

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ನಾಲ್ವರು ಸರ್ಕಾರಿ ಅಧಿಕಾರಿಗಳಿಗೆ ಸೇರಿದ ಅಕ್ರಮ ಆಸ್ತಿಗಳ ಮೇಲೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ಆದಾಯಕ್ಕಿಂತ ಹೆಚ್ಚುವರಿಯಾಗಿ ಒಟ್ಟು 18.2 ಕೋಟಿ ರೂಪಾಯಿ ಅಕ್ರಮ ಆಸ್ತಿ ಪತ್ತೆಯಾಗಿದೆ.
ಮಂಡ್ಯದ ಜಿಲ್ಲಾ ಪಂಚಾಯತ್‌ನ ಪಂಚಾಯತ್ ರಾಜ್ ಎಂಜಿನಿಯರ್ ವಿಭಾಗದ ಕಚೇರಿ ಅಧೀಕ್ಷಕ ಬೈರೇಶ್ ವಿ.ಎಸ್, ಬೆಳಗಾವಿಯ ಕೃಷಿ ಇಲಾಖೆಯ ವಿಜಿಲೆನ್ಸ್ ಸೆಲ್‌ನ ಜಂಟಿ ನಿರ್ದೇಶಕ ರಾಜಶೇಖರ್ ಈರಪ್ಪ ಬಿಜಾಪುರ, ವಿಜಯನಗರದ ಜಿಲ್ಲಾ ಆರೋಗ್ಯ ಅಧಿಕಾರಿ ಎಲ್.ಆರ್ ಶಂಕರ್ ನಾಯಕ್ ಮತ್ತು ಶಿವಮೊಗ್ಗದ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ರೂಪಲಾ ನಾಯಕ್ ಎಸ್. ವಿರುದ್ಧ ದಾಳಿ ನಡೆದಿತ್ತು. ಲೋಕಾಯುಕ್ತ ಅಧಿಕಾರಿಗಳ ಪ್ರಕಾರ, ಈ ಅಧಿಕಾರಿಗಳಿಗೆ ಸಂಬಂಧಿಸಿದ 21 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಯಿತು.
ರಾಜಶೇಖರ್ ಅವರ ಬಳಿ ಅತಿ ಹೆಚ್ಚು ಆಸ್ತಿ ಇದ್ದು, ಅದರ ಮೌಲ್ಯ 6.07 ಕೋಟಿ ರೂಪಾಯಿಯದ್ದಾಗಿದೆ. ಲೋಕಾಯುಕ್ತರು ಆತನ ಬಳಿ ಮೂರು ಪ್ಲಾಟ್‌ಗಳು, ಮೂರು ಮನೆಗಳು, 19 ಲಕ್ಷ ರೂ. ಮೌಲ್ಯದ ಆಭರಣಗಳು ಮತ್ತು 38.8 ಲಕ್ಷ ರೂ. ಮೌಲ್ಯದ ವಾಹನಗಳನ್ನು ಹೊಂದಿದ್ದಾರೆ ಎಂದು ಕಂಡುಹಿಡಿದಿದ್ದಾರೆ.
Advertisement