ಪಂಚಮಸಾಲಿ ಮೀಸಲಾತಿ ಹೋರಾಟ ಮತ್ತಷ್ಚು ತೀವ್ರ: 'ಪ್ರತಿಜ್ಞಾ ಕ್ರಾಂತಿ' ಅಭಿಯಾನಕ್ಕೆ ಚಾಲನೆ

ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಸಂವಾದ ಮಾಡಿ, ಜಾಗೃತಿ ಮೂಡಿಸಲಾಗುವುದು. ತಾಲ್ಲೂಕು ಕೇಂದ್ರಗಳಲ್ಲೂ ಸಭೆ ನಡೆಸಿ ಜನರ ಸಲಹೆ–ಸೂಚನೆಗಳನ್ನು ಕ್ರೋಡೀಕರಿಸಿ ಮುಂದಿನ ಹೋರಾಟ ನಿರ್ಧರಿಸಲಾಗುತ್ತದೆ.
ಬಸವ ಜಯ ಮೃತ್ಯುಂಜಯ ಸ್ವಾಮಿ
ಬಸವ ಜಯ ಮೃತ್ಯುಂಜಯ ಸ್ವಾಮಿ
Updated on

ಬಾಗಲಕೋಟೆ/ ಬೆಂಗಳೂರು: ಪಂಚಮಸಾಲಿಗರಿಗೆ 2ಎ ಮೀಸಲಾತಿ ಹೋರಾಟ ಇನ್ನಷ್ಟು ಗಟ್ಟಿಗೊಳಿಸಲು ಹಾಗೂ ರಾಜ್ಯ ಸರ್ಕಾರದ ದೌರ್ಜನ್ಯ ಖಂಡಿಸಿ ರಾಜ್ಯದ ಪ್ರತಿ ಗ್ರಾಮದಲ್ಲಿ ‘ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಲಾಗಿದೆ.

ಕೂಡಲ ಸಂಗಮ ಪಂಚಮಸಾಲಿ ಪೀಠವು ಈ ಜಾಗೃತಿ ಅಭಿಯಾನ ಆರಂಭಿಸಿದೆ. ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಸಂವಾದ ಮಾಡಿ, ಜಾಗೃತಿ ಮೂಡಿಸಲಾಗುವುದು. ತಾಲ್ಲೂಕು ಕೇಂದ್ರಗಳಲ್ಲೂ ಸಭೆ ನಡೆಸಿ ಜನರ ಸಲಹೆ–ಸೂಚನೆಗಳನ್ನು ಕ್ರೋಡೀಕರಿಸಿ ಮುಂದಿನ ಹೋರಾಟ ನಿರ್ಧರಿಸಲಾಗುತ್ತದೆ.

ಪಂಚಮಸಾಲಿಗಳು ವಾಸಿಸುವ ಸುಮಾರು 12,000 ಹಳ್ಳಿಗಳಲ್ಲಿ ತಮ್ಮ ಉದ್ದೇಶವನ್ನು ಹರಡಲು ಸಮುದಾಯವು ಈಗ ಬದ್ಧವಾಗಿದೆ. ನೂರಕ್ಕೂ ಹೆಚ್ಚು ಅನುಯಾಯಿಗಳೊಂದಿಗೆ ಜಯಮೃತ್ಯುಂಜಯ ಸ್ವಾಮಿ ಅವರು ಪ್ರಮಾಣವಚನ ಸಮಾರಂಭದ ನೇತೃತ್ವ ವಹಿಸುವುದರೊಂದಿಗೆ ಅಭಿಯಾನ ಪ್ರಾರಂಭವಾಯಿತು. ಕೇವಲ ಪ್ರತಿಭಟನೆ ಮಾಡುವುದರಿದ MBC ಸ್ಥಾನಮಾನವನ್ನು ಪಡೆಯಲು ಸಾಧ್ಯವಿಲ್ಲ ಎಂದು ವಾದಿಸುವ ಇತರ ಹಿಂದುಳಿದ ಸಮುದಾಯಗಳ ಕೆಲವು ನಾಯಕರ ವಿರೋಧದ ಹೊರತಾಗಿಯೂ, ಅಭಿಯಾನವು ಮುಂದುವರಿಸಲು ನಿರ್ಣಯ ಕೈಗೊಳ್ಳಲಾಯಿತು.

ಹಳ್ಳಿಗಳಿಗೆ ಭೇಟಿ ನೀಡುವ ಮತ್ತು ಸ್ಥಳೀಯ ಜನರೊಂದಿಗೆ ಸಮಾಲೋಚಿಸುವ ತಮ್ಮ ಯೋಜನೆ ಬಗ್ಗೆ ತಿಳಿಸುವುದಾಗಿ ಜಯಮೃತ್ಯುಂಜಯ ಸ್ವಾಮಿ ಹೇಳಿದರು. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅವರು, ಕಳೆದ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ಪಂಚಮಸಾಲಿ ಪ್ರತಿಭಟನಾಕಾರರ ಮೇಲೆ ಪೊಲೀಸರ ದೌರ್ಜನ್ಯದ ತಮ್ಮ ದೀರ್ಘಕಾಲದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿರುವುದಾಗಿ ಹೇಳಿದರು.

ಬಸವ ಜಯ ಮೃತ್ಯುಂಜಯ ಸ್ವಾಮಿ
ಸಭೆ ಕರೆದ ಸಿಎಂ: ಪಂಚಮಸಾಲಿ ಲಿಂಗಾಯತ ಪ್ರತಿಭಟನೆ ತಾತ್ಕಾಲಿಕ ಅಂತ್ಯ

ಪಂಚಮಸಾಲಿ ಮುಖಂಡರಾದ ದೀಕ್ಷಾ ಗೌಡ ಮತ್ತು ಮಲೆಗೌಡರಿಗೆ 2A MBC ವರ್ಗದ ಅಡಿಯಲ್ಲಿ ಸಮುದಾಯಕ್ಕೆ ಅಧಿಕೃತ ಮಾನ್ಯತೆ ನೀಡುವಂತೆ ಹೋರಾಡಲು ಪಂಚಮಸಾಲಿ ಸ್ವಾಮಿಗಳು ತಿಳಸಿದ್ದಾರೆ. ರಾಜ್ಯದಾದ್ಯಂತ ಹಳ್ಳಿಗಳಿಗೆ ಹೋರಾಟವನ್ನು ಕೊಂಡೊಯ್ಯುವಂತೆ ಸ್ವಾಮಜಿ ಸದಸ್ಯರನ್ನು ಒತ್ತಾಯಿಸಿದ್ದಾರೆ,

ಆದಾಗ್ಯೂ, ತಾಂತ್ರಿಕವಾಗಿ ಪಂಚಮಸಾಲಿಗಳು ಕೃಷಿಕರಾಗಿರುವುದರಿಂದ, ಕುಶಲಕರ್ಮಿ ಸಮುದಾಯಗಳಿಗೆ ಮೀಸಲಾದ 2A ಅಡಿಯಲ್ಲಿ ಅವರಿಗೆ ಕಾನೂನುಬದ್ಧವಾಗಿ ಅಥವಾ ಸಾಂವಿಧಾನಿಕವಾಗಿ ಮೀಸಲಾತಿ ನೀಡಲಾಗುವುದಿಲ್ಲ ಎಂದು ಮಾಜಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಸಿ.ಎಸ್. ದ್ವಾರಕನಾಥ್ ತಿಳಿಸಿದ್ದಾರೆ.

ಸಮುದಾಯದ ನಾಯಕರು ಈಗ ಹಳ್ಳಿಯಿಂದ ಹಳ್ಳಿಗೆ ಮೆರವಣಿಗೆ ನಡೆಸಲಿದ್ದಾರೆ, ಜನರು ಪ್ರತಿಜ್ಞೆ ಮಾಡುವಂತೆ ಒತ್ತಾಯಿಸುತ್ತಾರೆ. ಮೀಸಲಾತಿಗಾಗಿ ಸಮುದಾಯದ ಹೋರಾಟವನ್ನು ಬಲಪಡಿಸಲು ಏಕತೆ ಮತ್ತು ದೃಢಸಂಕಲ್ಪವನ್ನು ಬೆಳೆಸುವ ಗುರಿಯನ್ನು ಈ ಅಭಿಯಾನ ಹೊಂದಿದೆ.

ಡಿಸೆಂಬರ್‌ನಲ್ಲಿ ನಿಗದಿಯಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗಿನ ಸಭೆ ವಿಳಂಬವಾಗಿದೆ. ಚರ್ಚೆಯನ್ನು ಸುಗಮಗೊಳಿಸಲು ಶ್ರಮಿಸಿದ ಕಾಂಗ್ರೆಸ್ ನಾಯಕರಾದ ಬಿ.ಆರ್. ಪಾಟೀಲ್ ಮತ್ತು ವಿಜಯಾನಂದ ಕಾಶಪ್ಪನವರ್, ಸಭೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಲಾಗಿದೆ ಎಂದು ದೃಢಪಡಿಸಿದರು.

ಏತನ್ಮಧ್ಯೆ, ಫೆಬ್ರವರಿ 12 ರಂದು ಕೂಡಲಸಂಗಮದಲ್ಲಿ ಪಂಚಮಸಾಲಿ ನಾಯಕರ ಮತ್ತೊಂದು ಸಭೆ ನಡೆಯಲಿದ್ದು, ಅಲ್ಲಿ ಅಭಿಯಾನದ ಮುಂದಿನ ಯೋಜನೆಗಳನ್ನು ವಿವರಿಸಲಾಗುವುದು ಎಂದು ಮಠಾಧೀಶರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com