ಹಾವೇರಿ: ಮಗುವಿನ ಕೆನ್ನೆಯ ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಬಳಸಿದ್ದ ನರ್ಸ್ ಅಮಾನತು

ಮಗುವಿನ ಚಿಕಿತ್ಸೆಗಾಗಿ ಫೆವಿಕ್ವಿಕ್ ಬಳಸುವ ಮೂಲಕ ಕರ್ತವ್ಯ ಲೋಪ ಎಸಗಿದ ಸಿಬ್ಬಂದಿ ನರ್ಸ್ ಅನ್ನು ಪ್ರಾಥಮಿಕ ವರದಿಯ ನಂತರ ಅಮಾನತುಗೊಳಿಸಲಾಗಿದೆ
file pic
ಸಾಂದರ್ಭಿಕ ಚಿತ್ರonline desk
Updated on

ಬೆಂಗಳೂರು: ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಬಳಸಿದ್ದಕ್ಕಾಗಿ ಹಾವೇರಿ ಸರ್ಕಾರಿ ಆಸ್ಪತ್ರೆಯ ನರ್ಸ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಬುಧವಾರ ಕರೆಯಲಾದ ಸಭೆಯಲ್ಲಿ ಅವರನ್ನು ಅಮಾನತುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಫೆವಿಕ್ವಿಕ್ ಒಂದು ಅಂಟಿಕೊಳ್ಳುವ ದ್ರಾವಣವಾಗಿದ್ದು, ನಿಯಮಗಳ ಅಡಿಯಲ್ಲಿ ವೈದ್ಯಕೀಯ ಬಳಕೆಗೆ ಅನುಮತಿಸಲಾಗುವುದಿಲ್ಲ. ಈ ಸಂದರ್ಭದಲ್ಲಿ, ಮಗುವಿನ ಚಿಕಿತ್ಸೆಗಾಗಿ ಫೆವಿಕ್ವಿಕ್ ಬಳಸುವ ಮೂಲಕ ಕರ್ತವ್ಯ ಲೋಪ ಎಸಗಿದ ಸಿಬ್ಬಂದಿ ನರ್ಸ್ ಅನ್ನು ಪ್ರಾಥಮಿಕ ವರದಿಯ ನಂತರ ಅಮಾನತುಗೊಳಿಸಲಾಗಿದೆ ಮತ್ತು ನಿಯಮಗಳ ಪ್ರಕಾರ ಹೆಚ್ಚಿನ ತನಿಖೆ ಬಾಕಿ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರ ಕಚೇರಿಯ ತಿಳಿಸಿದೆ.

ಜನವರಿ 14ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಟ ಆಡುವಾಗ ಬಿದ್ದು 7 ವರ್ಷದ ಗುರುಕಿಶನ್ ಕೆನ್ನೆಗೆ ಗಾಯವಾಗಿತ್ತು. ಗುರುಕಿಶನ್‌ನನ್ನು ಚಿಕಿತ್ಸೆಗೆಂದು ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪೋಷಕರು ಕರೆದೊಯ್ದಿದ್ದರು. ಕರ್ತವ್ಯದಲ್ಲಿದ್ದ ನರ್ಸ್ ಜ್ಯೋತಿ ಚಿಕಿತ್ಸೆ ನೀಡುವಾಗ ಕೆನ್ನೆಗೆ ಸ್ಟಿಚ್ ಹಾಕುವ ಬದಲು ಫೆವಿಕ್ವಿಕ್ ಹಾಕಿದ್ದರು

ಇದು ಪೋಷಕರ ಗಮನಕ್ಕೆ ಬಂದು ಏಕೆ ಹೀಗೆ ಮಾಡಿದ್ರಿ ಎಂದು ದಾದಿಯನ್ನು ಕೇಳಿದಾಗ, ಕೆನ್ನೆಗೆ ಸ್ಟಿಚ್ ಹಾಕಿದ್ರೆ ಕಲೆ ಆಗುತ್ತದೆ. ಅದಕ್ಕೆ ಫೆವಿಕ್ವಿಕ್ ಹಾಕಿದ್ದೇನೆ. ಕಳೆದ ಐದು ವರ್ಷದಿಂದ ಇದನ್ನೇ ಮಾಡುತ್ತಿದ್ದೇನೆ ಎಂದು ಉಡಾಫೆಯಿಂದ ಉತ್ತರಿಸಿದ್ದಾರೆ. ಇದರಿಂದ ಕಂಗಾಲಾದ ಪೋಷಕರು, ಆರೋಗ್ಯ ಕೇಂದ್ರದ ರಕ್ಷಣಾ ಸಮಿತಿಗೆ ದೂರು ಕೊಟ್ಟಿದ್ದಾರೆ

ಕಳವಳವನ್ನು ಹೊರಹಾಕುತ್ತಿರುವ ವೀಡಿಯೊವನ್ನು ಪೋಷಕರು ರೆಕಾರ್ಡ್ ಮಾಡಿದ್ದರು. ಘಟನೆಯನ್ನು ವಿಡಿಯೋ ಮಾಡಿದ ಪೋಷಕರು ಅಧಿಕೃತ ದೂರು ದಾಖಲಿಸಿದರು ಮತ್ತು ವೀಡಿಯೊವನ್ನು ಸಹ ಸಲ್ಲಿಸಿದರು.

ವೀಡಿಯೊ ಸಾಕ್ಷ್ಯಾಧಾರಗಳ ಹೊರತಾಗಿಯೂ, ಜ್ಯೋತಿಯನ್ನು ಅಮಾನತುಗೊಳಿಸುವ ಬದಲು, ಅಧಿಕಾರಿಗಳು ಫೆಬ್ರವರಿ 3 ರಂದು ಅವರನ್ನು ಮತ್ತೊಂದು ಆರೋಗ್ಯ ಕೇಂದ್ರಕ್ಕೆ - ಹಾವೇರಿ ತಾಲ್ಲೂಕಿನ ಗುತ್ತಲ್ ಆರೋಗ್ಯ ಸಂಸ್ಥೆಗೆ - ವರ್ಗಾಯಿಸಿದರು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com