

ಬೆಂಗಳೂರು: ನಗರದ ಖಾಸಗಿ ಹೋಟೆಲ್ ನಲ್ಲಿ ಬುಧವಾರ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮತ್ತೊಂದು 'ಡಿನ್ನರ್ ಪಾರ್ಟಿ' ಆಯೋಜನೆ ಮಾಡಿದರು. ಈ ಊಟದ ಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರೇ ಭಾಗವಹಿಸಿದರು.
ಹೀಗಾಗಿ ನಾಯಕತ್ವ ಬದಲಾವಣೆಯ ವಿಷಯ ಇನ್ನೂ ಚರ್ಚೆಯಲ್ಲಿದೆ ಎಂಬು ಸ್ಪಷ್ಟವಾಗಿದೆ, ಕೆಲವು ದಿನಗಳ ಹಿಂದೆ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದರು.
ಈ ನಿರ್ದಿಷ್ಟ ವಿಷಯದ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ಇಬ್ಬರೂ ನಾಯಕರಿಗೆ ಸಮನ್ಸ್ ನೀಡುವ ಸಾಧ್ಯತೆ ಇದೆ. ಈ ಸಭೆಯ ಬಗ್ಗೆ ಸಿಎಂ ಬಣಕ್ಕಿಂತ ಉಪಮುಖ್ಯಮಂತ್ರಿಗಳ ಬಣ ಹೆಚ್ಚು ಉತ್ಸುಕವಾಗಿರುವಂತೆ ತೋರುತ್ತಿದೆ. ಡಿಸೆಂಬರ್ 27 ರಂದು ನವದೆಹಲಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಗೆ ಮೊದಲು ಅಥವಾ ನಂತರ ಹೈಕಮಾಂಡ್ ಇಬ್ಬರಿಗೂ ಕರೆ ನೀಡುತ್ತದೆಯೇ ಎಂದು ಕಾದು ನೋಡಬೇಕಾಗಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (ಇಎಡಬ್ಲ್ಯೂ) ನೀಡಿದ ನೋಟಿಸ್‌ಗೆ ಸಂಬಂಧಿಸಿದಂತೆ ಶಿವಕುಮಾರ್ ಮೊದಲೇ ದೆಹಲಿಗೆ ಹೋಗಬೇಕಾಗಬಹುದು.
ತಮ್ಮ ಮುಖ್ಯಮಂತ್ರಿಯ ಅಧಿಕಾರಾವಧಿ ಕೇವಲ ಎರಡೂವರೆ ವರ್ಷಗಳಿಗೆ ಸೀಮಿತವಾಗಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಗುರುವಾರದ ಭೋಜನಕೂಟದ ಪರಿಣಾಮವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲಿ ಅವರ ನಿಷ್ಠರು ಅವರನ್ನು ಸಿಎಂ ಹುದ್ದೆಯಲ್ಲಿ ಮುಂದುವರಿಸಲು ಬೆಂಬಲಿಸಿರಬಹುದು ಎಂದು ಹೇಳಿದ್ದಾರೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ, ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮತ್ತು ಸಿಎಂ ಅವರ ಕಾನೂನು ಸಲಹೆಗಾರ ಮತ್ತು ಶಾಸಕ ಎ.ಎಸ್. ಪೊನ್ನಣ್ಣ ಅವರು ಭೋಜನಕೂಟದಲ್ಲಿ ಭಾಗವಹಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ 20-30 ನಿಮಿಷಗಳ ಕಾಲ ಮಾತ್ರ ಅಲ್ಲಿದ್ದರು. ಇದನ್ನು ಅಹಿಂದ ನಾಯಕರಿಗೆ ಮಾತ್ರ ಆಯೋಜಿಸಲಾಗಿತ್ತು, ಆದರೆ ಸಿಎಂ ಜೊತೆ ಕೆಲಸವಿದ್ದ ಕಾರಣ ಸುಧಾಕರ್ ಅವರನ್ನು ಅಧಿಕೃತವಾಗಿ ಆಹ್ವಾನಿಸದಿದ್ದರೂ ಸೇರಿಕೊಂಡರು ಎಂದು ಮೂಲಗಳು ತಿಳಿಸಿವೆ.
ಸತೀಶ್ ಜಾರಕಿಹೊಳಿ ಮತ್ತು ಪರಮೇಶ್ವರ ಬೆಳಗಿನ ಜಾವ 2 ಗಂಟೆಯವರೆಗೆ ಮಾತುಕತೆ ನಡೆಸಿದರು. ಪಕ್ಷವನ್ನು ಬಲಪಡಿಸುವುದು ಮತ್ತು 2028 ರ ಚುನಾವಣೆಯಲ್ಲಿ ಅದನ್ನು ಮತ್ತೆ ಅಧಿಕಾರಕ್ಕೆ ತರುವ ಬಗ್ಗೆ ನಾವು ಚರ್ಚಿಸಿದೇವೆ ಹೊರತು ಬೇರೆ ಯಾವುದೇ ವಿಷದ ಬಗ್ಗೆ ಮಾತನಾಡಿಲ್ಲ ಎಂದು ಸತೀಶ್ ತಿಳಿಸಿದರು. ಶಿವಕುಮಾರ್ ಅವರು ಈಗ ಹೊಂದಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅವರು ಪ್ರಬಲ ಸ್ಪರ್ಧಿಯಾಗಿದ್ದು, 2028 ರಲ್ಲಿ ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿಸಲು ಸಹ ಬಯಸುತ್ತಾರೆ.
Advertisement