ಬೆಂಗಳೂರು ರೈಲ್ವೆ ವಿಭಾಗಕ್ಕೆ"ಕವಚ್" ಸುರಕ್ಷತೆ; 1,144 ಕಿ.ಮೀ. ವ್ಯಾಪ್ತಿಯಲ್ಲಿ ವ್ಯವಸ್ಥೆ ಅಳವಡಿಕೆ!

ಲಕ್ನೋ ಮೂಲದ ಭಾರತೀಯ ರೈಲ್ವೆಯ ಸಂಶೋಧನಾ ವಿನ್ಯಾಸ ಮತ್ತು ಮಾನದಂಡಗಳ ಸಂಸ್ಥೆ ಅಭಿವೃದ್ಧಿಪಡಿಸಿದ ಕವಚ್, ಪ್ರತಿ ರೈಲಿನ ವೇಗವು ಸಿಗ್ನಲಿಂಗ್ ವ್ಯವಸ್ಥೆಯು ನಿಗದಿಪಡಿಸಿದ ಮಿತಿಯೊಳಗೆ ಉಳಿಯುವಂತೆ ನೋಡಿಕೊಳ್ಳುತ್ತದೆ.
Kavach
ಕವಚ್ online desk
Updated on

ನವದೆಹಲಿ: ಭಾರತೀಯ ರೈಲ್ವೆ ಅಳವಡಿಸಿಕೊಂಡಿರುವ ಸ್ವಯಂಚಾಲಿತ ರೈಲು ರಕ್ಷಣಾ ವ್ಯವಸ್ಥೆಯಾದ ಕವಚ್ ನ್ನು ಬೆಂಗಳೂರು ರೈಲ್ವೆ ಜಾಲದಾದ್ಯಂತ ಅಳವಡಿಸಲಾಗುವುದು ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಮಿತೇಶ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.

ಲಕ್ನೋ ಮೂಲದ ಭಾರತೀಯ ರೈಲ್ವೆಯ ಸಂಶೋಧನಾ ವಿನ್ಯಾಸ ಮತ್ತು ಮಾನದಂಡಗಳ ಸಂಸ್ಥೆ ಅಭಿವೃದ್ಧಿಪಡಿಸಿದ ಕವಚ್, ಪ್ರತಿ ರೈಲಿನ ವೇಗವು ಸಿಗ್ನಲಿಂಗ್ ವ್ಯವಸ್ಥೆಯು ನಿಗದಿಪಡಿಸಿದ ಮಿತಿಯೊಳಗೆ ಉಳಿಯುವಂತೆ ನೋಡಿಕೊಳ್ಳುತ್ತದೆ. ರೈಲು ನಿಗದಿತ ವೇಗವನ್ನು ಮೀರಿದರೆ ಅಥವಾ ಪ್ರತಿಕ್ರಿಯಿಸಲು ವಿಫಲವಾದರೆ, ವ್ಯವಸ್ಥೆಯು ತುರ್ತು ಬ್ರೇಕ್‌ಗಳನ್ನು ತ್ವರಿತವಾಗಿ ಸಕ್ರಿಯಗೊಳಿಸುತ್ತದೆ ಮತ್ತು ರೈಲನ್ನು ನಿಲ್ಲಿಸುತ್ತದೆ, ಇದರಿಂದಾಗಿ ಯಾವುದೇ ರೀತಿಯ ಘರ್ಷಣೆ, ಅಪಘಾತಗಳನ್ನು ತಪ್ಪಿಸಬಹುದಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ADRM) ಅಶುತೋಷ್ ಮಾಥುರ್ ಸೋಮವಾರ TNIE ಗೆ ಬೆಂಗಳೂರು ವಿಭಾಗದ 1,144 ಕಿ.ಮೀ. ವ್ಯಾಪ್ತಿಯಲ್ಲಿ ಕವಚ್ ನ್ನು ಎರಡು ಹಂತಗಳಲ್ಲಿ ಅಳವಡಿಸಲಾಗುವುದು ಎಂದು ಹೇಳಿದರು. "ಮೊದಲ ಹಂತದಲ್ಲಿ ಒಟ್ಟು 684 ಕಿ.ಮೀ. ಮಾರ್ಗವನ್ನು 329 ಕೋಟಿ ರೂ.ಗಳಲ್ಲಿ ಮಂಜೂರು ಮಾಡಲಾಗಿದೆ. ಇದು ಬೈಯಪ್ಪನಹಳ್ಳಿಯಿಂದ ಪೆನುಕೊಂಡ, ಕೆಎಸ್ಆರ್ ಬೆಂಗಳೂರು ನಗರದಿಂದ ಜೋಲಾರಪೇಟೆ, ಕೆಎಸ್ಆರ್ ಬೆಂಗಳೂರು ನಿಂದ ಸಂಪಿಗೆ ರಸ್ತೆ ಮತ್ತು ಕೆಎಸ್ಆರ್ ಬೆಂಗಳೂರು ನಿಂದ ಯಲಿಯೂರು ಎಂಬ ನಾಲ್ಕು ಮಾರ್ಗಗಳನ್ನು ಒಳಗೊಂಡಿದೆ" ಎಂದು ಅವರು ಹೇಳಿದರು.

ಎರಡನೇ ಹಂತದಲ್ಲಿ, ಧರ್ಮಪುರಿಯಿಂದ ಓಮಲೂರು, ಪೆನುಕೊಂಡದಿಂದ ಧರ್ಮಾವರಂ, ಚಿಕ್ಕಬನ್ನವರದಿಂದ ಹಾಸನ ಮತ್ತು ಯಲಹಂಕದಿಂದ ಬಂಗಾರಪೇಟೆಗೆ 460 ಕಿ.ಮೀ. ಮಾರ್ಗವನ್ನು 239 ಕೋಟಿ ರೂ.ಗಳಲ್ಲಿ ಕ್ರಮಿಸಲಾಗುವುದು.

Kavach
ಕೇಂದ್ರ ಬಜೆಟ್ 2022: 3 ವರ್ಷಗಳಲ್ಲಿ 400 ಹೊಸ ತಲೆಮಾರಿನ ವಂದೇ ಭಾರತ್ ರೈಲು; ಕವಚ್ ಅಡಿ 2,000 ಕಿಮೀ ರೈಲ್ವೇ ಜಾಲ ನಿರ್ಮಾಣ

"ಕವಚ ವ್ಯವಸ್ಥೆಯನ್ನು ನಮ್ಮ ಹಳಿಗಳಾದ್ಯಂತ ಮತ್ತು ನಮ್ಮ ರೈಲುಗಳ ಲೋಕೋಮೋಟಿವ್‌ಗಳಲ್ಲಿ ಅಳವಡಿಸಲಾಗುವುದು" ಎಂದು ಎಡಿಆರ್‌ಎಂ ತಿಳಿಸಿದ್ದಾರೆ.

ಇದಕ್ಕೂ ಮೊದಲು, ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ, ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಅವರು ಕರ್ನಾಟಕದಲ್ಲಿ 1,672 ಕಿ.ಮೀ.ಗಳಲ್ಲಿ ಕವಚ್ ಅಳವಡಿಕೆಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಹೇಳಿದ್ದರು. ಆರಂಭದಲ್ಲಿ ರಾಜ್ಯದ 132 ನಿಲ್ದಾಣಗಳಲ್ಲಿ 1,703 ಕಿ.ಮೀ.ಗಳಿಗೆ ಇದನ್ನು ಮಂಜೂರು ಮಾಡಲಾಗಿತ್ತು ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com