Liquor sales: ರಾಜ್ಯದಲ್ಲಿ ಟಾರ್ಗೆಟ್ ತಲುಪಲು ವಿಫಲ; ಕಳೆದ ವರ್ಷ ಭಾರಿ ಕುಸಿತ!

ಡಿಸೆಂಬರ್ ತಿಂಗಳು ಕ್ರಿಸ್ ಮಸ್, ಹೊಸ ವರ್ಷಾಚರಣೆಗಳು ಇರುವುದರಿಂದ ಈ ತಿಂಗಳಲ್ಲಿ ಸಹಜವಾಗಿಯೇ ಮದ್ಯ ಮಾರಾಟ ಏರುಗತಿಯಲ್ಲಿರುತ್ತದೆ ಎಂಬುದು ನಿರೀಕ್ಷೆ.
liquor sale
ಮದ್ಯ ಮಾರಾಟ online desk
Updated on

ಬೆಂಗಳೂರು: ಕರ್ನಾಟಕದಲ್ಲಿ ಒಟ್ಟಾರೆ ಮದ್ಯ ಮಾರಾಟ ಟ್ರೆಂಡ್ ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಕೆ ಮಾಡಿದರೆ, ಕಳೆದ ವರ್ಷ ಭಾರಿ ಕುಸಿತ ಕಂಡಿದೆ.

ಅಬಕಾರಿ ಇಲಾಖೆಯೇ ನೀಡಿರುವ ಕಳೆದ ವರ್ಷ (2024)ದ ಏಪ್ರಿಲ್- ಡಿಸೆಂಬರ್ ವರೆಗಿನ ಅಂಕಿ-ಅಂಶಗಳ ಪ್ರಕಾರ, 2024-25 ರ ಅವಧಿಗೆ ಮದ್ಯ ಮಾರಾಟದಿಂದ 38.525 ಕೋಟಿ ರೂಪಾಯಿ ಟಾರ್ಗೆಟ್ ನಿಗದಿ ಮಾಡಲಾಗಿತ್ತು. ಆದರೆ ಈ ಏಪ್ರಿಲ್ ನಿಂದ ಡಿಸೆಂಬರ್ ಅವಧಿಯಲ್ಲಿ ಬಂದಿರುವ ಆದಾಯ 26.633 ಕೋಟಿಯಷ್ಟೇ. 2023-2024 ರ ಆರ್ಥಿಕ ವರ್ಷದಲ್ಲಿ ಇಲಾಖೆ 34.500 ಕೋಟಿ ಆದಾಯದ ಗುರಿ ನಿಗದಿಪಡಿಸಿತ್ತು. ಆದರೆ ಸಂಗ್ರಹವಾಗಿದ್ದು ಮಾತ್ರ 24.455 ಕೋಟಿ ರೂ!, 2023-24 ರಲ್ಲಿ ನಿಗದಿಯಾಗಿದ್ದ ಟಾರ್ಗೆಟ್ ನ 73.78% ರಷ್ಟು ಮಾತ್ರ ಸಂಗ್ರಹವಾಗಿತ್ತು.

ಡಿಸೆಂಬರ್ ತಿಂಗಳು ಕ್ರಿಸ್ ಮಸ್, ಹೊಸ ವರ್ಷಾಚರಣೆಗಳು ಇರುವುದರಿಂದ ಈ ತಿಂಗಳಲ್ಲಿ ಸಹಜವಾಗಿಯೇ ಮದ್ಯ ಮಾರಾಟ ಏರುಗತಿಯಲ್ಲಿರುತ್ತದೆ ಎಂಬುದು ನಿರೀಕ್ಷೆ. ಆದರೆ ಕಳೆದ ವರ್ಷ ಡಿಸೆಂಬರ್ ನಲ್ಲಿ ಕರ್ನಾಟಕ ರಾಜ್ಯ ಪಾನೀಯಗಳ ನಿಗಮ ನಿಯಮಿತ (KSBCL) 61.82 ಲಕ್ಷ ಕೇಸ್ ಬಾಕ್ಸ್ ಗಳನ್ನು ಮಾರಾಟ ಮಾಡಿದೆ. 2023 ರಲ್ಲಿ 64.35 ಲಕ್ಷ ಬಾಕ್ಸ್ ಗಳು ಮಾರಾಟವಾಗಿತ್ತು. ಇದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಈ ವರ್ಷ ಶೇ.3.93 ರಷ್ಟು ಕುಸಿತ ದಾಖಲಿಸಿದೆ. ಒಂದು ಕೇಸ್ ಬಾಕ್ಸ್ ನಲ್ಲಿ 9 ಲೀಟರ್ ಮದ್ಯ ಇರಲಿದೆ.

ಅಧಿಕೃತ ಮಾಹಿತಿಯ ಪ್ರಕಾರ, KSBCL 2024 ರ ಏಪ್ರಿಲ್ ಮತ್ತು ಡಿಸೆಂಬರ್ ನಡುವೆ 527.82 ಲಕ್ಷ ಕೇಸ್ ಬಾಕ್ಸ್ ಗಳನ್ನು ಮಾರಾಟ ಮಾಡಿದೆ. 2023 ರ ಇದೇ ಅವಧಿಯಲ್ಲಿ 533.26 ಲಕ್ಷ C.B ಮಾರಾಟವಾಗಿದ್ದು, 1.02% ನಷ್ಟು ಕುಸಿತ ದಾಖಲಿಸಿದೆ. ಬಿಯರ್ ಮಾರಾಟ ಏಪ್ರಿಲ್ ಮತ್ತು ಡಿಸೆಂಬರ್ 2024 ರ ನಡುವೆ 8.22% ಹೆಚ್ಚಳವನ್ನು ಕಂಡಿದೆ. ಈ ವರ್ಷ 351.07 ಲಕ್ಷ CB ಗಳು ಮಾರಾಟವಾಗಿದ್ದರೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿ 324.4 ಲಕ್ಷ CB ಗಳು ಮಾರಾಟವಾಗಿತ್ತು.

ಮೂಲಗಳ ಪ್ರಕಾರ, IML (ಭಾರತದಲ್ಲಿ ತಯಾರಾದ ಮದ್ಯ) ಮಾರಾಟದಲ್ಲಿ ಕುಸಿತ ಹೆಚ್ಚಾಗಲು, ಆಂಧ್ರ- ಕರ್ನಾಟಕ ಗಡಿಗಳಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ಮದ್ಯ ಮಾರಾಟವಾಗುತ್ತಿರುವುದು ಕಾರಣ ಎನ್ನಲಾಗುತ್ತಿದೆ. ಈ ಗಡಿ ಭಾಗದಲ್ಲಿ ಮದ್ಯದ ಅಂಗಡಿಗಳನ್ನು ಆಂಧ್ರಪ್ರದೇಶ ಸರ್ಕಾರವೇ ನಡೆಸುತ್ತಿದೆ. ಚಿಕ್ಕಬಳ್ಳಾಪುರ, ಕೋಲಾರ, ಬಳ್ಳಾರಿ, ತುಮಕೂರು ಮುಂತಾದ ಗಡಿ ಜಿಲ್ಲೆಗಳಲ್ಲಿ ಮದ್ಯ ಮಾರಾಟದಲ್ಲಿ ಕುಸಿತ ಕಾಣುತ್ತಿದೆ. ಅಂತೆಯೇ, ಗೋವಾದ ಗಡಿಯಲ್ಲಿರುವ ಜಿಲ್ಲೆಗಳು ಸಹ ಮಾರಾಟದಲ್ಲಿ ಕುಸಿತವನ್ನು ಕಾಣುತ್ತಿವೆ ”ಎಂದು ಗೌಪ್ಯತೆಯ ಷರತ್ತು ವಿಧಿಸಿದ ಮೂಲಗಳು ತಿಳಿಸಿವೆ.

liquor sale
ಮದ್ಯದ ಹೊಳೆಯಲ್ಲಿ ಮಿಂದೆದ್ದ ಕರ್ನಾಟಕ: ಅಬಕಾರಿ ಇಲಾಖೆಗೆ ಹರಿದು ಬಂದ ಆದಾಯ; ಅರ್ಧ ದಿನದಲ್ಲೇ 308 ಕೋಟಿ ರೂ ಲಿಕ್ಕರ್ ಸೇಲ್!

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ತೆರಿಗೆಗಳು, ಅಬಕಾರಿ, ಮುದ್ರಾಂಕ ಮತ್ತು ನೋಂದಣಿ, ಸಾರಿಗೆ ಮತ್ತು ಗಣಿ ಮತ್ತು ಭೂವಿಜ್ಞಾನದ ಉನ್ನತ ಆದಾಯ ಉತ್ಪಾದಿಸುವ ಇಲಾಖೆಗಳ ಅಧಿಕಾರಿಗಳಿಗೆ ಆದಾಯ ಸಂಗ್ರಹವನ್ನು ವೇಗಗೊಳಿಸುವಂತೆ ಸೂಚಿಸಿದ್ದರು. ಟಾರ್ಗೆಟ್ ಗಳನ್ನು ತಲುಪದೇ ಇದ್ದಲ್ಲಿ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ರಾಜ್ಯದ ಬೊಕ್ಕಸಕ್ಕೆ ಆದಾಯದ 20% ಕೊಡುಗೆ ನೀಡುವ ಅಬಕಾರಿ, ಪ್ರಸಕ್ತ ಹಣಕಾಸು ವರ್ಷ 2024-2025ಕ್ಕೆ 38.525 ಕೋಟಿ ರೂ.ಗಳ ಆದಾಯದ ಗುರಿಯನ್ನು ಸಾಧಿಸುವ ಗುರಿಯನ್ನು ಎದುರಿಸುತ್ತಿದೆ.

“ಈ ಆರ್ಥಿಕ ವರ್ಷದಲ್ಲಿ 100% ಬೃಹತ್ ಆದಾಯದ ಗುರಿಯನ್ನು ಸಾಧಿಸುವುದು ಒಂದು ಸವಾಲಾಗಿದೆ. ನಾವು ಈಗ ಗ್ರಾಮೀಣ ಹಬ್ಬಗಳನ್ನು ಎದುರು ನೋಡುತ್ತಿದ್ದೇವೆ, ಆ ಸಮಯದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯಲ್ಲಿ ಹೆಚ್ಚಳವಿದೆ. ಮಾರ್ಚ್ ಅಂತ್ಯದ ವೇಳೆಗೆ ಸುಮಾರು 37 ಕೋಟಿ ರೂ ಟಾರ್ಗೆಟ್ ಇದೆ. ಆದರೂ ಇದು ಒಂದು ದೊಡ್ಡ ನಿರೀಕ್ಷೆಯಾಗಿದೆ, ”ಎಂದು ಮೂಲಗಳು ಹೇಳಿವೆ. IML ನ ಕಡಿಮೆ ನಾಲ್ಕು ಸ್ಲ್ಯಾಬ್‌ಗಳು ಇಲಾಖೆಗೆ 80% ಕ್ಕಿಂತ ಹೆಚ್ಚು ಆದಾಯವನ್ನು ನೀಡುತ್ತವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com