
ಬೆಳಗಾವಿ: ಬೆಳಗಾವಿಯಲ್ಲಿರುವ ರಾಯಬಾಗ್ ತಾಲ್ಲೂಕಿನ ಹಾರೂಗೇರಿ ಗ್ರಾಮದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ 24 ಗಂಟೆಗಳ ಒಳಗೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ, ಅವರ ಮೊಬೈಲ್ ಫೋನ್‌ನಲ್ಲಿ ದಾಖಲಾಗಿರುವ ಸಾಕ್ಷ್ಯವನ್ನು ವಶಪಡಿಸಿಕೊಂಡಿದ್ದಾರೆ.
ಯಲ್ಪಾರಟ್ಟಿಯ ಅಭಿಷೇಕ ಬಾಳಪ್ಪ ಬೆವನೂರು, ಹಾರೂಗೇರಿಯ ಆದಿಲ್ ಷಾ ಶಬ್ಬೀರ್ ಜಮಾದಾರ ಮತ್ತು ಅಲಕನೂರಿನ ಕೌತುಕ್ ಬಾನು ಬಡಿಗೇರ ಬಂಧಿತರು. ಮೂವರ ಮೇಲೂ ಪೋಕ್ಸೊ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಬುಧವಾರ ತಿಳಿಸಿದ್ದಾರೆ.
ದೂರು ನೀಡಿರುವ ಯುವತಿ ಅಭಿಷೇಕ ದೇವನೂರು ಎಂಬಾತ ಇನ್‌ಸ್ಟಾಗ್ರಾಂನಲ್ಲಿ ಪರಿಚಯ ಮಾಡಿಕೊಂಡಿದ್ದಳು. ಸಂದೇಶಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದ ಯುವತಿ ಆರೋಪಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಳು. ಜನವರಿ 3ರಂದು ಅಥಣಿ ತಾಲೂಕಿನ ಕೊಕಟನೂರು ಜಾತ್ರೆಯಲ್ಲಿ ಇಬ್ಬರೂ ಪರಸ್ಪರ ಭೇಟಿಯಾಗಿ ಪರಿಚಯ ಮಾಡಿಕೊಂಡಿದ್ದರು.
ಯುವತಿಯನ್ನು ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಹೋಗಿಬರುವುದಾಗಿ ಅಭಿಷೇಕ ಆಹ್ವಾನಿಸಿದ್ದ. ಆಗ ಯುವತಿ ತನ್ನ ಸಹಪಾಠಿಯಾದ ಇನ್ನೊಬ್ಬ ಯುವತಿಯನ್ನೂ ಕರೆದಕೊಂಡು ಬಂದಿದ್ದಳು ಎಂದು ತಿಳಿಸಿದ್ದಾರೆ.
ಅಭಿಷೇಕ ಕೂಡ ತನ್ನ ಇಬ್ಬರು ಸ್ನೇಹಿತರಾದ ಆದಿಲ್ ಶಾ ಮತ್ತು ಕೌತುಕ್‌ನನ್ನು ಕರೆದುಕೊಂಡು ಬಂದಿದ್ದ. ಕಾರೊಂದರಲ್ಲಿ ಎಲ್ಲರೂ ಪ್ರಯಾಣ ಬೆಳೆಸಿದ್ದರು. ಮೂವರು ಯುವಕರು ಯುವತಿಯರನ್ನು ಸವದತ್ತಿ ಹೊರವಲಯದ ಗುಡ್ಡಗಾಡು ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದರು. ಗುಡ್ಡದಲ್ಲಿ ಅಭಿಷೇಕ ಹಾಗೂ ಆದಿಲ್ ಶಾ ಸೇರಿಕೊಂಡು ಒಬ್ಬ ಯುವತಿ ಮೇಲೆ ಅತ್ಯಾಚಾರ ಎಸಗಿದ್ದು, ಕೌತುಬ್ ಎಂಬಾತ ಇನ್ನೊಬ್ಬ ಕಾರಿನಲ್ಲಿ ಇನ್ನೊಬ್ಬ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅತ್ಯಾಚಾರ ಕೃತ್ಯದ ಪ್ರತಿ ಕ್ಷಣಗಳನ್ನೂ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ವಿಡಿಯೊ ತೋರಿಸಿ ಪದೇಪದೇ ಬರುವಂತೆ ಬೆದರಿಕೆ ಒಡ್ಡುತ್ತಿದ್ದರು. ಎಲ್ಲರೂ ಗೋವಾಗೆ ಹೋಗೋಣ, ಬರದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿಬಿಡುತ್ತೇವೆ ಎಂದು ‘ಬ್ಲ್ಯಾಕ್‌ಮೇಲ್’ ಮಾಡಿದ್ದರು. ಹೆದರಿದ ಒಬ್ಬ ಯುವತಿ ಜನವರಿ 13ರಂದು ಹಾರೂಗೇರಿ ಠಾಣೆಯಲ್ಲಿ ದೂರು ದಾಖಲಿಸಿದರು.
ನಂತರವೇ ಪ್ರಕರಣ ಗೊತ್ತಾಗಿದೆ’ ಎಂದು ತಿಳಿಸಿದರು. ‘ಅತ್ಯಾಚಾರ ಕೃತ್ಯದ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುತ್ತೇವೆ ಎಂದು ಹೆದರಿಸಿದ್ದರು. ಹೀಗಾಗಿ, ಯುವತಿ ತಡವಾಗಿ ದೂರು ನೀಡಿದ್ದರು, ಅದಾದ ನಂತರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿ ಅವರ ಬಳಿಯಿದ್ದ ವಿಡಿಯೋಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
Advertisement