ಚಳಿಗಾಲದ ಅಧಿವೇಶನ ಸಂಪನ್ನ: ಉತ್ತರ ಕರ್ನಾಟಕ ಅಭಿವೃದ್ಧಿಗೆ ಗಣನೀಯ ಅನುದಾನ; ವಿಪಕ್ಷಗಳ ಗದ್ದಲದ ನಡುವೆಯೆ ಮಸೂದೆಗಳ ಅಂಗೀಕಾರ

ಈ ನಡುವೆ ಶಾಸಕ ಮಹೇಶ ಟೆಂಗಿನಕಾಯಿ ಸದನದ ಮೂರನೇ ದಿನ ಪ್ರಸ್ತಾಪಿಸಿದ ಗೃಹಲಕ್ಷ್ಮಿ ಯೋಜನೆ ಎರಡು ಕಂತು ಬಾಕಿ ಸರ್ಕಾರವನ್ನು ಅಕ್ಷರಶಃ ನಡುಗಿಸಿತು. ಕೊನೆಗೆ ಸರ್ಕಾರದ ಪರ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಸದನಕ್ಕೆ ಕ್ಷಮೆ ಕೇಳಿದ್ದು ಸರ್ಕಾರವನ್ನು ಮುಜುಗರಕ್ಕೀಡು ಮಾಡಿತು.
suvarna soudha
ಬೆಳಗಾವಿ ಸುವರ್ಣ ಸೌಧ
Updated on

ಬೆಳಗಾವಿ: ಡಿಸೆಂಬರ್ 8ರಿಂದ ಶುರುವಾಗಿ 10 ದಿನ ನಡೆದ ವಿಧಾನಮಂಡಲದ ಅಧಿವೇಶನ ಅನಿರ್ದಿಷ್ಟಾವಧಿ ಅವಧಿಗೆ ಮುಂದೂಡಿಕೆಯಾಯಿತು. ಗೃಹಲಕ್ಷ್ಮಿ ಬಾಕಿ, ದ್ವೇಷ ಭಾಷಣ ವಿಧೇಯಕದ ವಿಚಾರವಾಗಿ ತೀವ್ರ ಗದ್ದಲಕ್ಕೆ ಕಾರಣವಾಗಿದ್ದ 10 ದಿನಗಳ ಕಾಲ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಶುಕ್ರವಾರ ಸಂಪನ್ನವಾಗಿದೆ.

ವಿಧಾನಸಭೆಯಲ್ಲಿ ಒಳ ಮೀಸಲಾತಿಗೆ ಕಾನೂನು ಬಲ ನೀಡುವ ಮಸೂದೆಗಳೂ ಸೇರಿ ಒಟ್ಟು 23 ಮಸೂದೆಗಳು ಅಂಗೀಕರಿಸಲ್ಪಟ್ಟಿವೆ. ದ್ವೇಷ ಭಾಷಣ ಮಾಡುವವರನ್ನು, ಪ್ರಚೋದಿಸಿದವರನ್ನು ಶಿಕ್ಷೆಗೆ ಗುರಿಪಡಿಸಲು ಅವಕಾಶ ಕಲ್ಪಿಸುವ ಮಸೂದೆಯನ್ನು ವಿರೋಧ ಪಕ್ಷಗಳ ತೀವ್ರ ವಿರೋಧ ನಡುವೆಯೂ ಸರ್ಕಾರ ಅಂಗೀಕಾರ ಪಡೆಯಿತು. ಸಾಮಾಜಿಕ ಬಹಿಷ್ಕಾರ ಹಾಕುವವರು, ಅದಕ್ಕೆ ಪೂರಕ ನೆರವು ನೀಡುವವರಿಗೆ ಶಿಕ್ಷೆ ವಿಧಿಸಲು ಅವಕಾಶ ಇರುವ ಮಸೂದೆಗೆ ಎರಡೂ ಸದನಗಳಲ್ಲಿ ಸುದೀರ್ಘ ಚರ್ಚೆಯ ಬಳಿಕ ಅನುಮೋದನೆ ನೀಡಲಾಯಿತು.

ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಮೂರು ಪಕ್ಷಗಳ ಸದಸ್ಯರು ವಿವರವಾಗಿ ಚರ್ಚಿಸಿದರು. ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧಗಳ ಕುರಿತು ವಿರೋಧ ಪಕ್ಷಗಳು ಸರ್ಕಾರದ ಗಮನ ಸೆಳೆದವು. ಬೆಳೆ ಹಾನಿ ಮತ್ತು ರೈತರ ಸಂಕಷ್ಟಗಳ ಬಗ್ಗೆಯೂ ಎಲ್ಲ ಸದಸ್ಯರು ಸದನದಲ್ಲಿ ಪ್ರಸ್ತಾಪಿಸಿದರು.

ಇದೇ ಮೊದಲ ಬಾರಿಗೆ ಸದನ ಪ್ರಾರಂಭವಾಗಿ 2ನೇ ದಿನದಿಂದಲೇ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆ ಶುರುವಾಗಿದ್ದು ವಿಶೇಷ. ಉ.ಕ. ಸಮಸ್ಯೆ ಬಗ್ಗೆ ವಿಧಾನಸಭೆಯಲ್ಲಿ ಬರೋಬ್ಬರಿ 39 ಸದಸ್ಯರು 17.02 ಗಂಟೆಗಳ ಕಾಲ ಚರ್ಚೆ ಮಾಡಿದರೆ, ಪರಿಷತನಲ್ಲಿ 12 ಜನ ಸದಸ್ಯರು 5 ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು.

suvarna soudha
ನನಗೆ ರಾಜಕೀಯ ನಿಶ್ಯಕ್ತಿ ಎಂಬುದೇ ಇಲ್ಲ, 5 ವರ್ಷ ನಾನೇ ಸಿಎಂ: ಬೆಳಗಾವಿ ಅಧಿವೇಶನದಲ್ಲಿ ಸಿದ್ದರಾಮಯ್ಯ ಪುನರುಚ್ಛಾರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಹರಿದಾಡುತ್ತಿರುವ ವದಂತಿಗಳನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತಾ, ನಾನು ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಯಾಗಿಯೇ ಇರುತ್ತೇನೆ ಎಂದು ದೃಢವಾಗಿ ಹೇಳಿದರು.

ಈ ನಡುವೆ ಶಾಸಕ ಮಹೇಶ ಟೆಂಗಿನಕಾಯಿ ಸದನದ ಮೂರನೇ ದಿನ ಪ್ರಸ್ತಾಪಿಸಿದ ಗೃಹಲಕ್ಷ್ಮಿ ಯೋಜನೆ ಎರಡು ಕಂತು ಬಾಕಿ ಸರ್ಕಾರವನ್ನು ಅಕ್ಷರಶಃ ನಡುಗಿಸಿತು. ಕೊನೆಗೆ ಸರ್ಕಾರದ ಪರ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಸದನಕ್ಕೆ ಕ್ಷಮೆ ಕೇಳಿದ್ದು ಸರ್ಕಾರವನ್ನು ಮುಜುಗರಕ್ಕೀಡು ಮಾಡಿತು.

ಅಧಿವೇಶನದಲ್ಲಿ ಎರಡು ಮಹತ್ವದ ವಿವಾದಾತ್ಮಕ ಮಸೂದೆಗಳನ್ನು ಅಂಗೀಕರಿಸಲಾಯಿತು. ಪರಿಶಿಷ್ಟ ಜಾತಿಗಳ 101 ಉಪಜಾತಿಗಳಿಗೆ ಮೂರು ಪ್ರವರ್ಗಗಳಾಗಿ ಒಳ ಮೀಸಲಾತಿ ನೀಡುವ ಕರ್ನಾಟಕ ಅನುಸೂಚಿತ ಜಾತಿಗಳ (ಉಪ-ವರ್ಗೀಕರಣ) ವಿಧೇಯಕ 2025ಕ್ಕೆ ಅನುಮೋದನೆ ನೀಡಲಾಯಿತು. ವಿರೋಧ ಪಕ್ಷದ ಗದ್ದಲದ ನಡುವೆಯೇ ಮಸೂದೆ ಅಂಗೀಕರಿಸಲ್ಪಟ್ಟಿತು. ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ (ತಡೆಗಟ್ಟುವಿಕೆ) ಮಸೂದೆಯು ಅನುಮೋದನೆ ಪಡೆಯುವ ಮೊದಲು ದೊಡ್ಡ ಕೋಲಾಹಲಕ್ಕೆ ಕಾರಣವಾಯಿತು.

ಉತ್ತರ ಮತ್ತು ದಕ್ಷಿಣ ಕರ್ನಾಟಕ ಪ್ರದೇಶಗಳ ನಡುವಿನ ಅಭಿವೃದ್ಧಿ ಅಂತರವನ್ನು ಕಡಿಮೆ ಮಾಡುವುದು ಪ್ರಮುಖ ವಿಷಯವಾಗಿಯೇ ಉಳಿಯಿತು. ಸರ್ಕಾರವು ಉತ್ತರ ಕರ್ನಾಟಕಕ್ಕೆ 3,500 ಕೋಟಿ ರೂ.ಗಳ ವಿಶೇಷ ಅಭಿವೃದ್ಧಿ ಪ್ಯಾಕೇಜ್ ಅನ್ನು ಘೋಷಿಸಿತು, ಕೃಷ್ಣ ಮತ್ತು ತುಂಗಭದ್ರಾ ಜಲಾನಯನ ಪ್ರದೇಶಗಳಲ್ಲಿ ನೀರಾವರಿ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಗಣನೀಯ ಅನುದಾನ ಹಂಚಿಕೆ ಮಾಡಿದೆ.. ಉತ್ತರ ಜಿಲ್ಲೆಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗೆ ಆದ್ಯತೆ ನೀಡುವ ತನ್ನ ಸರ್ಕಾರದ ಬದ್ಧತೆಯ ಬಗ್ಗೆ ಸಿಎಂ ಸದನಕ್ಕೆ ಭರವಸೆ ನೀಡಿದರು.

suvarna soudha
ಬೆಳಗಾವಿ ಚಳಿಗಾಲ ಅಧಿವೇಶನ: ಕೇಂದ್ರದ ಸಹಕಾರ ಕೋರಿ ಹಲವು ನಿರ್ಣಯಗಳಿಗೆ ಸರ್ವಾನುಮತದ ಅಂಗೀಕಾರ

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಬಿಜೆಪಿ ನಾಯಕರು ಸದನದ ಒಳಗೆ ಮತ್ತು ಹೊರಗೆ ವಾಗ್ವಾದ ನಡೆಸಿದ್ದರಿಂದ ರಾಜಕೀಯ ಬಿಸಿ ಏರತೊಡಗಿತ್ತು. ಉಭಯ ಸದನಗಳಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ, ಕಲ್ಯಾಣ ಯೋಜನೆಗಳು ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಕುರಿತು ಚರ್ಚೆಗಳು ನಡೆದವು, ಸಚಿವರು ಕಾಲಮಿತಿಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ರಾಜ್ಯ ರಾಜಕೀಯದಲ್ಲಿ ಅಧಿಕಾರ ಬದಲಾವಣೆಯ ಬಿಸಿಬಿಸಿ ಚರ್ಚೆಯ ನಡುವೆಯೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಮುಗಿದಿದೆ. ಅತಿವೃಷ್ಟಿಯಿಂದ ಹಾನಿಗೀಡಾದ ಬೆಳೆಗೆ ಪರಿಹಾರ ಸೇರಿ ಹತ್ತು ಹಲವು ವಿಷಯಗಳ ಕುರಿತು ಸದಸ್ಯರು ಪಕ್ಷಾತೀತವಾಗಿ ಬೆಳಕು ಚೆಲ್ಲಿದರು. ಬೆಳಗಾವಿ ಮತ್ತೊಮ್ಮೆ ರಾಜ್ಯದ ಆಡಳಿತ ಮತ್ತು ಅಭಿವೃದ್ಧಿಯನ್ನು ರೂಪಿಸುವ ನಿರ್ಣಾಯಕ ನಿರ್ಧಾರಗಳಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸಿತ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com