
ಬೆಂಗಳೂರು: ಗೊಂದಲಮಯ ಘಟನೆಯೊಂದರಲ್ಲಿ, ಬೆಂಗಳೂರು ನಗರ ವಿಶ್ವವಿದ್ಯಾಲಯ(BCU) ಜನವರಿ 16 ರಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಿಗದಿಯಾಗಿದ್ದ ಬಿಕಾಂ ಮೊದಲ ಸೆಮಿಸ್ಟರ್ ಪರೀಕ್ಷೆಯನ್ನು ಕೊನೆ ಕ್ಷಣದಲ್ಲಿ ಮುಂದೂಡಿದೆ. ಆದರೆ ಹೊಸ ದಿನಾಂಕ ಪ್ರಕಟಿಸಿಲ್ಲ.
ಈ ಹಠಾತ್ ಬದಲಾವಣೆಯಿಂದ ಸಾವಿರಾರು ವಿದ್ಯಾರ್ಥಿಗಳು, ವಿಶೇಷವಾಗಿ ಚಾರ್ಟರ್ಡ್ ಅಕೌಂಟೆನ್ಸಿ(CA) ಫೌಂಡೇಶನ್ ಪರೀಕ್ಷೆಗೆ ಹಾಜರಾಗುತ್ತಿದ್ದವರು ತೀವ್ರ ಗೊಂದಲಕ್ಕೆ ಸಿಲುಕಿದ್ದರು.
ವಿಶ್ವವಿದ್ಯಾಲಯವು ಬುಧವಾರ ಸಂಜೆ 4.30 ಕ್ಕೆ ತನ್ನ ಮೊದಲ ಅಧಿಸೂಚನೆಯನ್ನು ಹೊರಡಿಸಿ, ಬಿಕಾಂ ಮೊದಲ ಸೆಮಿಸ್ಟರ್ ಪರೀಕ್ಷೆಯನ್ನು ಗುರುವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ ಎಂದು ವಿದ್ಯಾರ್ಥಿಗಳು ಮತ್ತು ಪ್ರಾಂಶುಪಾಲರಿಗೆ ಸಮಯ ಬದಲಾವಣೆಯ ಬಗ್ಗೆ ತಿಳಿಸಿದೆ. ಆದರೆ ಮಧ್ಯಾಹ್ನ 2 ಗಂಟೆಗೆ CA ಪರೀಕ್ಷೆ ಸಹ ಇದ್ದುದ್ದರಿಂದ ಕೊನೆ ಕ್ಷಣದಲ್ಲಿ ಪರೀಕ್ಷೆ ಮುಂದೂಡಲಾಗಿದೆ.
ಸಂಜೆ ನಂತರ, ಬೆಂಗಳೂರು ನಗರ ವಿಶ್ವವಿದ್ಯಾಲಯವು ಮತ್ತೊಂದು ಪ್ರಕಟಣೆಯನ್ನು ಹೊರಡಿಸಿ, "ಅನಿವಾರ್ಯ ಕಾರಣಗಳನ್ನು" ಉಲ್ಲೇಖಿಸಿ ಹೊಸ ದಿನಾಂಕವನ್ನು ನೀಡದೆ ಪರೀಕ್ಷೆಯನ್ನು ಅನಿರ್ದಿಷ್ಟವಾಗಿ ಮುಂದೂಡಿದೆ.
Advertisement