ಯಾವುದೇ ಮೀನುಗಾರನ ಮೇಲೆ ಹಲ್ಲೆ ನಡೆದಿಲ್ಲ: ಭಾರತೀಯ ನೌಕಾಪಡೆ

ಕಾರಿನಲ್ಲಿ ಒಬ್ಬ ನಾವಿಕನನ್ನು ಅಪಹರಿಸಿಲಾಗಿತ್ತು. ಆದರೆ ಬೆನ್ನಟ್ಟಿದ ಅವರ ಸಹೋದ್ಯೋಗಿಗಳು ರಕ್ಷಿಸಿದ್ದಾರೆ ಎಂದು ನೌಕಾಪಡೆ ಆರೋಪಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕಾರವಾರ: ಇಬ್ಬರು ನೌಕಾಪಡೆ ಸಿಬ್ಬಂದಿಯ ವಾಹನ ಮೀನುಗಾರರ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮೀನುಗಾರರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಭಾರತೀಯ ನೌಕಾಪಡೆ ಸ್ಪಷ್ಟವಾಗಿ ತಳ್ಳಿಹಾಕಿದೆ.

ಕಾರಿನಲ್ಲಿ ಒಬ್ಬ ನಾವಿಕನನ್ನು ಅಪಹರಿಸಿಲಾಗಿತ್ತು. ಆದರೆ ಬೆನ್ನಟ್ಟಿದ ಅವರ ಸಹೋದ್ಯೋಗಿಗಳು ರಕ್ಷಿಸಿದ್ದಾರೆ ಎಂದು ನೌಕಾಪಡೆ ಆರೋಪಿಸಿದೆ. ಈಗ, ಉತ್ತರ ಕನ್ನಡ ಜಿಲ್ಲಾ ಪೊಲೀಸರು ಘಟನೆಯ ಬಗ್ಗೆ ನೌಕಾಪಡೆಯ ಉನ್ನತ ಅಧಿಕಾರಿಗಳಿಗೆ ಪತ್ರ ಬರೆಯಲು ಯೋಜಿಸಿದ್ದು, ಘಟನೆಯಲ್ಲಿ ಮೀನುಗಾರರು ಮತ್ತು ಐಎನ್ಎಸ್ ಕದಂಬ ಸಿಬ್ಬಂದಿ ಭಾಗಿಯಾಗಿದ್ದಾರೆ.

ಕಾರವಾರ ಬಳಿಯ ಮುದ್ಗಾದಲ್ಲಿ ಭಾನುವಾರ ನಡೆದ ಅಪಘಾತದಲ್ಲಿ ಇಬ್ಬರು ನೌಕಾಪಡೆ ಸಿಬ್ಬಂದಿ ತೆರಳುತ್ತಿದ್ದ ಬೈಕ್‌, ಶ್ರೀನಿವಾಸ್(50) ಎಂಬ ಮೀನುಗಾರನ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದು, ಎರಡೂ ಕಡೆಯವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನಾವಿಕರು ಗಾಯಗೊಂಡ ಮೀನುಗಾರನಿಗೆ ಸಹಾಯ ಮಾಡಿದರು. ಆದರೆ ನಂತರ ಘಟನೆ ಗಂಭೀರ ಸ್ವರೂಪ ಪಡೆದಿದ್ದು, ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಸಾಂದರ್ಭಿಕ ಚಿತ್ರ
ಕಾರವಾರ: ಕದಂಬ ನೌಕಾನೆಲೆ ಬಳಿ GPS ಟ್ರ್ಯಾಕರ್ ಹೊಂದಿದ್ದ ರಣಹದ್ದು ಪತ್ತೆ!

“ನಾವಿಕರು, ಗಾಯಗೊಂಡ ಮೀನುಗಾರನನ್ನು ಪಿಕಲೆ ನರ್ಸಿಂಗ್ ಹೋಂಗೆ ಕರೆದೊಯ್ದ, ಸಕಾಲಿಕ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದಾರೆ.... ಆದರೆ ಅಪಘಾತದ ಸ್ವಲ್ಪ ಸಮಯದ ನಂತರ, 4-5 ನಾಗರಿಕರು ಒಟ್ಟುಗೂಡಿದರು ಮತ್ತು ಪರಿಸ್ಥಿತಿಯನ್ನು ಶಾಂತಗೊಳಿಸಲು ನಾವಿಕರು ಮಾಡಿದ ಪ್ರಯತ್ನಗಳ ಹೊರತಾಗಿಯೂ, ಒಂದು ಸಣ್ಣ ಜಗಳ ನಡೆಯಿತು" ಎಂದು ನಾವಿಕರು ದೂರು ದಾಖಲಿಸಿದ್ದಾರೆ.

"ನಾವು ಸ್ಥಳದಿಂದ ಹೊರಟೆವು, ಆದರೆ ನಾಗರಿಕರು ನಮ್ಮನ್ನು ಹಿಂಬಾಲಿಸಿದರು ಮತ್ತು ಹೆಚ್ಚುವರಿ 50,000 ರೂ. ಪರಿಹಾರ ಕೇಳಿದರು. ನಂತರ ನನ್ನ ಸ್ನೇಹಿತನನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿ ಅಮ್ಡಳ್ಳಿ ಕಡೆಗೆ ಕರೆದೊಯ್ಯಲಾಯಿತು. ನಾವು ಅವರ ವಾಹನವನ್ನು ತಡೆದು ಸಹೋದ್ಯೋಗಿಯನ್ನು ರಕ್ಷಿಸಿದೆವು" ಎಂದು ದೂರುದಾರ ಯೋಗೇಶ್ ಕುಮಾರ್ ಹೇಳಿದ್ದಾರೆ.

ನೌಕಾಪಡೆ, ಮೀನುಗಾರರ ನಡುವೆ ಸಮನ್ವಯ ಸಭೆ?

“ನಾಗರಿಕರು ವಾಹನವನ್ನು ಬಿಟ್ಟು ಓಡಿಹೋದರು. ಘಟನೆಯನ್ನು ನೌಕಾ ಪೊಲೀಸರ ಮೂಲಕ ಸ್ಥಳೀಯ ಪೊಲೀಸರಿಗೆ ತಕ್ಷಣ ವರದಿ ಮಾಡಲಾಯಿತು ಮತ್ತು ವಾಹನದ ಕೀಯನ್ನು ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು” ಎಂದು ದೂರುದಾರರು ತಿಳಿಸಿದ್ದಾರೆ.

ವಿಷಯ ಇಲ್ಲಿಗೆ ಮುಗಿಯಲಿಲ್ಲ. ಸೋಮವಾರ ಬೆಳಗ್ಗೆ, ಅಮ್ಡಳ್ಳಿಯ ಗ್ರಾಮಸ್ಥರ ಗುಂಪೊಂದು ಪ್ರತಿಭಟನೆ ನಡೆಸಿ NCHC ಅಮ್ಡಳ್ಳಿಯ ಗೇಟ್ ಅನ್ನು ಬಂದ್ ಮಾಡಿದರು.

“ಪ್ರತಿಭಟನಾಕಾರರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸ್ಥಳೀಯ ಆಡಳಿತ ಮತ್ತು ಪೊಲೀಸರು ಪರಿಸ್ಥಿತಿಯನ್ನು ಸರಿಪಡಿಸಿದರು. ನೌಕಾ ನೆಲೆ ಕಾರವಾರದ ಹಿರಿಯ ನೌಕಾ ಸಿಬ್ಬಂದಿ, ಸ್ಥಳೀಯ ತಹಶೀಲ್ದಾರ್ ಮತ್ತು ಉಪ ಎಸ್ಪಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಮಧ್ಯಾಹ್ನ 12.45 ರ ಹೊತ್ತಿಗೆ ಪರಿಸ್ಥಿತಿಯನ್ನು ಶಾಂತಗೊಳಿಸಿದರು” ಎಂದು ನೌಕಾಪಡೆಯ ಪ್ರಕಟಣೆ ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ನೌಕಾಪಡೆಯ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ನೌಕಾಪಡೆಯ ಉನ್ನತ ಅಧಿಕಾರಿಗಳಿಗೆ ಪತ್ರ ಬರೆಯುವ ಬಗ್ಗೆ ಯೋಚಿಸುತ್ತಿದ್ದಾರೆ" ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಎಸ್‌ಪಿ ನಾರಾಯಣ್ ಅವರು ಮೀನುಗಾರರು ಮತ್ತು ನೌಕಾಪಡೆ ಅಧಿಕಾರಿಗಳ ನಡುವೆ ಸಮನ್ವಯ ಸಭೆ ನಡೆಸುವ ಸಾಧ್ಯತೆ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com