

ಹಾಸನ: ಕರ್ನಾಟಕದ ಏಳು ಜಿಲ್ಲೆಗಳ 28 ತಾಲ್ಲೂಕುಗಶ ಬರಪೀಡಿತ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಗುರಿ ಹೊಂದಿರುವ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಅರಣ್ಯ ಅನುಮತಿ ಪಡೆಯುವಲ್ಲಿ ವಿಳಂಬದಿಂದಾಗಿ ದೊಡ್ಡ ಹಿನ್ನಡೆ ಅನುಭವಿಸುತ್ತಿದೆ.
ಪಶ್ಚಿಮ ಘಟ್ಟಗಳಲ್ಲಿ ಪಶ್ಚಿಮಕ್ಕೆ ಹರಿಯುವ ನದಿಗಳಿಂದ 24.01 ಟಿಎಂಸಿ ನೀರನ್ನು ಎತ್ತುವ ಮೂಲಕ ಸುಮಾರು 75 ಲಕ್ಷ ಜನರಿಗೆ ಅನುಕೂಲವಾಗುವಂತೆ ಪ್ಲಾನ್ ಮಾಡಿರುವ ಈ ಯೋಜನೆಯು ಈಗಾಗಲೇ 1ನೇ ಹಂತದ ನೀರು ಎತ್ತುವ ಕಾರ್ಯಗಳನ್ನು ಪೂರ್ಣಗೊಳಿಸಿದೆ, ಕಾಲುವೆಯ ನಿರ್ಮಾಣ ಪೂರ್ಣಗೊಳ್ಳುವ ಹಂತದಲ್ಲಿದೆ. ಆದಾಗ್ಯೂ, ಅರಣ್ಯ ಭೂಮಿಯ ಮೂಲಕ ನೀರನ್ನು ತಿರುಗಿಸುವುದನ್ನು ಒಳಗೊಂಡಿರುವ ಎರಡನೇ ಹಂತವು ಸ್ವಾಧೀನಕ್ಕೆ ಸಚಿವಾಲಯ ಇನ್ನೂ ಅನುಮೋದನೆ ನೀಡದ ಕಾರಣ ಸ್ಥಗಿತಗೊಂಡಿದೆ.
ಪೂರ್ವ ಅನುಮತಿ ಇಲ್ಲದೆ ಈ ಯೋಜನೆಯು ಅರಣ್ಯ ಭೂಮಿಯನ್ನು ಅತಿಕ್ರಮಿಸಿದೆ ಎಂದು ಮೂಲಗಳು ತಿಳಿಸಿವೆ. ಮೂರು ಕಿಲೋಮೀಟರ್ ಅರಣ್ಯ ಪ್ರದೇಶಕ್ಕೆ ಭೂಸ್ವಾಧೀನ ಬಾಕಿ ಇರುವುದರಿಂದ ಹಾಸನ ಕ್ಷೇತ್ರದ ಸಲಗಾಮೆ ಗ್ರಾಮದ ಬಳಿಯ ಮುಖ್ಯ ಕಾಲುವೆಯನ್ನು ಸ್ಥಗಿತಗೊಳಿಸಲಾಗಿದೆ.
ಜಿಲ್ಲಾಡಳಿತವು ಪರಿಹಾರವಾಗಿ ಅರಣ್ಯೀಕರಣಕ್ಕಾಗಿ 410 ಎಕರೆಗಳನ್ನು ಮೀಸಲಿಟ್ಟಿದ್ದರೂ, ಅನುಮೋದನೆ ನೀಡುವ ಮೊದಲು ಪೂರೈಸಬೇಕಾದ 11 ಷರತ್ತುಗಳೊಂದಿಗೆ ಸಚಿವಾಲಯವು ಎರಡು ಬಾರಿ ಫೈಲ್ ಅನ್ನು ಹಿಂತಿರುಗಿಸಿದೆ ಎಂದು ವರದಿಯಾಗಿದೆ.
ಈ ಯೋಜನೆಗೆ 2014 ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅನುಮೋದನೆ ನೀಡಿದ್ದರು, ಅಂದಾಜು ವೆಚ್ಚ 12,000 ಕೋಟಿ ರೂ.ಗಳಾಗಿತ್ತು. ಅಂದಾಜನ್ನು ಹಲವು ಬಾರಿ ಪರಿಷ್ಕರಿಸಲಾಗಿದ್ದು, ಈಗ 23,251 ಕೋಟಿ ರೂ.ಗಳಿಗೂ ಹೆಚ್ಚಾಗಿದೆ, ಸುಮಾರು 17,147 ಕೋಟಿ ರೂ.ಗಳು ಈಗಾಗಲೇ ಖರ್ಚು ಮಾಡಲಾಗಿದೆ. ಈ ಯೋಜನೆಯನ್ನು ಜುಲೈ 2026 ರೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿತ್ತು ಆದರೆ ಈಗ 2027 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
Advertisement