ಅಯೋಧ್ಯೆಯಲ್ಲಿರುವ ರಾಮನೇ ಬೇರೆ, ವಾಲ್ಮೀಕಿ ಬರೆದಿದ್ದ ಶ್ರೀರಾಮನೇ ಬೇರೆ: ಎಚ್.ಸಿ ಮಹಾದೇವಪ್ಪ

ವಾಲ್ಮೀಕಿ ಶ್ರೀರಾಮನ ಸೃಷ್ಟಿಕರ್ತ. ಅಯೋಧ್ಯೆಯ ರಾಮ ಹಾಗೂ ವಾಲ್ಮೀಕಿಯ ರಾಮರಾಜ್ಯದ ಪರಿಕಲ್ಪನೆಯ ನಡುವೆ ವ್ಯತ್ಯಾಸಗಳಿವೆ ಎಂದು ಪ್ರತಿಪಾದಿಸಿದರು.
H C mahadevappa
ಎಚ್.ಸಿ ಮಹಾದೇವಪ್ಪ
Updated on

ದಾವಣಗೆರೆ: ವಾಲ್ಮೀಕಿ ಬರೆದಿದ್ದ ಶ್ರೀರಾಮನೇ ಬೇರೆ, ಅಯೋಧ್ಯೆಯಲ್ಲಿರುವ ಶ್ರೀರಾಮನೇ ಬೇರೆ. ವಾಲ್ಮೀಕಿಯಿಂದ ಶ್ರೀರಾಮನೋ, ಶ್ರೀರಾಮನಿಂದ ವಾಲ್ಮೀಕಿಯೊ ಎಂಬ ಕುರಿತು ಚಿಂತನೆ ಮಾಡುವ ಅಗತ್ಯವಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದ್ದಾರೆ.

ಹರಿಹರ ತಾಲ್ಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಭಾನುವಾರ ನಡೆದ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಶ್ರೀರಾಮನ ಸೃಷ್ಟಿಕರ್ತ. ಅಯೋಧ್ಯೆಯ ರಾಮ ಹಾಗೂ ವಾಲ್ಮೀಕಿಯ ರಾಮರಾಜ್ಯದ ಪರಿಕಲ್ಪನೆಯ ನಡುವೆ ವ್ಯತ್ಯಾಸಗಳಿವೆ ಎಂದು ಪ್ರತಿಪಾದಿಸಿದರು.

ವಾಲ್ಮೀಕಿ ರಾಮಾಯಣದಲ್ಲಿ ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡಿದಾಗ ಇಡೀ ಜಗತ್ತು ಸಂತೋಷಪಟ್ಟಿತ್ತು. ಪಟ್ಟಾಭಿಷೇಕವಾದಾಗ ಹಾಗೂ ವನವಾಸಕ್ಕೆ ತೆರಳುವಾಗ ಶ್ರೀರಾಮ ಸ್ಥಿತಪ್ರಜ್ಞನಾಗಿದ್ದನು. ಯಥಾಸ್ಥಿತಿವಾದವನ್ನು ಧರ್ಮ ಪ್ರತಿಪಾದಿಸುತ್ತದೆ ಎಂಬುದನ್ನು ಈ ಮೂಲಕ ವಾಲ್ಮೀಕಿ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.

H C mahadevappa
ಮೆಕಾಲೆ ಶಿಕ್ಷಣ ವ್ಯವಸ್ಥೆ ಉದಾರೀಕರಣಗೊಳಿಸದಿದ್ದರೆ ಸನಾತನವಾದಿಗಳ ಮನೆಯಲ್ಲಿ ಗುಲಾಮನಾಗಿರುತ್ತಿದ್ದೆ ಎಂದಿದ್ದರು ಕುವೆಂಪು: ಮಹಾದೇವಪ್ಪ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com