ಶೀಘ್ರದಲ್ಲೇ ಹೊಗೇನಕಲ್ ಸಫಾರಿ ಆರಂಭ: ದಂತಚೋರ ವೀರಪ್ಪನ್ ಅಡಗುತಾಣಗಳ ದರ್ಶನ!

ಕಾವೇರಿ ನದಿಯಲ್ಲಿ ದೋಣಿ ವಿಹಾರ ಮತ್ತು ಸಾಂಪ್ರದಾಯಿಕ ಮೀನು ಭಕ್ಷ್ಯಗಳಿಗಾಗಿ ಗಡಿಯ ಎರಡೂ ಬದಿಗಳು ಪ್ರವಾಸಿಗರ ನೆಚ್ಚಿನ ತಾಣವಾಗಿದೆ.
Representational image
ಸಾಂದರ್ಭಿಕ ಚಿತ್ರ
Updated on

ಮೈಸೂರು: ದಂತ ಚೋರ ವೀರಪ್ಪನ್‌ನ ಸಾವಿನ ಎರಡು ದಶಕಗಳ ನಂತರ, ಅರಣ್ಯ ಇಲಾಖೆಯು ಅರಣ್ಯದ ಸೊಬಗಿನ ಪ್ರಯೋಜನ ಪಡೆಯಲು ಉತ್ಸುಕವಾಗಿದೆ, ಹೀಗಾಗಿ ಶೀಘ್ರದಲ್ಲೇ ತಮಿಳುನಾಡು-ಕರ್ನಾಟಕ ಗಡಿಯಲ್ಲಿರುವ ಹೊಗೇನೆಕಲ್ ಜಲಪಾತದಿಂದ ಸಫಾರಿ ಪ್ರಾರಂಭಿಸಲಿದೆ.

ವೀರಪ್ಪನ್‌ನ ಸ್ಥಳೀಯ ಗ್ರಾಮವಾದ ಗೋಪಿನಾಥನ್‌ನಿಂದ ಸಫಾರಿ ಆರಂಭವಾಗುವುದು. ಪ್ರವಾಸಿಗರಿಂದ ‘ಬ್ರಿಗಾಂಡ್ ಟೂರಿಸಂ’ಗೆ ಬೇಡಿಕೆ ಹೆಚ್ಚಿದೆ. ಸಫಾರಿಯು 22 ಕಿಲೋಮೀಟರ್ ಅರಣ್ಯವನ್ನು ಆವರಿಸುತ್ತದೆ, ವಿಶೇಷವಾಗಿ ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ವೀರಪ್ಪನ್ ಅಡಗುತಾಣಗಳು ಸೇರಿವೆ. ಇಲ್ಲಿ ಆನೆಗಳು, ಸಂಬಾರ್, ಜಿಂಕೆಗಳು, ಕರಡಿಗಳು ಮತ್ತು ಇತರ ವನ್ಯಜೀವಿಗಳಿವೆ.

ಕಾವೇರಿ ವನ್ಯಜೀವಿ ಅಭಯಾರಣ್ಯದ ಅಧಿಕಾರಿಗಳು ಹೊಗೇನೆಕಲ್‌ನಿಂದ ಸಫಾರಿಯನ್ನು ಪ್ರಾರಂಭಿಸಲು ಬಯಸಿದ್ದರು, ವಿಶೇಷವಾಗಿ ಕಾವೇರಿ ನದಿಯಲ್ಲಿ ದೋಣಿ ವಿಹಾರ ಮತ್ತು ಸಾಂಪ್ರದಾಯಿಕ ಮೀನು ಭಕ್ಷ್ಯಗಳಿಗಾಗಿ ಗಡಿಯ ಎರಡೂ ಬದಿಗಳು ಪ್ರವಾಸಿಗರ ನೆಚ್ಚಿನ ತಾಣವಾಗಿದೆ.

ಇಲಾಖೆಯು ನಾಲ್ಕು ಟ್ರಿಪ್‌ಗಳನ್ನು ಯೋಜಿಸಿದೆ - ಬೆಳಿಗ್ಗೆ ಎರಡು ಮತ್ತು ಸಂಜೆ ಎರಡು ಬಾರಿ ಸಫಾರಿ ಇರುತ್ತದೆ. ಎರಡು ವಾಹನಗಳಲ್ಲಿ 25 ಜನರನ್ನು ಸಾಗಿಸುವ ಸಾಮರ್ಥ್ಯವಿರುತ್ತದೆ. ಆಳ ಕಾಡಿನೊಳಗೆ ಸಾಗುವ ಹೊಸ ಸಫಾರಿ ವಾಹನಗಳಿಗೆ ಆರ್ಡರ್ ಮಾಡಿದ್ದಾರೆ.

Representational image
ಮಲೆ ಮಹದೇಶ್ವರಬೆಟ್ಟದಲ್ಲಿ ಸಫಾರಿ: ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರ ಆಕರ್ಷಣೆ

ಇದು ಗೋಪಿನಾಥಂನಲ್ಲಿ ವಸತಿಗಾಗಿ ಟೆಂಟ್ ಕಾಟೇಜ್‌ಗಳನ್ನು ಸಹ ತೆರೆದಿದೆ ಮತ್ತು ಹೆಚ್ಚಿದ ಪ್ರವಾಸಿಗರ ಹರಿವು ಗ್ರಾಮಸ್ಥರನ್ನು ಹೋಮ್ ಸ್ಟೇಗಳನ್ನು ತೆರೆಯಲು ಮತ್ತು ಅವರ ಮನೆಗಳಲ್ಲಿ ಕೊಠಡಿಗಳನ್ನು ಬಾಡಿಗೆಗೆ ನೀಡುವಂತೆ ಮಾಡಿದೆ.

ಹೊಗೇನೆಕಲ್ ಜಲಪಾತವು ಜನವರಿ 2024 ರಲ್ಲಿ 3,500 ಪ್ರವಾಸಿಗರನ್ನು ಮತ್ತು ಮಾರ್ಚ್‌ನಲ್ಲಿ 9,381 ಪ್ರವಾಸಿಗರನ್ನು ಆಕರ್ಷಿಸಿದೆ. ಸುಮಾರು 1,400 ವಿದೇಶಿ ಪ್ರವಾಸಿಗರು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. ಅರಣ್ಯ ಅಧಿಕಾರಿಗಳು ಸ್ಥಳೀಯ ಮತ್ತು ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಬಯಸಿದೆ. ಇದರಿಂದ ಸ್ಥಳೀಯ ಆರ್ಥಿಕತೆಗೆ ಕೊಡುಗೆ ನೀಡುತ್ತದೆ ಮತ್ತು ನೇರ ಮತ್ತು ಪರೋಕ್ಷ ಉದ್ಯೋಗವನ್ನು ಸೃಷ್ಟಿಸುತ್ತದೆ

ಬಂಡೀಪುರ, ಕೆ ಗುಡಿ, ಪಿಜಿ ಪಾಳ್ಯ, ಅಜ್ಜಿಪುರ ಮತ್ತು ಗೋಪಿನಾಥಂ ನಂತರ ಹೊಗೇನೆಕಲ್‌ನಲ್ಲಿ ಹೊಸ ಸಫಾರಿ ಆರನೇಯದ್ದಾಗಿದೆ. ಮಲೈ ಮಹದೇಶ್ವರ ಬೆಟ್ಟದ ದೇವಾಲಯಕ್ಕೆ ಭೇಟಿ ನೀಡುವ ಲಕ್ಷಾಂತರ ಪ್ರವಾಸಿಗರು ಸ್ಥಳೀಯ ಆರ್ಥಿಕತೆಗೆ ಪ್ರಮುಖ ಉತ್ತೇಜನವನ್ನು ನೀಡುವ ಸೌಲಭ್ಯಗಳನ್ನು ಸಹ ಪಡೆಯಬಹುದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com