ಮುಸ್ಲಿಮರು ಮಕ್ಕಳನ್ನು ತಾವು ಹುಟ್ಟಿಸಿ ದೇವರು ಕೊಟ್ಟ ಅಂತಾರೇ, ಹಾಗಾದ್ರೆ ದೇವರೇ ನೋಡಿಕೊಳ್ಳಲಿ, ತೆರಿಗೆದಾರರ ಹಣ ಯಾಕೆ ಬೇಕು?: Pratap Simha

ಮುಸ್ಲಿಮರು (Muslims) ಪುರುಸೊತ್ತಿಲ್ಲದೇ ಮಕ್ಕಳು ಹುಟ್ಟಿಸುತ್ತಾರೆ ಎಂದು ನಾನು ಹೇಳಿರುವುದು ಪ್ರಚೋದನಕಾರಿನಾ? ಎಂದು ಪ್ರತಾಪ್‌ ಸಿಂಹ (Pratap Simha) ಇದೇ ವೇಳೆ ಪ್ರಶ್ನೆ ಮಾಡಿದ್ದಾರೆ.
former BJP MP Pratap Simha
ಮಾಜಿ ಸಂಸದ ಪ್ರತಾಪ್ ಸಿಂಹonline desk
Updated on

ಉದಯಗಿರಿ ಗಲಭೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಕ್ಕಾಗಿ ತಮ್ಮ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಆರೋಪದಲ್ಲಿ ಎಫ್ಐಆರ್ ದಾಖಲಾಗಿರುವುದರ ಬಗ್ಗೆ ಮಾಜಿ ಸಂಸದ ಪ್ರತಾಪ್ (Pratap Simha) ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ.

ಗಲಭೆ ನಡೆದ ದಿನ ನಾನು ಪೊಲೀಸರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇನೆಯೇ ಹೊರತು ಪ್ರಚೋದನೆ ನೀಡಿಲ್ಲ. ಒಬ್ಬ ಮುಲ್ಲಾ ಪ್ರಚೋದನೆ ಮಾಡಿದ್ದರೂ ಯಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದೇನೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಮುಸ್ಲಿಮರು (Muslims) ಪುರುಸೊತ್ತಿಲ್ಲದೇ ಮಕ್ಕಳು ಹುಟ್ಟಿಸುತ್ತಾರೆ ಎಂದು ನಾನು ಹೇಳಿರುವುದು ಪ್ರಚೋದನಕಾರಿನಾ? ಎಂದು ಪ್ರತಾಪ್‌ ಸಿಂಹ (Pratap Simha) ಇದೇ ವೇಳೆ ಪ್ರಶ್ನೆ ಮಾಡಿದ್ದಾರೆ.

ಪುಂಡ ಮುಸ್ಲಿಮರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಪೊಲೀಸರ ಮೇಲೆ ಆಕ್ರಮಣ ಮಾಡಿದ್ದರು. ಈ ಘಟನೆ ಬೆನ್ನಲ್ಲೇ ಪೊಲೀಸ್ ಠಾಣೆಗೆ ಭೇಟಿ ನೀಡಿ ಪೊಲೀಸರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದು ಪ್ರಚೋದನಕಾರಿಯಾ? ಸಿದ್ದರಾಮಯ್ಯ ಸರ್ಕಾರ ಬಂದ ನಂತರ ನನ್ನ ಮೇಲೆ ಹಲವು ಎಫ್‌ಐಆರ್‌ (FIR) ದಾಖಲಿಸಿದ್ದಾರೆ. ಆತ್ಮಸ್ಥೈರ್ಯ ಕುಗ್ಗಿಸಬೇಕು, ಮನೆಯಿಂದ ಹೊರಬಾರದೆಂಬ ಉದ್ದೇಶದಿಂದ ಈ ರೀತಿ ಸಾಲು ಸಾಲು ಎಫ್‌ಐಆರ್‌ ಹಾಕಿಸಿದ್ದಾರೆ ಎಂದು ಪ್ರತಾಪ್ ಸಿಂಹ ಆರೋಪಿಸಿದ್ದಾರೆ.

ಮುಸ್ಲಿಮರು ಪುರುಸೊತ್ತಿಲ್ಲದೇ ಮಕ್ಕಳು ಹುಟ್ಟಿಸುತ್ತಾರೆ ಅಂದಿದ್ದೇನೆ ಇದು ಪ್ರಚೋದನಕಾರಿನಾ? ಅವರ ಜನಸಂಖ್ಯೆ ನೋಡಿದರೆ ಗೊತ್ತಾಗುವುದಿಲ್ಲವೇ? ನಾನು ಸತ್ಯ ಹೇಳಿದ್ದೇನೆ. ಮುಸ್ಲಿಮ್ ಸಮುದಾಯದ ಸೆಲಬ್ರಿಟಿಗಳಾದ ಶಾರುಖ್‌ ಖಾನ್‌ಗೆ ಮೂರು ಮಕ್ಕಳಿದ್ದಾರೆ. ಸೈಫ್ ಅಲಿ ಖಾನ್‌ಗೆ 4 ಮಕ್ಕಳಿದ್ದಾರೆ, ನಿಮ್ಮ ಸೆಲೆಬ್ರಿಟಿಗಳೇ ಕಂಟ್ರೋಲ್ ಇಲ್ಲದೆ ಮಕ್ಕಳು ಹುಟ್ಟಿಸುತ್ತಿದ್ದಾರೆ. ಜನೋತ್ಪಾದನೆಯಲ್ಲಿ ತೊಡಗಿದ್ದೀರಿ ಎಂದು ಹೇಳಿದ್ದೇನೆ. ಮುಸ್ಲಿಮರು ಮಕ್ಕಳನ್ನ ದೇವರು ಕೊಟ್ಟ ಅಂತ ಹೇಳ್ತೀರಾ.. ನಿಮ್ಮಮಕ್ಕಳನ್ನ ದೇವರೆ ನೋಡಿಕೊಳ್ಳಲಿ.. ಸರ್ಕಾರ ಯಾಕೆ ತೆರಿಗೆದಾರರ ಹಣ ಖರ್ಚು ಮಾಡಿ ಪುಕ್ಕಟೆ ನೋಡಿಕೊಳ್ಳಬೇಕು ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

former BJP MP Pratap Simha
ಉದಯಗಿರಿ ಗಲಭೆ ಪ್ರಕರಣ: ಆರೋಪಿಗಳಿಗೆ ಸರ್ಕಾರ ರಕ್ಷಣೆ ನೀಡುತ್ತಿದೆ- ಪ್ರತಾಪ್ ಸಿಂಹ

ಅತಿಹೆಚ್ಚು ತೆರಿಗೆ ಕಟ್ಟುವವರೆಂದರೆ ಹಿಂದೂಗಳು. ಆದರೆ ಸೌಲಭ್ಯ ಮಾತ್ರ ನಿಮಗೆ ಸಿಗುತ್ತಿದೆ. ಸಂಖ್ಯೆ ಹೆಚ್ಚಳ ಮಾಡಿ ತೊಂದರೆ ಕೊಡ್ತಿದ್ದೀರಿ. ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದೀರಿ ಎಂದು ಹೇಳಿದ್ದೇನೆ. ಸ್ವಾತಂತ್ರ‍್ಯ ಬಂದಾಗ ಮುಸ್ಲಿಮರ ಜನಸಂಖ್ಯೆ ಎಷ್ಟಿತ್ತು ಈಗ ಎಷ್ಟಿದೆ? ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಹಿಂದೂಗಳ ಜನಸಂಖ್ಯೆ ಕಡಿಮೆಯಾಗಿದೆ. ಸತ್ಯ ಹೇಳಿರೋದು ಪ್ರಚೋದನೆ ಹೇಗಾಗುತ್ತೆ? ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

ನಿಯಂತ್ರಣದಿಂದ ಮಕ್ಕಳು ಹುಟ್ಟಿಸಿ, ನಿಮ್ಮ ಶಕ್ತಿಗನುಸಾರವಾಗಿ ಅವರಿಗೆ ವಿದ್ಯಾಭ್ಯಾಸ ಕೊಡಿಸಿ ಅಂತ ಕಿವಿ ಮಾತು ಹೇಳಿದ್ದೇನೆ ಎಂದು ಪ್ರತಾಪ್ ಸಿಂಹ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com