ಮುಂಡಗೋಡುಗೆ ದಲೈಲಾಮಾ ಆಗಮನ: 45 ದಿನಗಳ ವಾಸ್ತವ್ಯ; ಭೇಟಿ ಮಾಡಲು ವಿದೇಶಿ ಪ್ರಜೆಗಳಿಗೆ ವಿಶೇಷ ಪರವಾನಗಿ ಕಡ್ಡಾಯ

ರಾಜ್ಯ ಸರ್ಕಾರದ ಪರವಾಗಿ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ದಲೈಲಾಮಾ ಅವರನ್ನು ಬರಮಾಡಿಕೊಂಡರು. ದಲೈ ಲಾಮಾ ಅವರು ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರಿನಲ್ಲಿ ಮುಂಡಗೋಡ ಶಿಬಿರಕ್ಕೆ ತೆರಳಿದರು.
Tibetan spiritual leader Dalai Lama arrives at Hubballi Airport
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ದಲೈ ಲಾಮಾ
Updated on

ಹುಬ್ಬಳ್ಳಿ: ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರು ಶುಕ್ರವಾರ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು ಮುಂಡಗೋಡು ಟಿಬೆಟಿಯನ್ ಶಿಬಿರದಲ್ಲಿ 45 ದಿನಗಳ ವಾಸ್ತವ್ಯ ಹೂಡಲಿದ್ದಾರೆ.

ರಾಜ್ಯ ಸರ್ಕಾರದ ಪರವಾಗಿ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ದಲೈಲಾಮಾ ಅವರನ್ನು ಬರಮಾಡಿಕೊಂಡರು. ದಲೈ ಲಾಮಾ ಅವರು ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರಿನಲ್ಲಿ ಮುಂಡಗೋಡ ಶಿಬಿರಕ್ಕೆ ತೆರಳಿದರು.

ಕೇಂದ್ರ ಗೃಹ ಸಚಿವಾಲಯ ವಿದೇಶಿ ಪ್ರಜೆಗಳಿಗೆ PAP ಪರವಾನಗಿ ಅಥವಾ ಸಂರಕ್ಷಿತ ಪ್ರದೇಶ ಪರವಾನಗಿಯನ್ನು ಕೋರಿದೆ. ಭಾರತೀಯ ಸಂದರ್ಶಕರನ್ನು ಹೊರತುಪಡಿಸಿ ಯಾರಾದರೂ ಮುಂದಿನ 45 ದಿನಗಳವರೆಗೆ ಮುಂಡಗೋಡದಲ್ಲಿರುವ ಶಿಬಿರಕ್ಕೆ ಭೇಟಿ ನೀಡಲು ಪೂರ್ವಾನುಮತಿ ಪಡೆಯಬೇಕು. ನೇಪಾಳ ಮತ್ತು ಭೂತಾನ್ ನಾಗರಿಕರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಅವರು ಸರ್ಕಾರ ನೀಡುವ ಗುರುತಿನ ಚೀಟಿಗಳನ್ನು ಕೊಂಡೊಯ್ಯಬಹುದಾಗಿದೆ.

ದಲೈ ಲಾಮಾ ಅವರ ಭೇಟಿಯಿಂದಾಗಿ ಟಿಬೆಟಿಯನ್ ಆಡಳಿತ ಮತ್ತು MHA ವಿದೇಶಿ ಸಂದರ್ಶಕರಿಗೆ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಅವರು ತಮ್ಮ ಉತ್ತರಾಧಿಕಾರಿಯ ಬಗ್ಗೆ ಚರ್ಚಿಸಲು ತಮ್ಮ ಸಹವರ್ತಿ ಹಿರಿಯ ಸನ್ಯಾಸಿಗಳು ಮತ್ತು ಟಿಬೆಟಿಯನ್ ಸರ್ಕಾರದ ಆಡಳಿತ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸುವ ನಿರೀಕ್ಷೆಯಿದೆ. ಆದ್ದರಿಂದ ಜಾಗತಿಕವಾಗಿ ಅನೇಕ ಗುಪ್ತಚರ ಸಂಸ್ಥೆಗಳು ದಲೈ ಲಾಮಾ ಅವರ ಮುಂಡಗೋಡ ಭೇಟಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.

Tibetan spiritual leader Dalai Lama arrives at Hubballi Airport
ಉತ್ತರಕನ್ನಡ ಜಿಲ್ಲೆಗೆ ಟಿಬೆಟಿಯನ್ ಧರ್ಮಗುರು ದಲೈಲಾಮಾ: ಭರದ ಸಿದ್ಧತೆ; ಪ್ರವಾಸಿಗರಿಗೆ ನೋ ಎಂಟ್ರಿ..!

ಪಿಎಪಿಗೆ ಅರ್ಜಿ ಸಲ್ಲಿಸುವ ವಿದೇಶಿ ಪ್ರಜೆಗಳು ಮುಂಡಗೋಡಿನಲ್ಲಿರುವ ಮಠಗಳಿಂದ ಬಂದ ಆಹ್ವಾನದ ವಿವರಗಳನ್ನು ನಮೂದಿಸಬೇಕು ಮತ್ತು ಪರವಾನಗಿ ನೀಡುವ ಮೊದಲು ಶಿಬಿರದಿಂದ ಅದನ್ನು ದೃಢೀಕರಿಸಲಾಗುತ್ತದೆ. ಪಿಎಪಿಗಳು ಯಾವಾಗಲೂ ಅಸ್ತಿತ್ವದಲ್ಲಿದ್ದರೂ, ಈ ಬಾರಿ ಗೃಹ ಸಚಿವಾಲಯ ಕಠಿಣ ನಿಯಮಗಳನ್ನು ವಿಧಿಸಿದೆ.

ದಲೈ ಲಾಮಾ ಅವರು ಮುಂಡಗೋಡಿನಲ್ಲಿರುವ ಹಿರಿಯ ಬೌದ್ಧ ಸನ್ಯಾಸಿಗಳೊಂದಿಗೆ ಸಂವಹನ ನಡೆಸಲಿದ್ದಾರೆ, ಅವರು ಬೌದ್ಧ ಉನ್ನತ ಅಧ್ಯಯನಗಳನ್ನು ಕಲಿಯುತ್ತಾರೆ ಮತ್ತು ಬೋಧಿಸುತ್ತಿದ್ದಾರೆ.

ಮುಂಡಗೋಡಿನಲ್ಲಿರುವ ಅವರ ವಾಸ್ತವ್ಯದ ಸಮಯದಲ್ಲಿ ಕೆಲವು ಕೃತಿಗಳ ಡಿಜಿಟಲೀಕರಣದ ಬಗ್ಗೆಯೂ ಚರ್ಚಿಸಲಾಗುವುದು ಎಂದು ಹೇಳಲಾಗುತ್ತಿದೆ. ಮುಂಡಗೋಡು ಶಿಬಿರವು ಸುಮಾರು 16,000 ಟಿಬೆಟಿಯನ್ನರಿಗೆ ನೆಲೆಯಾಗಿದ್ದರೆ, ಕೊಡಗಿನ ಬೈಲಕುಪ್ಪೆಯಲ್ಲಿ 60,000 ಟಿಬೆಟಿಯನ್ ಜನಸಂಖ್ಯೆ ಇದೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com