲೇಜುಗಳು, ನೀರಾವರಿ ಯೋಜನೆಗಳು ಮತ್ತು ಕೈಗಾರಿಕಾ ಕಾರಿಡಾರ್ ಸೇರಿದಂತೆ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಹಲವು ಯೋಜನೆಗಳು ತಾರ್ಕಿಕ ಅಂತ್ಯ ಕಾಣುವ ಸಾಧ್ಯತೆಯಿದೆ ಎಂದು ಸಂಪುಟ ಮೂಲಗಳು ಸುಳಿವು ನೀಡಿವೆ.
Advertisement