

ಬೆಂಗಳೂರು: ಮಧ್ಯರಾತ್ರಿಯಲ್ಲಿ ಆಟೋಟದಲ್ಲಿ ಪ್ರಯಾಣ ಮಾಡಲು ಮಹಿಳೆಯರು ಸಾಮಾನ್ಯವಾಗಿ ಭಯಪಡುತ್ತಾರೆ. ಆದರೆ, ಬೆಂಗಳೂರಿನಲ್ಲಿ ರಾಪಿಡೋ ಆಟೋದಲ್ಲಿ ಮಧ್ಯರಾತ್ರಿಯಲ್ಲಿ ಮನೆಗೆ ಹೊರಟಿದ್ದ ಮಹಿಳೆಯೊಬ್ಬರು ಮಾಡಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಆಟೋದ ಒಳಗಡೆ ಇದ್ದ ಸಾಲುಗಳು ಆಕೆಯನ್ನು ಆಕರ್ಷಿಸಿದೆ. ಈ ಸಾಲುಗಳನ್ನು ವಿಡಿಯೋ ಮಾಡಿರುವ ಯುವತಿ, ಧೈರ್ಯ ತುಂಬುವ ಕ್ಷಣ ಎಂದಿದ್ದಾರೆ.
ಮಧ್ಯ ರಾತ್ರಿ 12 ಗಂಟೆ ಆಗಿದೆ ಮತ್ತು ನಾನು ರಾಪಿಡೋ ಆಟೋದಲ್ಲಿ ಪ್ರಯಾಣಿಸುತ್ತಿದ್ದೇನೆ ಮತ್ತು ಇದನ್ನು ಓದಿದ ನಂತರ ನೆಮ್ಮದಿಯಾಗಿ ಪ್ರಯಾಣಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಆಟೋದ ಒಳಗೆ 'ನಾನೂ ಒಬ್ಬ ತಂದೆ ಮತ್ತು ಸಹೋದರ. ನಿಮ್ಮ ಸುರಕ್ಷತೆ ಮುಖ್ಯವಾಗಿದೆ. ಆರಾಮವಾಗಿ ಕುಳಿತುಕೊಳ್ಳಿ ಎಂದು ಬರೆಯಲಾಗಿತ್ತು. Peak Bengaluru ಎಂಬ ಟೈಟಲ್ ನೊಂದಿಗೆ ಮಾಡಿರುವ ಈ ವಿಡಿಯೋ ಪೋಸ್ಟ್ ಸಾಕಷ್ಟು ವೈರಲ್ ಆಗಿದ್ದು, ಬೆಂಗಳೂರಿನ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಕಳೆದ 20 ವರ್ಷಗಳಿಂದ ಈ ನಗರ ನನಗೆ ತಿಳಿದಿದೆ! ಇದು ಎಲ್ಲರಿಗೂ ಸುರಕ್ಷಿತ ನಗರವಾಗಿದೆ ಎಂದಿದ್ದಾರೆ.
ಮತ್ತೊಬ್ಬರು, ಇದು ನಮಗೆ ಬೇಕಾಗಿರುವುದು ಮತ್ತು ನಾವು ನಿಖರವಾಗಿ ಏನು ಮಾಡಬೇಕು. ಈ ಚಿಕ್ಕ ಸೂಚನೆಗಳು ನಗರದಲ್ಲಿ ಮಹಿಳೆಯರು ತಡರಾತ್ರಿಯೂ ಸುರಕ್ಷಿತವಾಗಿ ಪ್ರಯಾಣಿಸಬಹುದು ಎಂಬ ಭಾವನೆಯುಂಟು ಮಾಡಲು ನೆರವಾಗುತ್ತದೆ ಎಂದು ಹೇಳಿದ್ದಾರೆ.
Advertisement