ದಾವಣಗೆರೆ: ಕೂಲಿ ಕೆಲಸದ 10 ಮಹಿಳೆಯರನ್ನು ವಿಮಾನದಲ್ಲಿ ಗೋವಾ ಟೂರ್ ಮಾಡಿಸಿದ ರೈತ!

ಅದರಂತೆ ಎಂದೂ ವಿಮಾನ ಹತ್ತದ ಮಹಿಳಾ ಕಾರ್ಮಿಕರಿಗೆ ವಿಮಾನಯಾನ ಮಾಡಿಸಿದ್ದಾರೆ. ಈ ಮೂಲಕ ಅವರು ಜೀವನ ಪರ್ಯ೦ತ ನೆನಪಿನಲ್ಲಿಡುವಂತೆ ಮಾಡಿದ್ದಾರೆ.
Farmer Vishwanath of Shiraganahalli village
ಕಾರ್ಮಿಕ ಮಹಿಳೆಯರೊಂದಿಗೆ ರೈತ ವಿಶ್ವನಾಥ್
Updated on

ದಾವಣಗೆರೆ: ದಾವಣಗೆರೆ ಸಮೀಪದ ಹರಪನಹಳ್ಳಿ ತಾಲ್ಲೂಕಿನ ಶಿರಗನಹಳ್ಳಿ ಗ್ರಾಮದ ರೈತ ವಿಶ್ವನಾಥ್, ತಮ್ಮ 10 ಮಹಿಳಾ ಕೃಷಿ ಕಾರ್ಮಿಕರನ್ನು ಶಿವಮೊಗ್ಗದಿಂದ ಗೋವಾದ ದಾಬೋಲಿಮ್‌ಗೆ ವಿಮಾನದಲ್ಲಿ ಪ್ರವಾಸಿ ಸ್ಥಳಗಳಿಗೆ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಕ್ಕಾಗಿ ಎಲ್ಲರ ಪ್ರಶಂಸೆ ಪಡೆಯುತ್ತಿದ್ದಾರೆ.

ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ಶಿರಗನಹಳ್ಳಿ ರೈತ ವಿಶ್ವನಾಥ್, ತಮ್ಮ ಜಮೀನಿಗೆ ಖಾಯಂ ಆಗಿ ಕೂಲಿ ಕೆಲಸಕ್ಕೆ ಬರುತ್ತಿದ್ದ ಮಹಿಳಾ ಕಾರ್ಮಿಕರಿಗೆ ಏನಾದರೂ ಒಂದು ಜೀವನಪೂರ್ತಿ ಮರೆಯಲಾಗದ ಉಡುಗೊರೆ ಕೊಡಬೇಕು ಎಂದುಕೊಂಡಿದ್ದರು. ಅದರಂತೆ ಎಂದೂ ವಿಮಾನ ಹತ್ತದ ಮಹಿಳಾ ಕಾರ್ಮಿಕರಿಗೆ ವಿಮಾನಯಾನ ಮಾಡಿಸಿದ್ದಾರೆ. ಈ ಮೂಲಕ ಅವರು ಜೀವನ ಪರ್ಯ೦ತ ನೆನಪಿನಲ್ಲಿಡುವಂತೆ ಮಾಡಿದ್ದಾರೆ.

ರಾಜ್ಯ ಗುಪ್ತಚರ ಇಲಾಖೆಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಯನ್ನು ತೊರೆದ ನಂತರ, ವಿಶ್ವನಾಥ್ ತಮ್ಮ 14 ಎಕರೆ ಅಡಿಕೆ ತೋಟದಲ್ಲಿ ಪೂರ್ಣ ಸಮಯದ ಕೃಷಿಗೆ ತಿರುಗಿದರು. ತಮ್ಮ ಕಾರ್ಮಿಕರನ್ನು, ತಮ್ಮ ಜಮೀನಿನಲ್ಲಿರುವ ಎಲ್ಲಾ ಖಾಯಂ ಉದ್ಯೋಗಿಗಳನ್ನು ಸಂತೋಷವಾಗಿಡಲು, ವಿಮಾನದಲ್ಲಿ ಹಾರುವ ಅವರ ಕನಸನ್ನು ನನಸಾಗಿಸಲು ಅವರು ನಿರ್ಧರಿಸಿದರು.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ವಿಶ್ವನಾಥ್, ಶಿರಗನಹಳ್ಳಿಯಲ್ಲಿರುವ ನನ್ನ ಜಮೀನಿನಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರ ಕನಸುಗಳನ್ನು ನನಸಾಗಿಸುವ ತೃಪ್ತಿ ನನಗಿದೆ. ಅವರಿಗೆ ವಿಮಾನದಲ್ಲಿ ಹಾರುವ ಕನಸು ಇತ್ತು, ಮತ್ತು ನಾನು ಅದನ್ನು ನನಸಾಗಿಸಿದೆ ಎಂದು ಹೇಳಿದ್ದಾರೆ.

Farmer Vishwanath of Shiraganahalli village
ರಾಯಚೂರು: ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶಾಸಕ ಮಕ್ಕಳ ವಿವಾಹ; ಪ್ರಶಂಸೆಗಳ ಮಹಾಪೂರ

ಮೊದಲು ಅವರನ್ನು ತಿರುಪತಿಗೆ ವೆಂಕಟೇಶ್ವರ ದರ್ಶನಕ್ಕೆ ಕರೆದೊಯ್ಯುವುದಾಗಿತ್ತು, ಆದರೆ ಏರೋ ಇಂಡಿಯಾ ಪ್ರದರ್ಶನದಿಂದಾಗಿ, ನಾನು ನನ್ನ ಪ್ಲಾನ್ ಬದಲಾಯಿಸಿದೆ ಮತ್ತು ನಾವು ಗೋವಾಗೆ ಬಂದೆವು. ಶಿವಮೊಗ್ಗ ಹತ್ತಿರದ ವಿಮಾನ ನಿಲ್ದಾಣವಾಗಿದೆ, ಆದ್ದರಿಂದ, ಗೋವಾ ಹೋಗಲು ನಿರ್ಧರಿಸಿದೆವು ಎಂದಿದ್ದಾರೆ.

ಗೋವಾಕ್ಕೆ ಹೋಗುವ ದಾರಿಯಲ್ಲಿ ವಿಮಾನ ಟೇಕ್-ಆಫ್ ಮತ್ತು ಟಚ್‌ಡೌನ್ ಸಮಯದಲ್ಲಿ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರಿಗೆ ಭಯಗೊಂಡಿದ್ದರು, ಆದಾಗ್ಯೂ, ಹಿಂದಿರುಗುವ ಪ್ರಯಾಣದಲ್ಲಿ ಅವರು ಆರಾಮದಾಯಕವಾಗಿದ್ದರು ಎಂದು ಅವರು ಹೇಳಿದರು. ಪ್ರವಾಸದಲ್ಲಿ ಅವರ ಸಂತೋಷಕ್ಕೆ ಯಾವುದೇ ಮಿತಿಯಿರಲಿಲ್ಲ ಎಂದು ಅವರು ಹೇಳಿದರು.

ನಾವು ಕ್ಯಾಲಂಗುಟ್ ಮತ್ತು ಭಾಗಾ ಕಡಲತೀರಗಳಿಗೆ ಭೇಟಿ ನೀಡಿದ್ದೇವೆ. ಮಾಂಡೋವಿ ನದಿಯಲ್ಲಿ ದೋಣಿ ವಿಹಾರವನ್ನು ಆನಂದಿಸಿದ್ದೇವೆ. ನಾವು ಪಣಜಿಮ್ ನಗರದ ಪ್ರವಾಸಕ್ಕೂ ಹೋಗಿದ್ದೆವು. ಅವರ ಮುಖದಲ್ಲಿನ ನಗು ಸಂತೋಷವಾಗಿತ್ತು ನಾನು ಕೂಡ ಅವರನ್ನು ಸಂತೋಷಪಡಿಸಿದ್ದಕ್ಕಾಗಿ ನಾನು ಖುಷಿಯಾಗಿದ್ದೇನೆ ಎಂದು ಅವರು ಹೇಳಿದರು.

ಪೊಲೀಸ್ ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡುವುದಕ್ಕಿಂತ ರೈತನಾಗಿರುವುದು ನನ್ನನ್ನು ಸಂತೋಷಪಡಿಸಿದೆ ಎಂದು ಅವರು ಹೇಳಿದರು. "ನಾನು ರೈತನಾದ ನಂತರ, ನಾನು ಆರೋಗ್ಯಕರ, ಒತ್ತಡ-ಮುಕ್ತ ಜೀವನವನ್ನು ನಡೆಸುತ್ತಿದ್ದೇನೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com