ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈಗ ಫಾಸ್ಟ್ ಟ್ರ್ಯಾಕ್ ಇಮಿಗ್ರೇಷನ್ ಸೌಲಭ್ಯ

ಈ ಉಪಕ್ರಮವು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಡಿಜಿಯಾತ್ರ ರೀತಿಯೇ ಇರುತ್ತದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
'Fast Track Immigration-Trusted Traveller Program' (FTI-TTP) for Mumbai, Chennai, Kolkata, Bengaluru, Hyderabad, Cochin and Ahmedabad airports.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಹಮದಾಬಾದ್‌ನಿಂದ ವರ್ಚುವಲ್ ಮೂಲಕ ಗುರುವಾರ ಉದ್ಘಾಟಿಸಿದರು.
Updated on

ಬೆಂಗಳೂರು: ರಾಜಧಾನಿ ಬೆಂಗಳೂರು ಮತ್ತು ದೇಶದ ಇತರ ಆರು ವಿಮಾನ ನಿಲ್ದಾಣಗಳಿಂದ ನಿರ್ಗಮಿಸುವ ಭಾರತೀಯರು ಮತ್ತು ಸಾಗರೋತ್ತರ ಭಾರತೀಯ ಕಾರ್ಡ್ ಹೊಂದಿರುವವರಿಗೆ ಅಂತಾರಾಷ್ಟ್ರೀಯ ಪ್ರಯಾಣವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಉಪಕ್ರಮವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಹಮದಾಬಾದ್‌ನಿಂದ ವರ್ಚುವಲ್ ಮೂಲಕ ನಿನ್ನೆ ಗುರುವಾರ ಉದ್ಘಾಟಿಸಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರ ಪ್ರಯಾಣಿಕರು ಗೃಹ ಸಚಿವಾಲಯದ ಅಡಿಯಲ್ಲಿ ಆನ್‌ಲೈನ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡರೆ ವಲಸೆ ಕೌಂಟರ್‌ಗಳನ್ನು ಬೈಪಾಸ್ ಮಾಡಬಹುದು ಮತ್ತು ಇ-ಗೇಟ್‌ಗಳ ಮೂಲಕ ಹಾದು ಹೋಗಬಹುದು ಎಂದು ವಿಮಾನ ನಿಲ್ದಾಣ ನಿರ್ವಾಹಕ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ಮೂಲಗಳು ತಿಳಿಸಿವೆ.

'ಫಾಸ್ಟ್ ಟ್ರ್ಯಾಕ್ ವಲಸೆ - ವಿಶ್ವಾಸಾರ್ಹ ಪ್ರಯಾಣಿಕರ ಕಾರ್ಯಕ್ರಮ' (FTI- TTP) ಬೆಂಗಳೂರು, ಹೈದರಾಬಾದ್, ಕೊಚ್ಚಿನ್, ಚೆನ್ನೈ, ಮುಂಬೈ, ಕೋಲ್ಕತ್ತಾ ಮತ್ತು ಅಹಮದಾಬಾದ್ ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಪಿಐಬಿ ಪ್ರಕಟಣೆ ತಿಳಿಸಿದೆ. ಇದನ್ನು ಕಳೆದ ವರ್ಷ ದೆಹಲಿಯಲ್ಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3 ರಿಂದ ಪ್ರಾರಂಭಿಸಲಾಯಿತು.

ಈ ಉಪಕ್ರಮವು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಡಿಜಿಯಾತ್ರ ರೀತಿಯೇ ಇರುತ್ತದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ವಿದೇಶಗಳಿಗೆ ಪ್ರಯಾಣಿಸುವವರು ಆನ್‌ಲೈನ್ ಪೋರ್ಟಲ್‌ನಲ್ಲಿ FTI-TTP ಗಾಗಿ ನೋಂದಾಯಿಸಿಕೊಳ್ಳಬೇಕು: https://ftittp.mha.gov.in. "ಪೂರ್ವ ನೋಂದಣಿ ಮಾಡಿಸಿಕೊಂಡರೆ, ವಲಸೆ ಕೌಂಟರ್‌ಗಳನ್ನು ಬೈಪಾಸ್ ಮಾಡಿ ಇ-ಗೇಟ್‌ಗಳ ಮೂಲಕ ಕ್ಲಿಯರೆನ್ಸ್ ಪಡೆಯಬಹುದು. ಇದರಿಂದ ಪ್ರಕ್ರಿಯೆ ವೇಗವಾಗಿ ಸಾಗುತ್ತದೆ.

'Fast Track Immigration-Trusted Traveller Program' (FTI-TTP) for Mumbai, Chennai, Kolkata, Bengaluru, Hyderabad, Cochin and Ahmedabad airports.
KIA ರಸ್ತೆಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ: ಸಾದಹಳ್ಳಿ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ NHAI ಮುಂದು

ಪ್ರಯಾಣಿಕರಿಗೆ ವಿಶ್ವ ದರ್ಜೆಯ ವಲಸೆ ಸೌಲಭ್ಯಗಳನ್ನು ಒದಗಿಸಿ ಅಂತಾರಾಷ್ಟ್ರೀಯ ಪ್ರಯಾಣವನ್ನು ಸುಗಮ ಮತ್ತು ಸುರಕ್ಷಿತವಾಗಿಸುವುದು ಇದರ ಉದ್ದೇಶವಾಗಿದೆ. ಆರಂಭದಲ್ಲಿ, ಈ ಸೌಲಭ್ಯವು ಭಾರತೀಯ ನಾಗರಿಕರು ಮತ್ತು ಸಾಗರೋತ್ತರ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿರುತ್ತದೆ. ಬಯೋಮೆಟ್ರಿಕ್ ಡೇಟಾವನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಲ್ಲಿ ಅಥವಾ ವಿಮಾನ ನಿಲ್ದಾಣದ ಮೂಲಕ ಹಾದುಹೋಗುವಾಗ ಸೆರೆಹಿಡಿಯಲಾಗುತ್ತದೆ.

ನೋಂದಾಯಿತ ಪ್ರಯಾಣಿಕರು ತಮ್ಮ ಬೋರ್ಡಿಂಗ್ ಪಾಸ್ ನ್ನು ಇ-ಗೇಟ್‌ನಲ್ಲಿ ಸ್ಕ್ಯಾನ್ ಮಾಡಿ ಪಾಸ್‌ಪೋರ್ಟ್‌ಗಳನ್ನು ಸ್ಕ್ಯಾನ್ ಮಾಡುವ ಮೂಲಕ ಅದನ್ನು ಅನುಸರಿಸಬಹುದು. ಆಗಮನ ಮತ್ತು ನಿರ್ಗಮನ ಸ್ಥಳಗಳಲ್ಲಿ, ಪ್ರಯಾಣಿಕರ ಬಯೋಮೆಟ್ರಿಕ್‌ಗಳನ್ನು ಇ-ಗೇಟ್‌ಗಳಲ್ಲಿ ದೃಢೀಕರಿಸಲಾಗುತ್ತದೆ, ಅದು ಸ್ವಯಂಚಾಲಿತವಾಗಿ ತೆರೆಯುತ್ತದೆ ಮತ್ತು ವಲಸೆ ಕ್ಲಿಯರೆನ್ಸ್ ಮಂಜೂರಾಗಿದೆ ಎಂದು ಪರಿಗಣಿಸಲಾಗುತ್ತದೆ ಎಂದು ಪ್ರಕಟಣೆ ವಿವರಿಸಿದೆ.

ಈ ಉಪಕ್ರಮವು ವಿಕಸಿತ ಭಾರತ 2047 ದೃಷ್ಟಿಕೋನದ ಭಾಗವಾಗಿದೆ. ಈ ಕಾರ್ಯಕ್ರಮವು ದೇಶಾದ್ಯಂತ 21 ಪ್ರಮುಖ ವಿಮಾನ ನಿಲ್ದಾಣಗಳನ್ನು ಒಳಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com