ರಾಜ್ಯ ಸರ್ಕಾರ, ನಿಗಮ-ಮಂಡಳಿ ಮುಖ್ಯಸ್ಥರಿಗೆ ನೊಟೀಸ್ ಜಾರಿ ಮಾಡಿದ ಹೈಕೋರ್ಟ್: ಮಾ.18ರೊಳಗೆ ಪ್ರತಿಕ್ರಿಯೆ ನೀಡಲು ಸೂಚನೆ

ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ.ಐ. ಅರುಣ್ ಅವರನ್ನೊಳಗೊಂಡ ವಿಭಾಗೀಯ ಪೀಠವು ರಾಜ್ಯ ಸರ್ಕಾರ ಮತ್ತು ಇತರ ಪ್ರತಿವಾದಿಗಳು ನೇಮಕಗೊಂಡ ನಿಗಮ-ಮಂಡಳಿಗಳ ಮುಖ್ಯಸ್ಥರು ಮತ್ತು ಸಲಹೆಗಾರರಿಗೆ ನೋಟಿಸ್ ಜಾರಿಗೊಳಿಸಿ, ಪ್ರತಿಕ್ರಿಯೆ ಸಲ್ಲಿಸುವಂತೆ ನಿರ್ದೇಶಿಸಿದೆ.
High court
ಹೈಕೋರ್ಟ್
Updated on

ಬೆಂಗಳೂರು: ರಾಜ್ಯ ಸರ್ಕಾರ, ವಿವಿಧ ನಿಗಮ-ಮಂಡಳಿಗಳು, ರಾಜಕೀಯ ಕಾರ್ಯದರ್ಶಿಗಳು ಮತ್ತು ಸಲಹೆಗಾರರ ನೇಮಕಾತಿಯಿಂದಾಗಿ 'ಲಾಭದಾಯಕ ಹುದ್ದೆ' ಹೊಂದಿರುವ ಎಲ್ಲಾ ಸಂಸ್ಥೆಗಳಿಂದ ಪ್ರತಿಕ್ರಿಯೆ ಕೇಳಿ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ. ಸಂವಿಧಾನದ ಅಡಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅಂಶ ಮತ್ತು ಪ್ರಜಾಸತ್ತಾತ್ಮಕ ಮಹತ್ವ ಎರಡರಲ್ಲೂ ಈ ವಿಷಯವು ಮಹತ್ವದ್ದಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ.ಐ. ಅರುಣ್ ಅವರನ್ನೊಳಗೊಂಡ ವಿಭಾಗೀಯ ಪೀಠವು ರಾಜ್ಯ ಸರ್ಕಾರ ಮತ್ತು ಇತರ ಪ್ರತಿವಾದಿಗಳು ನೇಮಕಗೊಂಡ ನಿಗಮ-ಮಂಡಳಿಗಳ ಮುಖ್ಯಸ್ಥರು ಮತ್ತು ಸಲಹೆಗಾರರಿಗೆ ನೋಟಿಸ್ ಜಾರಿಗೊಳಿಸಿ, ಪ್ರತಿಕ್ರಿಯೆ ಸಲ್ಲಿಸುವಂತೆ ನಿರ್ದೇಶಿಸಿದೆ.

ಅರ್ಜಿಯಲ್ಲಿರುವ ವಿಷಯಗಳು ಸಾಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಮಹತ್ವವನ್ನು ಹೊಂದಿವೆ. ರಾಜ್ಯ ಸರ್ಕಾರ ಮತ್ತು ಇತರ ಪ್ರತಿವಾದಿಗಳಿಂದ ನಿರ್ದಿಷ್ಟ ಪ್ರತಿಕ್ರಿಯೆಯ ಅಗತ್ಯವಿರುತ್ತದೆ ಎಂದು ಹೇಳಿರುವ ಕೋರ್ಟ್ ಮಾರ್ಚ್ 18 ರ ಮೊದಲು ಉತ್ತರ ಸಲ್ಲಿಸುವಂತೆ ಸೂಚಿಸಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯ ಎಂಜಿನಿಯರ್ ಮಟ್ಟದ ಅಧಿಕಾರಿ ಸೂರಿ ಪಾಯಲ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಮಾರ್ಚ್ 27 ಕ್ಕೆ ಮುಂದೂಡಿತು.

ಅರ್ಜಿದಾರರನ್ನು ಪ್ರತಿನಿಧಿಸುವ ಹಿರಿಯ ವಕೀಲ ಸಾಯಿ ದೀಪಕ್, ರಾಜ್ಯ ಸರ್ಕಾರವು ಜೂನ್ 1, 2023 ರಿಂದ ಜನವರಿ 26, 2024 ರ ನಡುವೆ 42 ಶಾಸಕರು ಮತ್ತು ಎಂಎಲ್‌ಸಿಗಳನ್ನು ನಿಗಮ ಮಂಡಳಿಗಳ ಮುಖ್ಯಸ್ಥ ಹುದ್ದೆಗಳಿಗೆ ನೇಮಕ ಮಾಡಿದೆ, ಅವರಿಗೆ ಕ್ಯಾಬಿನೆಟ್ ದರ್ಜೆಯ ಮಂತ್ರಿಗಳ ಸೌಲಭ್ಯ ಮತ್ತು ಎಲ್ಲಾ ಆರ್ಥಿಕ ಪ್ರಯೋಜನಗಳನ್ನು ನೀಡಲಾಗಿದೆ. ಇದು ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನವನ್ನು ನೀಡಿದಂತಾಗುತ್ತದೆ, ಇದು ಸಂವಿಧಾನದ 164(1)(ಎ) ವಿಧಿಗೆ ವಿರುದ್ಧವಾಗಿದೆ, ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಸಚಿವರುಗಳ ಸಂಖ್ಯೆಯನ್ನು ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆಯ ಶೇಕಡಾ 15 ಕ್ಕೆ ಮಿತಿಗೊಳಿಸುತ್ತದೆ.

ಆದಾಗ್ಯೂ, 48 ನೇಮಕಾತಿಗಳು ವಿಧಾನಸಭೆಯ ಸದಸ್ಯರ ಶೇಕಡಾ 15 ಕ್ಕಿಂತ ಹೆಚ್ಚು. ಇದು ಸಾರ್ವಜನಿಕ ಖಜಾನೆಗೆ ಹೊರೆಯಾಗುವುದರಿಂದ ಇದು ಗಂಭೀರ ಸಾರ್ವಜನಿಕ ಸಮಸ್ಯೆಯಾಗಿದೆ ಎಂದು ಅವರು ವಾದಿಸಿದರು.

ಉಮಾಪತಿ v/s ಸ್ಟೇಟ್ ಆಫ್ ಕರ್ನಾಟಕ ಪ್ರಕರಣದಲ್ಲಿ ನ್ಯಾಯಾಲಯದ ಸಮನ್ವಯ ಪೀಠದ ಮುಂದೆ ಇದೇ ರೀತಿಯ ವಿಷಯ ಬಂದಿದೆ ಎಂದು ಅಡ್ವೊಕೇಟ್ ಜನರಲ್ (ಎಜಿ) ಕೆ. ಶಶಿಕಿರಣ್ ಶೆಟ್ಟಿ ವಾದಿಸಿದರು. 164 ಮತ್ತು 161 ನೇ ವಿಧಿಗಳ ಉಲ್ಲಂಘನೆಯನ್ನು ನಕಾರಾತ್ಮಕವಾಗಿ ಪರಿಗಣಿಸಲಾಗಿದೆ ಎಂಬುದಾಗಿ ಆಗ ವಾದಿಸಲಾಯಿತು. ಈ ನೇಮಕಾತಿಗಳು ಕರ್ನಾಟಕ ಶಾಸಕಾಂಗ (ಅನರ್ಹತೆ ತಡೆಗಟ್ಟುವಿಕೆ) ಕಾಯ್ದೆ, 1956 ರ ನಿಬಂಧನೆಗಳೊಂದಿಗೆ ಸಂವಿಧಾನದ 191 ನೇ ವಿಧಿಯ ನೇರ ಉಲ್ಲಂಘನೆಯಾಗಿದೆ ಎಂದು ಸಾಯಿ ದೀಪಕ್ ವಾದಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com