ಮೈಸೂರು: ಹರಕೆ ಗೂಳಿಯ ಬಾಲ ಕತ್ತರಿಸಿದ ಕಿಡಿಗೇಡಿಗಳು; ನಂಜನಗೂಡಿನಲ್ಲಿ ಅಮಾನವೀಯ ಘಟನೆ

ಹರಕೆ ಹೋರಿಯ ಕೂಗು ಕೇಳಿ ಸ್ಥಳೀಯರು ಪಶುವೈದ್ಯರಿಗೆ ಮಾಹಿತಿ ನೀಡಿದಾಗ, ದುಷ್ಕರ್ಮಿಗಳು ಅದರ ಬಾಲವನ್ನು ಕತ್ತರಿಸಿ ಗಾಯಗೊಳಿಸಿರುವುದನ್ನು ಕಂಡುಬಂದಿದೆ. ಹೋರಿ ಅಪಾಯದಿಂದ ಪಾರಾಗಿದೆ.
Representational image
ಸಾಂದರ್ಭಿಕ ಚಿತ್ರ
Updated on

ಮೈಸೂರು : ಬೆಂಗಳೂರಿನಲ್ಲಿ ಹಸುವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದ ಘಟನೆ ಮಾಸುವ ಮುನ್ನವೇ ಮೈಸೂರಿನ ನಂಜನಗೂಡಿನಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದೆ. ಹರಕೆಗೆ ಬಿಟ್ಟ ಹಸುವಿನ ಬಾಲವನ್ನು ದುಷ್ಕರ್ಮಿಗಳು ಕತ್ತರಿಸಿದ್ದಾರೆ.

ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಬಳಿಯ ಹಳ್ಳದಕೆರೆಯಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡಿರುವ ಕರುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೃತ್ಯ ಎಸಗಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹರಕೆ ಹೋರಿಯ ಕೂಗು ಕೇಳಿ ಸ್ಥಳೀಯರು ಪಶುವೈದ್ಯರಿಗೆ ಮಾಹಿತಿ ನೀಡಿದಾಗ, ದುಷ್ಕರ್ಮಿಗಳು ಅದರ ಬಾಲವನ್ನು ಕತ್ತರಿಸಿ ಗಾಯಗೊಳಿಸಿರುವುದನ್ನು ಕಂಡುಬಂದಿದೆ. ಹೋರಿ ಅಪಾಯದಿಂದ ಪಾರಾಗಿದ್ದು, ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ. ಮೈಸೂರು ಎಸ್ಪಿ ವಿಷ್ಣುವರ್ಧನ್ ಸ್ಥಳಕ್ಕೆ ಭೇಟಿ ನೀಡಿ, ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಡಿವೈಎಸ್ಪಿ ರಘು ಅವರಿಗೆ ಸೂಚಿಸಿದರು.

ಅಮಾನವೀಯ ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ಬಂಧಿಸಲು ಎರಡು ತಂಡಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು. ಹಳ್ಳದ ಕೆರೆ ನಿವಾಸಿಗಳು ಮತ್ತು ಯುವ ಬ್ರಿಗೇಡ್ ಕಾರ್ಯಕರ್ತರು ದೇವಾಲಯದ ಆವರಣದಲ್ಲಿ ಗೋಶಾಲೆ ತೆರೆಯಲು ವಿಫಲವಾದ ದೇವಾಲಯದ ಅಧಿಕಾರಿಗಳು ಮತ್ತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ದೇವಸ್ಥಾನದ ಅಧಿಕಾರಿಗಳು ಕಸಾಯಿಖಾನೆ ಮತ್ತು ದನ ಕಳ್ಳರೊಂದಿಗೆ ಕೈಜೋಡಿಸಿದ್ದಾರೆ ಎಂದು ಆರೋಪಿಸಿದರು.

Representational image
ಹಸುಗಳ ಕೆಚ್ಚಲು ಕೊಯ್ದ ಘಟನೆ: ಮಾಲೀಕರಿಗೆ ಮೂರು ಹಸುಗಳನ್ನು ಉಡುಗೊರೆಯಾಗಿ ನೀಡಿದ ಸಚಿವ ಜಮೀರ್ ಅಹ್ಮದ್ ಖಾನ್

ಮಾಜಿ ವಿಧಾನಸಭಾ ಸದಸ್ಯ ಬಿ. ಹರ್ಷವರ್ಧನ್ ಸ್ಥಳಕ್ಕೆ ಭೇಟಿ ನೀಡಿ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗುತ್ತಿದೆ ಎಂದು ಅವರು ಹೇಳಿದರು.

ದೇವಸ್ಥಾನದ ಸಿಬ್ಬಂದಿಗೆ ದೇವಸ್ಥಾನದ ಹೋರಿಗಳ ವಿವರಗಳನ್ನು ಇಟ್ಟುಕೊಳ್ಳುವಂತೆ ಅವರು ಒತ್ತಾಯಿಸಿದರು. ಕೇರಳದಲ್ಲಿ ಕಸಾಯಿಖಾನೆಗಳಿಗೆ ದೇವಸ್ಥಾನದ ಹೋರಿಗಳನ್ನು ಅಕ್ರಮವಾಗಿ ಸಾಗಿಸುವುದನ್ನು ತಾವು ನಿಲ್ಲಿಸಿದ್ದಾಗಿ ಸ್ಮರಿಸಿದರು.

ಹಿಂದಿನ ಸರ್ಕಾರವು ನಂಜನಗೂಡಿನಲ್ಲಿ ಗೋಶಾಲೆ ತೆರೆಯಲು ಎರಡು ಎಕರೆ ಭೂಮಿಯನ್ನು ಗುರುತಿಸಿ ಹಣವನ್ನು ಬಿಡುಗಡೆ ಮಾಡಿತ್ತು, ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ಇಂತಹ ಘಟನೆಗಳು ಭಕ್ತರ ನಂಬಿಕೆಗೆ ಧಕ್ಕೆ ತರುತ್ತವೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com