ಪ್ರಯಾಣ ದರ ಏರಿಸಿದ್ದ ಮೆಟ್ರೋಗೇ ಶಾಕ್: ಒಂದೇ ದಿನ 80 ಸಾವಿರ ಪ್ರಯಾಣಿಕರ ಸಂಖ್ಯೆ ಕುಸಿತ! ದರ ಏರಿಕೆಗೆ BMRCL ಸಿಬ್ಬಂದಿಗಳಿಂದಲೇ ಆಕ್ರೋಶ

ಪ್ರಯಾಣ ದರ ಏರಿಕೆಯನ್ನು ಮೌನವಾಗಿಯೇ ಖಂಡಿಸಿರುವ ಪ್ರಯಾಣಿಕರು, ದುಬಾರಿ ಮೆಟ್ರೋ ಪ್ರಯಾಣವನ್ನು ಬಹಿಷ್ಕರಿಸಿ, ನಿಗದಿತ ಸ್ಥಳಗಳಿಗೆ ತೆರಳಲು ಪರ್ಯಾಯ ಆಯ್ಕೆಗಳನ್ನು ಹುಡುಕಿಕೊಂಡಿದ್ದಾರೆ.
Namma metro
ನಮ್ಮ ಮೆಟ್ರೊonline desk
Updated on

ಬೆಂಗಳೂರು: ಭಾರಿ ಪ್ರಮಾಣದಲ್ಲಿ ಪ್ರಯಾಣ ದರವನ್ನು ಏರಿಕೆ ಮಾಡಿದ್ದ ನಮ್ಮ ಮೆಟ್ರೋಗೆ ಪ್ರಯಾಣಿಕರ ಅಸಮಾಧಾನದ ಬಿಸಿ ತಟ್ಟಿದೆ.

ಪ್ರಯಾಣ ದರ ಏರಿಕೆಯನ್ನು ಮೌನವಾಗಿಯೇ ಖಂಡಿಸಿರುವ ಪ್ರಯಾಣಿಕರು, ದುಬಾರಿ ಮೆಟ್ರೋ ಪ್ರಯಾಣವನ್ನು ಬಹಿಷ್ಕರಿಸಿ, ನಿಗದಿತ ಸ್ಥಳಗಳಿಗೆ ತೆರಳಲು ಪರ್ಯಾಯ ಆಯ್ಕೆಗಳನ್ನು ಹುಡುಕಿಕೊಂಡಿದ್ದಾರೆ.

ನೆನ್ನೆ ಒಂದೇ ದಿನ (ಫೆ.11) ರಂದು ಒಂದೇ ದಿನ ಸುಮಾರು 80 ಸಾವಿರದಷ್ಟು ಪ್ರಯಾಣಿಕರ ಸಂಖ್ಯೆಯ ಕುಸಿತವನ್ನು ಮೆಟ್ರೋ ದಾಖಲಿಸಿದೆ.

ಮೆಟ್ರೋ ಪ್ರಯಾಣ ದರ ಏರಿಕೆಯ ನಂತರ 7,78,774 ಮಂದಿ ಪ್ರಯಾಣಿಕರಿದ್ದಾರೆ. ಫೆ.4 ರಂದು 8,58,417 ಮಂದಿ ಪ್ರಯಾಣಿಸಿದ್ದರು. ಪ್ರಯಾಣಿಕರ ಸಂಖ್ಯೆ ಫೆ.10 ರಂದು 8,28,149 ರಷ್ಟಿತ್ತು. ಒಟ್ಟಾರೆ 79,643 ಮಂದಿ ಒಂದೇ ದಿನದಲ್ಲಿ ಮೆಟ್ರೋ ಪ್ರಯಾಣವನ್ನು ತೊರೆದಿದ್ದಾರೆ.

Namma metro
"ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಪ್ರಕ್ರಿಯೆ ಆರಂಭಿಸಿದ್ದೇ ನೀವು, ದರ ಕಡಿಮೆ ಮಾಡಲು ನಿಮ್ಮನ್ನು ತಡೆಯುತ್ತಿರುವುದು ಏನು?": CM ಗೆ Tejasvi Surya

ಬೆಲೆ ಏರಿಕೆಯ ಆಧಾರ ಅರ್ಥವೇ ಆಗುತ್ತಿಲ್ಲ; ಮೆಟ್ರೋ ಸಿಬ್ಬಂದಿಯ ಆಕ್ರೋಶ!

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಗೆ ಸ್ವತಃ ಮೆಟ್ರೋ ಸಿಬ್ಬಂದಿಗಳೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. " ಪ್ರಯಾಣ ದರದಲ್ಲಿ ಭಾರಿ ಏರಿಕೆಯಾಗಿರುವುದರಿಂದ ನಾನು ಮೆಟ್ರೋ ನಲ್ಲಿ ಕಚೇರಿಗೆ ಬರುವುದನ್ನು ನಿಲ್ಲಿಸಿದ್ದೇನೆ. ಯಾವ ಆಧಾರದಲ್ಲಿ ಬೆಲೆ ಏರಿಕೆ ಮಾಡಿದ್ದಾರೆ ಎಂಬುದು ನಮಗೂ ಅರ್ಥವಾಗುತ್ತಿಲ್ಲ. ನಾನು ದ್ವಿಚಕ್ರವಾಹನದಲ್ಲಿ ಕಚೇರಿಗೆ ಆಗಮಿಸಿದರೆ ಹಣ ಉಳಿಯುತ್ತದೆ. ಶೇ.46 ರಷ್ಟು ಏರಿಕೆ ಎಂದು ಹೇಳಲಾಗುತ್ತಿದೆ. ಆದರೆ ಶೇ.100 ಕ್ಕಿಂತ ಹೆಚ್ಚು ಏರಿಕೆಯಾಗಿದೆ. ದಿನಕ್ಕೆ 100 ರೂಪಾಯಿ ಕೇವಲ ಪ್ರಯಾಣಕ್ಕೆ ಖರ್ಚು ಮಾಡಲು ಸಾಧ್ಯವಿಲ್ಲ" ಎಂದು ಮೆಟ್ರೋ ಸಿಬ್ಬಂದಿಗಳೇ ಮಾಧ್ಯಮಗಳೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com