ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ ಸ್ಪೀಕರ್‌ಗೆ ಸಲ್ಲಿಕೆ; ಬಜೆಟ್ ಅಧಿವೇಶನದಲ್ಲೇ ಮಂಡನೆ ಸಾಧ್ಯತೆ

ಗ್ರೇಟರ್ ಬೆಂಗಳೂರು ಮಸೂದೆಗೆ ಸಂಬಂಧಿಸಿದ ವರದಿಯನ್ನು ಇಂದು ವಿಧಾನಸೌಧದಲ್ಲಿ ವಿಧಾನಸಭೆಯ ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಸಲ್ಲಿಸಲಾಯಿತು.
ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ ಸ್ಪೀಕರ್‌ಗೆ ಸಲ್ಲಿಕೆ
ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ ಸ್ಪೀಕರ್‌ಗೆ ಸಲ್ಲಿಕೆ
Updated on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸುವ ಮತ್ತು 7 ಹೊಸ ಮಹಾನಗರ ಪಾಲಿಕೆ ರಚಿಸುವ ಮೂಲಕ ರಾಜಧಾನಿಯ ಆಡಳಿತಕ್ಕೆ ಹೊಸ ಆಕಾರ ನೀಡುವ ಗ್ರೇಟರ್ ಬೆಂಗಳೂರು ಆಡಳಿತ(ಜಿಬಿಎ) ಮಸೂದೆಯ ಪರಿಶೀಲನಾ ವರದಿಯನ್ನು ಸೋಮವಾರ ವಿಧಾನಸಭೆ ಸ್ಪೀಕರ್‌ ಯುಟಿ ಖಾದರ್ ಅವರಿಗೆ ಅಧಿಕೃತವಾಗಿ ಸಲ್ಲಿಸಲಾಗಿದ್ದು, ಇದೇ ಬಜೆಟ್ ಅಧಿವೇಶನದಲ್ಲೇ ಮಸೂದೆ ಮಂಡಿಸುವ ಸಾಧ್ಯತೆ ಇದೆ.

ಗ್ರೇಟರ್ ಬೆಂಗಳೂರು ಮಸೂದೆಗೆ ಸಂಬಂಧಿಸಿದ ವರದಿಯನ್ನು ಇಂದು ವಿಧಾನಸೌಧದಲ್ಲಿ ವಿಧಾನಸಭೆಯ ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ, ಸಮಿತಿ ಸದಸ್ಯರಾದ ಎಸ್.ಟಿ. ಸೋಮಶೇಖರ್, ಎ.ಸಿ. ಶ್ರೀನಿವಾಸ್ ಮತ್ತು ಇತರರು ಹಾಜರಿದ್ದರು.

ಪರಿಶೀಲನಾ ಸಮಿತಿಯು ಈಗಾಗಲೇ ನಗರ ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಇದಲ್ಲದೆ, ಕಳೆದ ವಾರ, ನಾಗರಿಕರಿಂದ ಸಲಹೆಗಳನ್ನು ಸಹ ಸಂಗ್ರಹಿಸಿದ.

ಈಗ, ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಸ್ಪೀಕರ್‌ಗೆ ಸಲ್ಲಿಸಿದ ನಂತರ, ಮಾರ್ಚ್ 3 ರಿಂದ ಪ್ರಾರಂಭವಾಗುವ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಪರಿಷ್ಕೃತ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ. ಪ್ರತಿಪಕ್ಷಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರೆ, ಚರ್ಚೆಯ ಸ್ವರೂಪವನ್ನು ಆಧರಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ ಸ್ಪೀಕರ್‌ಗೆ ಸಲ್ಲಿಕೆ
ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ 2024: ಸಾರ್ವಜನಿಕರ ಸಲಹೆಗೆ BBMP ಆಹ್ವಾನ

ಕಳೆದ ವರ್ಷ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದಾಗ, ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ನಂತರ, ಸ್ಪೀಕರ್ ಮಸೂದೆಯ ಸಾಧಕ-ಬಾಧಕಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲು ಸಮಿತಿ ರಚಿಸಿದ್ದರು. ಆಡಳಿತ ಪಕ್ಷದ ಶಾಸಕ ರಿಜ್ವಾನ್ ಅರ್ಷದ್ ಸಮಿತಿಯ ನೇತೃತ್ವ ವಹಿಸಿದ್ದಾರೆ ಮತ್ತು ಈಗಾಗಲೇ ಹಲವಾರು ಸುತ್ತಿನ ಸಭೆಗಳನ್ನು ನಡೆಸಲಾಗಿದೆ ಮತ್ತು ಮಸೂದೆಯಲ್ಲಿ ಕೆಲವು ಶಿಫಾರಸುಗಳನ್ನು ಮಾಡಲಾಗಿದೆ.

ಈ ಶಿಫಾರಸುಗಳಲ್ಲಿ ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಣೆ ಮಾಡುವುದು ಸೇರಿದೆ ಎಂದು ಹೇಳಲಾಗುತ್ತದೆ. ಟೆಕ್ ಕಾರಿಡಾರ್‌ನ ಪ್ರಮುಖ ಕೇಂದ್ರವಾಗಿರುವ ಎಲೆಕ್ಟ್ರಾನಿಕ್ ಸಿಟಿ ಪ್ರದೇಶ, ಕುಂಬಳಗೋಡು ಪಟ್ಟಣ ಪುರಸಭೆ ಮತ್ತು ಪಾಲಿಕೆ ಗಡಿಯ ಪಕ್ಕದಲ್ಲಿರುವ ಕೆಲವು ಭಾಗಗಳನ್ನು ಸೇರಿಸಲಾಗುತ್ತಿದೆ.

ಒಬ್ಬ ಮೇಯರ್ ಮತ್ತು ಆಯುಕ್ತರು ಪ್ರಸ್ತುತ ಬಿಬಿಎಂಪಿ ಆಡಳಿತ ನಡೆಸಲು ಸಾಧ್ಯವಿಲ್ಲ ಎಂದು ಎಲ್ಲಾ ಪಕ್ಷಗಳಿಂದ ಹೇಳಲಾಗಿದೆ. ಇದರ ಆಧಾರದ ಮೇಲೆ, ಕಾಂಗ್ರೆಸ್ ಸರ್ಕಾರ ಸಣ್ಣ ಪಾಲಿಕೆಗಳನ್ನು ರಚಿಸಲು ಮತ್ತು ಆಡಳಿತದಲ್ಲಿ ಪ್ರಮುಖ ಬದಲಾವಣೆ ಮಾಡಲು ಯೋಜಿಸುತ್ತಿದೆ.

ಬಿಬಿಎಂಪಿ ಚುನಾವಣೆಗಳು ಆಗಸ್ಟ್ ಒಳಗೆ ಆಗಬೇಕು. ಜೂನ್ 30ರ ಒಳಗೆ ವಾರ್ಡ್‌ಗಳ ಗಡಿಗಳನ್ನು ನಿರ್ಧಾರ ಮಾಡಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

ವರದಿ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಿಜ್ವಾನ್ ಹರ್ಷದ್, ಬಿಬಿಎಂಪಿಯನ್ನು ೭ ಸಣ್ಣ ಸಣ್ಣ ಪಾಲಿಕೆಯನ್ನಾಗಿ ವಿಭಜನೆ ಮಾಡಲು ಅವಕಾಶ ಕಲ್ಪಿಸಿ ಶಿಫಾರಸ್ಸು ಮಾಡಲಾಗಿದೆ. ಎಷ್ಟು ಪಾಲಿಕೆ ರಚನೆ ಮಾಡಬೇಕು ಎಂಬುದನ್ನು ಸರ್ಕಾರದ ನಿರ್ಧಾರಕ್ಕೆ ಬಿಡಲಾಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com