ದೇಶ ವಿರೋಧಿ ಭಾವನೆ ಕೆರಳಿಸಲು ನ್ಯಾಯಾಂಗದ ಅಸ್ತ್ರ: ಜಗದೀಪ್ ಧಂಖರ್ ವಿಷಾದ

ನಮ್ಮ ಸಂವಿಧಾನ ಪ್ರತಿಯೊಬ್ಬ ವ್ಯಕ್ತಿಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಕ್ಕನ್ನು ನೀಡಿರುವುದರಿಂದ ಯಾವುದು ಸರಿ? ಎಂಬುದರ ಬಗ್ಗೆ ಕಳವಳಗೊಂಡಿದ್ದೇನೆ ಎಂದರು.
 Dhankhar
ಜಗದೀಪ್ ಧಂಖರ್
Updated on

ಹಾವೇರಿ: ಇತ್ತೀಚಿನ ದಿನಗಳಲ್ಲಿ ಇತರ ಯಾವುದೇ ರಾಷ್ಟ್ರಗಳಲ್ಲಿ ಇಲ್ಲದ ರೀತಿಯಲ್ಲಿ ದೇಶದಲ್ಲಿ ನ್ಯಾಯಾಂಗವನ್ನು ಅಸ್ತ್ರವನ್ನಾಗಿಸಿಕೊಳ್ಳಲಾಗುತ್ತಿದೆ ಎಂದು ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ಹೇಳಿದ್ದಾರೆ.

ದೇಶದೊಳಗಿನ ಚುನಾವಣಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುವ ಪ್ರಯತ್ನಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಉಪರಾಷ್ಟ್ರಪತಿ, ಹಳ್ಳಿ, ನಗರ, ರಾಜ್ಯ ಅಥವಾ ರಾಷ್ಟ್ರವಾಗಲಿ ಎಲ್ಲಾ ಹಂತದಲ್ಲೂ ಹಳ್ಳೆಯ, ಬಲಿಷ್ಠ, ಹೆಚ್ಚಿನ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ವಿಶ್ವದ ಏಕೈಕ ದೇಶವಾಗಿರುವ ಭಾರತದಲ್ಲಿ ಚುನಾವಣಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಬಾರದ ರೀತಿಯಲ್ಲಿ ಪ್ರಭಾವ ಬೀರುವ ಪ್ರಯತ್ನ ನಡೆಯುತ್ತಿದೆ ಎಂದರು.

ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ನಡೆದ ಕರ್ನಾಟಕ ವೈಭವ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದ ಮೂರನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಭಜಕ ಶಕ್ತಿಗಳು ವಿಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಅವರು ಹೊಸ ಮಾರ್ಗಗಳನ್ನು ಅಳವಡಿಸಿಕೊಂಡಿದ್ದು, ಅನೇಕ ವಿಷಯಗಳಲ್ಲಿ ನ್ಯಾಯಾಂಗದತ್ತ ಮುಖಮಾಡುವುದನ್ನು ನೀವು ನೋಡುತ್ತೀರಿ. ನಮ್ಮ ಸಂವಿಧಾನ ಪ್ರತಿಯೊಬ್ಬ ವ್ಯಕ್ತಿಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಕ್ಕನ್ನು ನೀಡಿರುವುದರಿಂದ ಯಾವುದು ಸರಿ? ಎಂಬುದರ ಬಗ್ಗೆ ಕಳವಳಗೊಂಡಿದ್ದೇನೆ ಎಂದರು.

ಆದರೆ ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರವಿರೋಧಿ ಭಾವನೆಗಳನ್ನು ಕೆರಳಿಸಲು ಹಣವನ್ನು ಬಳಸಲಾಗುತ್ತಿದೆ. ನ್ಯಾಯಾಂಗವನ್ನು ಬೇರೆ ಯಾವುದೇ ದೇಶದಲ್ಲಿ ಇಲ್ಲದ ರೀತಿಯಲ್ಲಿ ಅಸ್ತ್ರವನ್ನಾಗಿ ಮಾಡಿಕೊಳ್ಳಲಾಗುತ್ತಿದೆ. ರಾಷ್ಟ್ರಕ್ಕೆ ಸವಾಲು ಹಾಕುವ ಮತ್ತು ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆಯ ನಡುವೆ ಘರ್ಷಣೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಶಕ್ತಿಗಳಿಗೆ ಬಲವಾದ ಪ್ರತಿಕ್ರಿಯೆಯನ್ನು ನೀಡಬೇಕು. ರಾಷ್ಟ್ರದ ಸಾಂಸ್ಕೃತಿಕ ತತ್ವವನ್ನು ಸಂರಕ್ಷಿಸುವ ಅಗತ್ಯವಿದೆ ಎಂದರು.

 Dhankhar
ಕೃಷಿ ಕ್ಷೇತ್ರಕ್ಕೆ ನೀಡುವ ಯಾವುದೇ ಸಬ್ಸಿಡಿ ನೇರವಾಗಿ ರೈತರಿಗೆ ತಲುಪಬೇಕು: ಉಪ ರಾಷ್ಟ್ರಪತಿ ಜಗದೀಪ್ ಧಂಖರ್

ಭಾರತದ ಆರ್ಥಿಕ ಪ್ರಗತಿಯನ್ನು ಉಲ್ಲೇಖಿಸಿದ ಅವರು, "ಐಎಂಎಫ್, ವಿಶ್ವಬ್ಯಾಂಕ್ ಮತ್ತು ಇತರ ಪ್ರಮುಖ ಸಂಸ್ಥೆಗಳು ಹೂಡಿಕೆ, ಅವಕಾಶಗಳು ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು ಜಗತ್ತಿನಲ್ಲಿ ಯಾವುದೇ ದೇಶ ಇದ್ದರೆ ಅದು ಭಾರತ ಎಂದು ಹೇಳುತ್ತದೆ. ಹೂಡಿಕೆ ಮತ್ತು ಅವಕಾಶಗಳಿಗಾಗಿ ಭಾರತವನ್ನು ಜಾಗತಿಕ ನೆಚ್ಚಿನ ತಾಣವೆಂದು ಪರಿಗಣಿಸಲಾಗಿದೆ ಎಂದು ಧಂಖರ್ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com