
ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (KIA) ಮೊನ್ನೆ ಭಾನುವಾರ ರಾತ್ರಿ ಟೇಕಾಫ್ ಆದ ಏರ್ ಇಂಡಿಯಾ ವಿಮಾನದ ಒಂದು ಎಂಜಿನ್ ಗಾಳಿಯಲ್ಲಿ ವಿಫಲವಾದಾಗ ಪೈಲಟ್ ನ ಸಮಯಪ್ರಜ್ಞೆಯಿಂದ ಅದರಲ್ಲಿದ್ದ 150 ಕ್ಕೂ ಹೆಚ್ಚು ಪ್ರಯಾಣಿಕರು ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆ ನಡೆದಿದೆ.
ಪೈಲಟ್ ಮತ್ತೊಂದು ಎಂಜಿನ್ ಬಳಸಿ ವಿಮಾನವನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಹಿಂತಿರುಗಿಸುವಲ್ಲಿ ಯಶಸ್ವಿಯಾದರು ಎಂದು ಮೂಲಗಳು ತಿಳಿಸಿವೆ. ರಾತ್ರಿ ಟೇಕಾಫ್ ಆದ ವಿಮಾನ ಸೋಮವಾರ ಮುಂಜಾನೆ ದೆಹಲಿ ತಲುಪಿತ್ತು. ವಿಮಾನ ಸಂಖ್ಯೆ ಎಐ 2820, A320 ನಿಯೋ ಮಾಡೆಲ್, ಕೆಂಪೇಗೌಡ ಅಂತಾರಾಷ್ಟ್ರೀ ವಿಮಾನ ನಿಲ್ದಾಣದ ಟರ್ಮಿನಲ್ 2 ರಿಂದ ರಾತ್ರಿ 7:09 ಕ್ಕೆ ಟೇಕ್ ಆಫ್ ಆಗಬೇಕಿತ್ತು, ಅದು ಸಂಜೆ 5:45 ಕ್ಕೆ ಟೇಕ್ ಆಫ್ ಆಗಬೇಕಿತ್ತು. ಆಕಾಶದಲ್ಲಿ ಮಧ್ಯೆ ಸಮಸ್ಯೆಗಳನ್ನು ಎದುರಿಸಿದ ನಂತರ, ರಾತ್ರಿ 8:10 ಕ್ಕೆ ವಿಮಾನ ನಿಲ್ದಾಣಕ್ಕೆ ಮರಳಿತು.
ಏರ್ ಟ್ರಾಫಿಕ್ ಕಂಟ್ರೋಲ್ (ATC) ಮೂಲಗಳು ವಿಮಾನದ ಒಂದು ಇಂಜಿನ್ ಗಾಳಿಯಲ್ಲಿದ್ದಾಗ ವಿಫಲವಾಗಿದೆ ಎಂದು ಖಚಿತಪಡಿಸಿವೆ. ರಾತ್ರಿಯೇ ವಿಮಾನ ನಿಲ್ದಾಣಕ್ಕೆ ಧಾವಿಸಿದ ಪೊಲೀಸರು ಕೂಡ ಇದನ್ನು ದೃಢಪಡಿಸಿದ್ದಾರೆ. ಏರ್ ಇಂಡಿಯಾ ಇದನ್ನು ಕಾರ್ಯಾಚರಣೆ ಸಮಸ್ಯೆ ಎಂದು ಹೇಳಿದೆ.
ಎಲ್ಲಾ ತುರ್ತು ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗಿದೆ. ವಿಮಾನ ಇಳಿಯುವ ಮೊದಲು ಆಂಬ್ಯುಲೆನ್ಸ್‌ಗಳು ಮತ್ತು ಅಗ್ನಿಶಾಮಕ ದಳಗಳು ಸ್ಟ್ಯಾಂಡ್‌ಬೈನಲ್ಲಿವೆ ಎಂದು ವಿಮಾನ ನಿಲ್ದಾಣದ ಮೂಲವೊಂದು ತಿಳಿಸಿದೆ.
ಉನ್ನತ ಪೊಲೀಸ್ ಅಧಿಕಾರಿಯೊಬ್ಬರು, ದಿಲ್ಲಿಗೆ ಹೋಗುವ ಏರ್ ಇಂಡಿಯಾ ವಿಮಾನದಲ್ಲಿ ಎಂಜಿನ್ ಸಮಸ್ಯೆ ಕಾಣಿಸಿಕೊಂಡಿದೆ ಎಂದು ನನಗೆ ತಿಳಿಸಲಾಯಿತು. 150 ರಿಂದ 180 ಪ್ರಯಾಣಿಕರನ್ನು ಹೊತ್ತಿರುವ ವಿಮಾನವು ಸ್ವಲ್ಪ ಸಮಯದಲ್ಲೇ ಲ್ಯಾಂಡಿಂಗ್ ಆಗಲಿರುವ ಕಾರಣ ನಿನ್ನೆ ರಾತ್ರಿ ತಕ್ಷಣ ಕರ್ತವ್ಯಕ್ಕೆ ವರದಿ ಮಾಡಲು ನನಗೆ ಸೂಚನೆ ಬಂತು. ವಿಮಾನವು ಸುರಕ್ಷಿತವಾಗಿ ಇಳಿದು ಯಾವುದೇ ಸಮಸ್ಯೆಯಾಗಲಿಲ್ಲ ಎಂದರು.
ಕಾರ್ಯಾಚರಣೆಯ ಕಾರಣಗಳಿಂದ ವಿಮಾನ ಲ್ಯಾಂಡಿಂಗ್
ಪ್ರಯಾಣಿಕರನ್ನು ಮತ್ತೆ ಟರ್ಮಿನಲ್‌ಗೆ ಕರೆದೊಯ್ಯಲಾಯಿತು. ವಿಮಾನವು ಭಾನುವಾರ ರಾತ್ರಿ 11:47 ಕ್ಕೆ ಮತ್ತೆ ಟೇಕ್ ಆಫ್ ಆಗಿದ್ದು, ಸೋಮವಾರ ಬೆಳಗ್ಗೆ 2:07 ಕ್ಕೆ ದೆಹಲಿಯನ್ನು ತಲುಪಿದೆ ಎಂದರು.
ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಎಐ 2820 ಇದೀಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಆಗಿದೆ. ಒಂದು ಗಂಟೆ ನಂತರ ವಿಮಾನ ಮತ್ತೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಿತು ಎಂದಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ, ಸುರಕ್ಷಿತ ಲ್ಯಾಂಡಿಂಗ್‌ಗಾಗಿ ಕ್ಯಾಪ್ಟನ್‌ಗೆ ಧನ್ಯವಾದಗಳು. ಎಲ್ಲಾ ಭದ್ರತಾ ಸಿಬ್ಬಂದಿ ಆತಂಕದಲ್ಲಿದ್ದರು. ಅವರು ಹಂಚಿಕೊಂಡ ವೀಡಿಯೊದಲ್ಲಿ ಪ್ರಯಾಣಿಕರು ಇಳಿದು ಶಟಲ್ ಬಸ್‌ಗೆ ಹೋಗುತ್ತಿರುವುದನ್ನು ತೋರಿಸಿದೆ. ವೀಡಿಯೊ ಚಿತ್ರೀಕರಣ ಮಾಡುತ್ತಿದ್ದ ವ್ಯಕ್ತಿಗೆ ಪ್ರಯಾಣಿಕರೊಬ್ಬರು, ನಿಮಗೆ ಪುನರ್ಜನ್ಮ ಸಿಕ್ಕಿದ್ದನ್ನು ವಿಡಿಯೊ ಚಿತ್ರೀಕರಣ ಮಾಡುತ್ತಿದ್ದೀರಿ ಎಂದಿದ್ದಾರೆ.
ಏರ್ ಇಂಡಿಯಾ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಪ್ರತಿಕ್ರಿಯೆ ನೀಡಿ, ಎಐ 2820 ವಿಮಾನವು ಕಾರ್ಯಾಚರಣೆಯ ಕಾರಣಗಳಿಂದ ಬೆಂಗಳೂರಿಗೆ ಮರಳಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ಆದ್ಯತೆಯಾಗಿದೆ. ನಮ್ಮ ತಂಡವು ಎಲ್ಲಾ ಪ್ರಯಾಣಿಕರಿಗೆ ಸಹಾಯ ಮಾಡಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದೆ ಎಂದಿದ್ದಾರೆ.
Advertisement