ಭಾರತೀಯರಲ್ಲಿ ಇತ್ತೀಚೆಗೆ ಮಧುಮೇಹ ಹೆಚ್ಚಲು ಕಾರ್ಬೋಹೈಡ್ರೇಟ್ ಭರಿತ ಆಹಾರಗಳೇ ಮುಖ್ಯ ಕಾರಣ: ಮಾಜಿ ಸಿಜೆಐ

ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಲಭ್ಯವಿರುವ 'ಡಯಾಬಿಟಿಸ್ ನೋ ಮೋರ್' ಪುಸ್ತಕವು ಮಧುಮೇಹವನ್ನು ಗುಣಪಡಿಸಲು ಸಾಧ್ಯವಿಲ್ಲ ಎಂಬ ದೃಷ್ಟಿಕೋನವನ್ನು ಬದಲಿಸುವ ಗುರಿಯನ್ನು ಹೊಂದಿದೆ.
Former CJI D Y Chandrachud launches the book ‘Diabetes No More’ authored by Dr K Bhujang Shetty, in Bengaluru on Thursday
ದಿ. ಡಾ. ಕೆ. ಭುಜಂಗ ಶೆಟ್ಟಿ ಅವರು ಬರೆದಿದ್ದ 'ಡಯಾಬಿಟಿಸ್ ನೋ ಮೋರ್' ಪುಸ್ತಕವನ್ನು ಮಾಜಿ ಸಿಜೆಐ ಡಿ ವೈ ಚಂದ್ರಚೂಡ್ ಬಿಡುಗಡೆ ಮಾಡಿದರು.
Updated on

ಬೆಂಗಳೂರು: ಭಾರತೀಯರು ತಮ್ಮ ಸಾಂಪ್ರದಾಯಿಕ, ರಾಗಿ ಆಧಾರಿತ, ಮಣ್ಣಿನೊಳಗೆ ಬೆಳೆಯುವ ಆಹಾರ ಪದ್ಧತಿಯಿಂದ ದೂರ ಸರಿಯುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕಾರ್ಬೋಹೈಡ್ರೇಟ್-ಭರಿತ ಆಹಾರಗಳು ನಮ್ಮ ಸೇವಿಸುವ ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಪಾಶ್ಚಾತ್ಯ ಆಹಾರ ಪದ್ಧತಿಗಳಿಗೆ ಒಲಿಯುತ್ತಿರುವುದರಿಂದ ದೇಶದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.

ನಾರಾಯಣ ನೇತ್ರಾಲಯದ ಸಂಸ್ಥಾಪಕ ದಿವಂಗತ ಡಾ. ಕೆ. ಭುಜಂಗ್ ಶೆಟ್ಟಿ ಅವರ 'ಡಯಾಬಿಟಿಸ್ ನೋ ಮೋರ್' ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಪುಸ್ತಕದಲ್ಲಿ ಮಧುಮೇಹವು ಅನುವಂಶಿಕ ಕಾಯಿಲೆಯಾಗಬೇಕೆಂದಿಲ್ಲ, ನಮ್ಮ ಆಹಾರ ಪದ್ಧತಿ ಮತ್ತು ಜೀವನ ಕ್ರಮಗಳಿಂದ ಬರಬಹುದು ಎಂಬುದನ್ನು ತೋರಿಸಿಕೊಡುತ್ತದೆ ಎಂದಿದ್ದಾರೆ.

ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಲಭ್ಯವಿರುವ ಈ ಪುಸ್ತಕವು ಮಧುಮೇಹವನ್ನು ಗುಣಪಡಿಸಲು ಸಾಧ್ಯವಿಲ್ಲ ಎಂಬ ದೃಷ್ಟಿಕೋನವನ್ನು ಬದಲಿಸುವ ಗುರಿಯನ್ನು ಹೊಂದಿದೆ. ಕಡಿಮೆ ಕಾರ್ಬೋಹೈಡ್ರೇಟ್ ಹೊಂದಿರುವ ಆಹಾರ ರೋಗವನ್ನು ಹಿಮ್ಮೆಟ್ಟಿಸಬಹುದು ಎಂದು ಎತ್ತಿ ತೋರಿಸುತ್ತದೆ. ಈ ಕಾರ್ಯಕ್ರಮದ ಸಂದರ್ಭದಲ್ಲಿ, ನ್ಯಾಯಮೂರ್ತಿ ಚಂದ್ರಚೂಡ್ ತಮ್ಮ ಮಾವನ ಕಥೆಯನ್ನು ಹಂಚಿಕೊಂಡರು. ಆರೋಗ್ಯಕರ ಆಹಾರವನ್ನು ಅಳವಡಿಸಿಕೊಂಡ ನಂತರ ಅವರ ಆರೋಗ್ಯ ಹೇಗೆ ಗಮನಾರ್ಹವಾಗಿ ಸುಧಾರಿಸಿತು, ಸಸ್ಯಾಹಾರಿ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ಜೀವನಶೈಲಿಯನ್ನು ಹೇಗೆ ಬದಲಾಯಿಸಿಕೊಂಡರು ಎಂಬುದನ್ನು ವಿವರಿಸಿದರು.

ಮಾನವ ಆರೋಗ್ಯವನ್ನು ರೂಪಿಸುವಲ್ಲಿ ಪರಿಸರ ಮತ್ತು ತಳಿಶಾಸ್ತ್ರದ ಪರಸ್ಪರ ಕ್ರಿಯೆಯ ಬಗ್ಗೆ ಬೆಳಕು ಚೆಲ್ಲಿದರು, ಆಹಾರ ಪದ್ಧತಿ ಮತ್ತು ಜೀವನಶೈಲಿಯ ಆಯ್ಕೆಗಳು ಮಧುಮೇಹವನ್ನು ನಿರ್ವಹಿಸುವ ಮತ್ತು ಹಿಮ್ಮೆಟ್ಟಿಸುವ ಕೀಲಿಯನ್ನು ಹೊಂದಿವೆ. ಶಿಸ್ತುಬದ್ಧ ಆಹಾರ ಪದ್ಧತಿಗಳ ಮೂಲಕ ಮಧುಮೇಹವನ್ನು ನಿವಾರಿಸುವ ಡಾ. ಭುಜಂಗ ಶೆಟ್ಟಿ ಅವರ ವೈಯಕ್ತಿಕ ಪಯಣವನ್ನು ಶ್ಲಾಘಿಸಿದರು. ಜನರು ತಮ್ಮ ಆರೋಗ್ಯವನ್ನು ಹೇಗೆ ನಿರ್ವಹಿಸಬಹುದು ಎಂಬುದಕ್ಕೆ ಇದು ಸ್ಪೂರ್ತಿದಾಯಕ ಉದಾಹರಣೆಯಾಗಿದೆ ಎಂದು ಹೇಳಿದರು.

ಆರೋಗ್ಯಕರ ಆಹಾರಕ್ರಮ, ನಿಯಮಿತ ವ್ಯಾಯಾಮ ಮತ್ತು ಒತ್ತಡ ನಿರ್ವಹಣೆಯನ್ನು ಒಳಗೊಂಡ ಸಮತೋಲಿತ ಜೀವನಶೈಲಿಯನ್ನು ಪ್ರತಿಪಾದಿಸುವ ಮೂಲಕ, ಮೂಲಭೂತ ವಿಷಯಗಳಿಗೆ ಮರಳುವ ಅಗತ್ಯವನ್ನು ಮಾಜಿ ಸಿಜೆಐ ಒತ್ತಿ ಹೇಳಿದರು. ಆಹಾರ ಬದಲಾವಣೆಗಳು ಆರೋಗ್ಯವನ್ನು ಗಮನಾರ್ಹವಾಗಿ ಸುಧಾರಿಸುತ್ತವೆ. ಇನ್ಸುಲಿನ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ದಿನಕ್ಕೆ 20 ರಿಂದ ಒಂದು ಡೋಸ್‌ಗೆ ಹೇಗೆ ಕಡಿಮೆ ಮಾಡಿದವು ಎಂಬುದನ್ನು ಒಳಗೊಂಡಂತೆ ಅವರು ವೈಯಕ್ತಿಕ ಉಪಾಖ್ಯಾನಗಳನ್ನು ವಿವರಿಸಿದರು.

Former CJI D Y Chandrachud launches the book ‘Diabetes No More’ authored by Dr K Bhujang Shetty, in Bengaluru on Thursday
World Diabetes Day: ಮಕ್ಕಳಲ್ಲಿ ಮಧುಮೇಹ ತಡೆಯುವುದು ಹೇಗೆ...?

ಪಾಶ್ಚಿಮಾತ್ಯ ಜೀವನಶೈಲಿಗೆ ಸಂಬಂಧ ಹೊಂದಿರುವ ಆಹಾರಗಳಾದ ಅಕ್ಕಿ ಮತ್ತು ಗೋಧಿಯ ಪರವಾಗಿ ಒಂದು ಕಾಲದಲ್ಲಿ ಪ್ರಧಾನ ಆಹಾರವಾಗಿದ್ದ ರಾಗಿಗಳಂತಹ ಸಾಂಪ್ರದಾಯಿಕ ಭಾರತೀಯ ಆಹಾರಗಳ ಮೇಲೆ ಇತ್ತೀಚೆಗೆ ಜನರಲ್ಲಿ ನಿರ್ಲಕ್ಷ್ಯ ಹೆಚ್ಚುತ್ತಿರುವ ಬಗ್ಗೆ ಅವರು ಗಮನಸೆಳೆದರು. ಈ ಬದಲಾವಣೆಯು ವೈಯಕ್ತಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ, ಪೋಷಣೆ ಮತ್ತು ಯೋಗಕ್ಷೇಮದ ಬಗ್ಗೆ ಇಂದಿನ ಪೀಳಿಗೆಯವರಲ್ಲಿ ಅನಾರೋಗ್ಯಕ್ಕೆ ಕಾರಣವಾಗಿದೆ ಎಂದರು.

ಈ ಕಾರ್ಯಕ್ರಮದ ಸಂದರ್ಭದಲ್ಲಿ, ಮಾಜಿ ಸಿಜೆಐ ದೀರ್ಘಾವಧಿಯ ಆರೋಗ್ಯದ ಮೇಲೆ, ವಿಶೇಷವಾಗಿ ಮಧುಮೇಹ, ಕೊಲೆಸ್ಟ್ರಾಲ್ ಮತ್ತು ಆಸ್ತಮಾದಂತಹ ಅನಾರೋಗ್ಯಗಳನ್ನು ತಡೆಗಟ್ಟುವಲ್ಲಿ ಸ್ತನ್ಯಪಾನದ ಪ್ರಭಾವವನ್ನು ಒತ್ತಿ ಹೇಳಿದರು. ಸ್ತನ್ಯಪಾನವು ಮಗುವನ್ನು ಪೋಷಿಸುವುದಕ್ಕೆ ಮೀರಿದ ಆರೋಗ್ಯ ಅಂಶಗಳನ್ನು ಹೊಂದಿರುತ್ತದೆ. ಸ್ತನ್ಯಪಾನವನ್ನು ಪ್ರೋತ್ಸಾಹಿಸುವ ಸಮಾಜವನ್ನು ಸೃಷ್ಟಿಸುವುದು ಅತ್ಯಗತ್ಯ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com