
ಕನ್ನಡಪ್ರಭ.ಕಾಮ್ ನ ಹಣಕ್ಲಾಸು ಅಂಕಣಕಾರ, ಆರ್ಥಿಕ ಸಲಹೆಗಾರರೂ ಆಗಿರುವ ರಂಗಸ್ವಾಮಿ ಮೂಕನಹಳ್ಳಿ ಅವರ ಜಪಾನಿನಲ್ಲಿ ರಂಗ ಪುಸ್ತಕ ಫೆ.10 ರಂದು ಲೋಕಾರ್ಪಣೆ ಮಾಡಲಾಯಿತು.
ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ್ ಭಟ್ ಕೃತಿಯನ್ನು ಲೋಕಾರ್ಪಣೆ ಮಾಡಿದರು. ಜಪಾನ್ ಬಗ್ಗೆ ಕನ್ನಡದಲ್ಲಿ ಬಂದಿರುವ ಅಪರೂಪದ ಪುಸ್ತಕ ಇದಾಗಿದ್ದು, ಜಪಾನ್ ಕುರಿತು ಸ್ಥಳೀಯ ಓದುಗರಿಗೆ ಈ ಕೃತಿ ಸಮಗ್ರ ಪರಿಚಯ ನೀಡುತ್ತದೆ.
ಕನ್ನಡದಲ್ಲಿ ಸ್ವಾರಸ್ಯಕರವಾಗಿ ಬರೆಯುವ ರಂಗಸ್ವಾಮಿಯವರು ಅತ್ಯಂತ ಅಗತ್ಯವಿದ್ದ ಕೃತಿಯೊಂದನ್ನು ಕನ್ನಡದ ಓದುಗರಿಗೆ ನೀಡಿದ್ದಾರೆ. ಕನ್ನಡದ ಮಟ್ಟಿಗೆ ಜಪಾನ್ ಕುರಿತ ಪುಸ್ತಕಗಳು ಕಡಿಮೆ ಈ ಪುಸ್ತಕ ದೊಡ್ಡ ಕೊರತೆಯನ್ನು ನೀಗಿಸುತ್ತದೆ ಎಂದು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಪತ್ರಕರ್ತ ವಿಶ್ವೇಶ್ವರ್ ಭಟ್ ಹೇಳಿದ್ದಾರೆ. ಸೀಮಾ ಪ್ರಕಾಶನದಿಂದ ಈ ಪುಸ್ತಕ ಪ್ರಕಟವಾಗಿದೆ. ಕಾರ್ಯಕ್ರಮದಲ್ಲಿ ಲೇಖಕ, ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ, ಸಾವಣ್ಣ ಪ್ರಕಾಶಕರಾದ ಜಮೀಲ್ ಸಾವಣ್ಣ ಅನುವಾದಕರಾದ ನಲ್ಲತಂಬಿ, ಮೋಹನ್ ಮತ್ತಿತರರು ಉಪಸ್ಥಿತರಿದ್ದರು.
ಪುಸ್ತಕ ಅತ್ಯಂತ ಜನಪ್ರಿಯತೆ ಗಳಿಸಿದ್ದು, ಬಿಡುಗಡೆಯಾದ ಬೆನ್ನಲ್ಲೇ ಪ್ರೀ ಆರ್ಡರ್ ನಲ್ಲಿ ಖರ್ಚಾಗಿ ಮರುಮುದ್ರಣವಾಗುತ್ತಿದೆ.
Advertisement