

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಶಂಕರಮಠಕ್ಕೆ ಆಗಮಿಸಿದ್ದ ಶೃಂಗೇರಿ ಮಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳನ್ನು ಮೈಸೂರು ಅರಮನೆಗೆ ಬರಮಾಡಿಕೊಂಡು ರಾಜಮನೆತನದ ಸಂಪ್ರದಾಯ ಪ್ರಕಾರ ಮೈಸೂರು ರಾಜವಂಶಸ್ಥ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಶ್ರೀಗಳ ಪಾದಪೂಜೆ ನೆರವೇರಿಸಿದ್ದಾರೆ.
ಅರಮನೆಗೆ ಶ್ರೀಗಳು ಆಗಮಿಸಿದಾಗ ಪೂರ್ಣಕುಂಭ, ಮಂತ್ರಘೋಷದೊಂದಿಗೆ ಬರಮಾಡಿಕೊಂಡರು. ನಂತರ ಅರಮನೆ ಕಲ್ಯಾಣಮಂಟಪದಲ್ಲಿ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್, ಯದುವೀರ್ ಒಡೆಯರ್ ತಮ್ಮ ಕುಟುಂಬ ಸಮೇತ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಬಳಿಕ ವಿಧುಶೇಖರ ಭಾರತಿ ಸ್ವಾಮಿಗಳ ಪಾದಪೂಜೆ ನೆರವೇರಿಸಿದರು.
Advertisement