
ಬೆಂಗಳೂರು: ಬೆಳಗಾವಿಯ ಗಡಿ ಜಿಲ್ಲೆಗಳಲ್ಲಿ ಭುಗಿಲೆದ್ದಿರುವ ಭಾಷಾ ವಿವಾದದಿಂದ ಪ್ರತಿಭಟನೆ ಮುಂದುವರೆದಿರುವುದರಿಂದ ಸತತ ನಾಲ್ಕನೇ ದಿನವೂ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಅಂತಾರಾಜ್ಯ ಬಸ್ ಸಂಚಾರವನ್ನು ಸ್ಥಗಿತಗೊಳಲಾಗಿದೆ.
ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂತಿರುವ ಕಾರಣ ಬೆಳಗಾವಿ ಮೂಲಕ ಮಹಾರಾಷ್ಟ್ರಕ್ಕೆ ಕರ್ನಾಟಕ ರಾಜ್ಯ ಸಾರಿಗೆ ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ ಟಿಎನ್‌ಐಇಗೆ ತಿಳಿಸಿದ್ದಾರೆ
ಪ್ರತಿದಿನ ಸುಮಾರು 4 ಬಸ್‌ಗಳನ್ನು ಓಡಿಸುತ್ತಿದ್ದ ದಾವಣಗೆರೆ ವಿಭಾಗವು ಮೂರು ಬಸ್ ಗಳ ಸೇವೆಯನ್ನು ಸ್ಥಗಿತಗೊಳಿಸಿದೆ. ಆದರೆ ವಿಜಯಪುರ ಮೂಲಕ ಸೊಲ್ಲಾಪುರಕ್ಕೆ ಇನ್ನೂ ಒಂದು ಬಸ್ ಕಾರ್ಯಾಚರಣೆ ನಡೆಸುತ್ತಿದೆ. ಬೆಳಗಾವಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕೊಲ್ಹಾಪುರ, ಇಚಲಕರಂಜಿ ಮತ್ತು ವಿಶಾಲಗಡದಗೆ ಹೋಗುವ ಬಸ್‌ಗಳನ್ನು ನಿಲ್ಲಿಸಿದ್ದೇವೆ. ಆದಾಗ್ಯೂ, ವಿಜಯಪುರ ಜಿಲ್ಲೆಯ ಮೂಲಕ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಏಕೈಕ ಬಸ್ ಸಂಚರಿಸುತ್ತಿದೆ ಎಂದು ಅವರು ಹೇಳಿದರು.
ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಕಡಿಮೆ ಮಾಡಲು, ರಾಜ್ಯದ ಗಡಿವರೆಗೆ ಮಾತ್ರ ಬಸ್ ಸಂಚರಿಸುತ್ತಿದೆ. ಅಲ್ಲಿಂದ ಪ್ರಯಾಣಿಕರು ಮಹಾರಾಷ್ಟ್ರ ಬಸ್ ಹತ್ತುತ್ತಿದ್ದಾರೆ. ರಾಜ್ಯ ಬಸ್‌ಗಳು ತಮ್ಮ ಸಂಚಾರವನ್ನು ಮುಂದುವರೆಸಲಿವೆ ಎಂದು ಅವರು ತಿಳಿಸಿದರು.
ವಿಜಯಪುರ ಮಾರ್ಗವನ್ನಾಗಿ ಬಸ್ ಗಳು ಓಡಾಡುತ್ತಿರುವುದರಿಂದ ಮಹಾರಾಷ್ಟ್ರಕ್ಕೆ ಯಾವುದೇ ಬಸ್ ಸೇವೆ ನಿಲ್ಲಿಸಿಲ್ಲ. ತುಳಜಾಪುರ ಮತ್ತು ಪಂಢರಪುರಕ್ಕೆ ನಮ್ಮ ಬಸ್ಸುಗಳು ಹೋಗುತ್ತಿವೆ. ಆದರೆ, ಪುಣೆ ಮತ್ತು ಕರಾದ್‌ಗೆ ಹೋಗುವ ಬಸ್‌ಗಳನ್ನು ನಿಲ್ಲಿಸಲಾಗಿದೆ. ಬೆಳಗಾವಿ ಜಿಲ್ಲಾಧಿಕಾರಿಯಿಂದ ಅನುಮತಿ ದೊರೆತ ಬಳಿಕ ಆ ಎರಡೂ ಮಾರ್ಗಗಳಲ್ಲಿ ಬಸ್ ಸಂಚಾರ ಆರಂಭಿಸುತ್ತೇವೆ ಎಂದು KSRTC ಚಿತ್ರದುರ್ಗ ಡಿಪೋ ಮ್ಯಾನೇಜರ್ ಸಿದ್ದೇಶ್ ತಿಳಿಸಿದರು.
Advertisement