ಉತ್ತಮ ರಸ್ತೆಗಳಿಲ್ಲದೆ ದೊಡ್ಡ ಬಸ್ಸುಗಳನ್ನು ಎಲ್ಲಿ ಓಡಿಸಬಹುದು? ಶಕ್ತಿ ಯೋಜನೆ ಯಶಸ್ಸಿನ ನಡುವೆಯೂ ಬಸ್ ಸಂಪರ್ಕವನ್ನೇ ಕಾಣದ ರಾಜ್ಯದ 1,800 ಹಳ್ಳಿಗಳು!

ರಾಜ್ಯ ಸರ್ಕಾರವು ಇನ್ನೂ ಕೊನೆಯ ಹಂತದ ಸಂಪರ್ಕವನ್ನು ಒದಗಿಸಿಲ್ಲ, ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಪ್ರತಿದಿನ ಮೈಲುಗಳಷ್ಟು ನಡೆದುಕೊಂಡು ಹೋಗಬೇಕಾಗಿರುವ ಅನಿವಾರ್ಯತೆಯಿದೆ. ಶಕ್ತಿ ಯೋಜನೆಯ ನಂತರ ಹಳ್ಳಿಗಳಲ್ಲಿ ಬಸ್‌ಗಳ ಬೇಡಿಕೆ ಹೆಚ್ಚಾಗಿದೆ.
Minister Ramalinga Reddy
ರಾಮಲಿಂಗಾ ರೆಡ್ಡಿ
Updated on

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯು ಮಹಿಳೆಯರಿಗೆ ರಾಜ್ಯದ ಯಾವುದೇ ಭಾಗಕ್ಕೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ, ಆದರೆ ಸುಮಾರು 1,800 ಹಳ್ಳಿಗಳಲ್ಲಿ, ಮಹಿಳೆಯರು ಬಸ್ ಹತ್ತಲು ಕನಿಷ್ಠ 2 ಕಿ.ಮೀ ನಡೆದುಕೊಂಡು ಹೋಗಬೇಕಾಗಿದೆ.

ರಾಜ್ಯ ಸರ್ಕಾರವು ಇನ್ನೂ ಕೊನೆಯ ಹಂತದ ಸಂಪರ್ಕವನ್ನು ಒದಗಿಸಿಲ್ಲ, ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಪ್ರತಿದಿನ ಮೈಲುಗಳಷ್ಟು ನಡೆದುಕೊಂಡು ಹೋಗಬೇಕಾಗಿರುವ ಅನಿವಾರ್ಯತೆಯಿದೆ. ಶಕ್ತಿ ಯೋಜನೆಯ ನಂತರ ಹಳ್ಳಿಗಳಲ್ಲಿ ಬಸ್‌ಗಳ ಬೇಡಿಕೆ ಹೆಚ್ಚಾಗಿದೆ.

ಕೆಟ್ಟ ರಸ್ತೆಗಳು ಹಾಗೂ ದುರ್ಗಮ ಪ್ರದೇಶಗಳ ಕಾರಣ ಇಲ್ಲಿ ಬಸ್‌ ಸಂಚಾರ ನಿಲ್ಲಿಸಬೇಕಾಯಿತು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಈಶಾನ್ಯ ರಸ್ತೆ ಸಾರಿಗೆ ನಿಗಮ (ಎನ್‌ಇಆರ್‌ಟಿಸಿ) ಮತ್ತು ವಾಯುವ್ಯ ರಸ್ತೆ ಸಾರಿಗೆ ನಿಗಮ (ಎನ್‌ಡಬ್ಲ್ಯೂಆರ್‌ಟಿಸಿ) ಅಧಿಕಾರಿಗಳು ತಿಳಿಸಿದ್ದಾರೆ.

ಎಂಎಲ್‌ಸಿ ಯುಬಿ ಬಣಕರ್ ಕೇಳಿದ ನಕ್ಷತ್ರ ಹಾಕದ ಪ್ರಶ್ನೆಗೆ ಉತ್ತರಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಕೆಎಸ್‌ಆರ್‌ಟಿಸಿ 17 ಜಿಲ್ಲೆಗಳಲ್ಲಿ ಬಸ್‌ಗಳನ್ನು ನಿರ್ವಹಿಸುತ್ತದೆ, 21,748 ಹಳ್ಳಿಗಳ ಪೈಕಿ ಕೆಎಸ್‌ಆರ್‌ಟಿಸಿ 20,090 ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುತ್ತದೆ. 1,658 ಹಳ್ಳಿಗಳಿಗೆ, ಬಸ್‌ ಹತ್ತಲು ಪ್ರಯಾಣಿಕರು 2 ಕಿ.ಮೀ ನಡೆದುಕೊಂಡು ಹೋಗಬೇಕಿದೆ ಎಂದು ಮಾಹಿತಿ ನೀಡಿದ್ದಾರೆ.

Minister Ramalinga Reddy
ರಾಜ್ಯದ ಎಲ್ಲಾ ಬಸ್‌ಗಳಲ್ಲಿ ತುರ್ತು ನಿರ್ಗಮನ ದ್ವಾರ ಕಡ್ಡಾಯ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

ಅದೇ ರೀತಿ, ಎನ್‌ಡಬ್ಲ್ಯೂಆರ್‌ಟಿಸಿ 4,610 ಹಳ್ಳಿಗಳನ್ನು ಒಳಗೊಂಡಿದೆ, ಅದರಲ್ಲಿ 4,565 ಹಳ್ಳಿಗಳಿಗೆ ನೇರ ಬಸ್‌ಗಳಿವೆ, ಮತ್ತು ಎನ್‌ಇಆರ್‌ಟಿಸಿ ವ್ಯಾಪ್ತಿಯಲ್ಲಿ, 5,283 ಹಳ್ಳಿಗಳಲ್ಲಿ, 5,237 ನೇರ ಬಸ್‌ಗಳಿವೆ. ಈ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ ಬೇಡಿಕೆಯ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತಾರೆ, ಅದಕ್ಕೆ ಅನುಗುಣವಾಗಿ ಬಸ್‌ಗಳನ್ನು ಓಡಿಸುತ್ತಾರೆ ಎಂದು ರೆಡ್ಡಿ ಹೇಳಿದರು.

ಈ ಹಳ್ಳಿಗಳಲ್ಲಿ ಹೆಚ್ಚಿನವು ತುಮಕೂರು, ಚಿಕ್ಕಮಗಳೂರು, ಉಡುಪಿ, ಮಂಡ್ಯ, ಚಿಕ್ಕಬಳ್ಳಾಪುರ, ಕೊಡಗು, ದಕ್ಷಿಣ ಕನ್ನಡ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಚಾಮರಾಜನಗರ, ಕಲಬುರಗಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿವೆ.

ಶಕ್ತಿ ಯೋಜನೆಯ ಯಶಸ್ಸು ಅಸ್ತಿತ್ವದಲ್ಲಿರುವ ಮಾರ್ಗಗಳಲ್ಲಿ ಬಸ್‌ಗಳಿಗೆ ಹೆಚ್ಚಿನ ಬೇಡಿಕೆಗೆ ಕಾರಣವಾಗಿದೆ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ಟಿಎನ್‌ಐಇಗೆ ತಿಳಿಸಿದರು. ಅಲ್ಲದೆ, ಬಸ್ಸುಗಳಿಲ್ಲದ ಹಳ್ಳಿಗಳಿಗೆ ಬಸ್ಸುಗಳನ್ನು ಓಡಿಸಲು ಬೇಡಿಕೆ ಹೆಚ್ಚುತ್ತಿದೆ ಎಂದರು.

ಉತ್ತಮ ರಸ್ತೆಗಳಿಲ್ಲದೆ, ನಾವು ದೊಡ್ಡ ವಾಹನಗಳನ್ನು (ಬಸ್ಸುಗಳು) ಎಲ್ಲಿ ಓಡಿಸಬಹುದು? ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯವು ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕಾಗುತ್ತದೆ. ಪಂಚಾಯತ್ ಅಧಿಕಾರಿಗಳು ಅಥವಾ ಸದಸ್ಯರು ರಸ್ತೆಗಳನ್ನು ಕೇಳಿದಾಗಲೆಲ್ಲಾ, ಅವರು ಹಣದ ಲಭ್ಯತೆಯ ಕೊರತೆಯ ಕಾರಣ ನೀಡುತ್ತಾರೆ ಎಂದು ಅಧಿಕಾರಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com