ಹೊಸ ತ್ಯಾಜ್ಯ ನೀರಿನ ಘಟಕ ಸ್ಥಾಪನೆ: 665 ಮರ ಕತ್ತರಿಸಲು GBA ಅನುಮತಿ ಕೋರಿದ ಜಲಮಂಡಳಿ

ಸ್ಥಳದಿಂದ ಒಟ್ಟು 355 ಮರಗಳನ್ನು ತೆಗೆದುಹಾಕಬೇಕಾಗಿದೆ. ಅಧಿಸೂಚನೆ ದಿನಾಂಕದಿಂದ 10 ದಿನಗಳಲ್ಲಿ GBA ಅರಣ್ಯ ಇಲಾಖೆಯು ಸಾರ್ವಜನಿಕರಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಿದೆ" ಎಂದು GBA ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
GBA
ಜಿಬಿಎ
Updated on

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (ಬಿಡಬ್ಲ್ಯೂಎಸ್ಎಸ್ಬಿ) ದೊಡ್ಡಬೆಲೆ ಮತ್ತು ಮಲ್ಲಸಂದ್ರ ಪ್ರದೇಶಗಳಲ್ಲಿ ಒಳಚರಂಡಿ ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ಸ್ಥಾಪಿಸಲು 615 ಮರಗಳನ್ನು ಕತ್ತರಿಸಲು ಅನುಮೋದನೆ ಕೋರಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು (ಜಿಬಿಎ) ಸಂಪರ್ಕಿಸಿದೆ.

ನವದೆಹಲಿ ಮೂಲದ ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ಕಳೆದ ತಿಂಗಳು ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ತನ್ನ ಎರಡು ಎಕರೆ ಕಾಂಪೌಂಡ್‌ನಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ 355 ಮರಗಳನ್ನು ಕಡಿಯಲು ಅಥವಾ ಸ್ಥಳಾಂತರಿಸಲು ಜಿಬಿಎ ಅನುಮತಿ ಕೋರಿತ್ತು.

ಡಿಸೆಂಬರ್ 24 ರಂದು ಪ್ರಕಟವಾದ ಅಧಿಸೂಚನೆಯ ಪ್ರಕಾರ, ವೃಷಭಾವತಿ ಕಣಿವೆ ವಿಭಾಗದ ತ್ಯಾಜ್ಯ ನೀರು ನಿರ್ವಹಣಾ ಯೋಜನೆಗಳ ಕಾರ್ಯನಿರ್ವಾಹಕ ಎಂಜಿನಿಯರ್ 100 ಎಂಎಲ್‌ಡಿ ಎಸ್‌ಟಿಪಿ ನಿರ್ಮಿಸಲು ಜಲಮಂಡಳಿಯ ದೊಡ್ಡಬೆಲೆ ಆವರಣದಲ್ಲಿರುವ ಮರಗಳನ್ನು ಕತ್ತರಿಸಲು ಅನುಮತಿಗಾಗಿ ಜಿಬಿಎಯ ಮರ ಅಧಿಕಾರಿ/ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಜಲಮಂಡಳಿ ತಿಳಿಸಿದೆ.

ಸ್ಥಳದಿಂದ ಒಟ್ಟು 355 ಮರಗಳನ್ನು ತೆಗೆದುಹಾಕಬೇಕಾಗಿದೆ. ಅಧಿಸೂಚನೆ ದಿನಾಂಕದಿಂದ 10 ದಿನಗಳಲ್ಲಿ GBA ಅರಣ್ಯ ಇಲಾಖೆಯು ಸಾರ್ವಜನಿಕರಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಿದೆ" ಎಂದು GBA ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

GBA
ಬೆಂಗಳೂರು: JCB ನುಗ್ಗಿಸಿದ GBA; 200ಕ್ಕೂ ಹೆಚ್ಚು ಮನೆಗಳು ನೆಲಸಮ!

ಮಲ್ಲಸಂದ್ರದಲ್ಲಿ ಮತ್ತೊಂದು 100 MLD ಸಾಮರ್ಥ್ಯದ STP ಗಾಗಿ 310 ಮರಗಳನ್ನು ತೆಗೆದುಹಾಕಲು ಅನುಮೋದನೆ ಕೋರಿ ಮಂಡಳಿಯು ಅರಣ್ಯ ಇಲಾಖೆಗೆ ಮನವಿ ಕಳುಹಿಸಿದೆ ಎಂದು ಅಧಿಕಾರಿ ಹೇಳಿದರು.

GBA ಯ ಅರಣ್ಯ ವಿಭಾಗದ ಅಧಿಕಾರಿಯೊಬ್ಬರು, ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ, 1976 ರ ಸೆಕ್ಷನ್ 3 (3) (vii) ಅಡಿಯಲ್ಲಿ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು. ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಮರ ಸಮಿತಿಯ ಮುಂದೆ ಇಡಲಾಗುವುದು ಮತ್ತು ಅದರ ವರದಿಯ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು" ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಸಾರ್ವಜನಿಕರು ತ್ಯಾಜ್ಯ ನೀರು ನಿರ್ವಹಣಾ ಯೋಜನೆಯ ಕುರಿತು ಸಲಹೆಗಳು ಮತ್ತು ಆಕ್ಷೇಪಣೆಗಳನ್ನು ನೇರವಾಗಿ ಕಾರ್ಯನಿರ್ವಾಹಕ ಎಂಜಿನಿಯರ್, eewwmp-vv@bwssb.gov.in ಗೆ ಕಳುಹಿಸಬಹುದು . ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಮರ ಅಧಿಕಾರಿ, ಜಿಬಿಎ, ಎನ್ಆರ್ ಸ್ಕ್ವೇರ್, ಬೆಂಗಳೂರು-560002 ಅಥವಾ dcfbbmp12@gmail.com ಗೆ 10 ದಿನಗಳ ಒಳಗೆ ಕಳುಹಿಸಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com