
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಲನಚಿತ್ರ 'ಟಾಕ್ಸಿಕ್' ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಸೋಮವಾರ ಹೇಳಿದ್ದಾರೆ.
ನೋಟಿಸ್ ಗೆ ಅಧಿಕಾರಿಗಳು ನೀಡುವ ಉತ್ತರಗಳನ್ನು ಪರಿಶೀಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಮೆಷಿನ್ ಟೂಲ್ಸ್ (ಎಚ್‌ಎಂಟಿ) ಸ್ವಾಧೀನದಲ್ಲಿರುವ ಅರಣ್ಯ ಭೂಮಿ, ಪ್ರಸ್ತುತ ಅರಣ್ಯ ಸ್ಥಾನಮಾನವನ್ನು ಕಳೆದುಕೊಂಡಿದೆ ಎಂದು 2020 ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ಇಂಟರ್ಲೋಕ್ಯುಟರಿ ಅರ್ಜಿಯಲ್ಲಿ(ಐಎ) ಅಧಿಕಾರಿಗಳು(ತಪ್ಪಾಗಿ) ಮಾಹಿತಿ ನೀಡಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ಸಂಪುಟದ ಅನುಮತಿಯನ್ನು ಪಡೆಯದೆ ಅಕ್ರಮವಾಗಿ ಡಿನೋಟಿಫಿಕೇಶನ್ ಅನುಮೋದನೆ ಕೋರಲಾಗಿದೆ. "ಈ IA ಅನ್ನು ಹಿಂಪಡೆಯಲು ಈಗಾಗಲೇ ಸೂಚಿಸಲಾಗಿದೆ. ಕಳೆದ ಕ್ಯಾಬಿನೆಟ್ ಸಭೆಯಲ್ಲಿ, IA ಅನ್ನು ಹಿಂಪಡೆಯಲು ಪೋಸ್ಟ್ ಫ್ಯಾಕ್ಟೋ ಅನುಮೋದನೆ ನೀಡಿದೆ" ಎಂದು ಸಚಿವರು ತಿಳಿಸಿದರು.
ಬೆಂಗಳೂರಿನ ಪೀಣ್ಯ ಪ್ಲಾಂಟೇಶನ್ 1 ಮತ್ತು ಪ್ಲಾಂಟೇಶನ್ 2 ರಲ್ಲಿರುವ ಮೀಸಲು ಅರಣ್ಯದಲ್ಲಿ ಚಿತ್ರೀಕರಣಕ್ಕಾಗಿ ಮರಗಳನ್ನು ಕಡಿದ ಆರೋಪದ ಮೇಲೆ 'ಟಾಕ್ಸಿಕ್' ಚಿತ್ರತಂಡದ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಕೆನರಾ ಬ್ಯಾಂಕ್, HMT ಯಿಂದ ಅರಣ್ಯ ಭೂಮಿಯನ್ನು ಖರೀದಿಸಿದ್ದು, ಆ ಬ್ಯಾಂಕ್‌ನಿಂದ ಚಿತ್ರತಂಡಕ್ಕೆ ಗುತ್ತಿಗೆ ನೀಡಲಾಗಿದೆ ಎಂದು ಖಂಡ್ರೆ ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ನಷ್ಟದ ಕಾರಣ ಸ್ಥಗಿತಗೊಂಡಿದ್ದ HMTಯ 160 ಎಕರೆ ಭೂಮಿಯನ್ನು ಖಾಸಗಿ ಸಂಸ್ಥೆಗಳು ಸೇರಿದಂತೆ ವಿವಿಧ ಸಂಸ್ಥೆಗಳಿಗೆ 313 ಕೋಟಿ ರೂ.ಗಳಿಗೆ ಮಾರಾಟ ಮಾಡಿದೆ ಎಂದು ಖಂಡ್ರೆ ಹೇಳಿದರು.
ಆದಾಗ್ಯೂ, ಆ ಸಮಯದಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ, ಭೂಮಿಯ ಮೌಲ್ಯವನ್ನು 14,300 ಕೋಟಿ ರೂ. ಎಂದು ಹೇಳಲಾಗಿತ್ತು. ಆದರೆ ಇದು ಬೆಂಗಳೂರು ನಗರಕ್ಕೆ ಅಗತ್ಯವಾದ ಉಸಿರಾಟದ ಸ್ಥಳವಾಗಿದೆ. ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ" ಎಂದು ಸಚಿವರು ಹೇಳಿದರು.
ಈ ಭೂಮಿಯನ್ನು ಮರಳಿ ಪಡೆಯಲಾಗುವುದು ಮತ್ತು ಕಬ್ಬನ್ ಪಾರ್ಕ್ ಅಥವಾ ಲಾಲ್‌ಬಾಗ್‌ನಂತೆಯೇ ಉದ್ಯಾನವನವನ್ನು ಅಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.
Advertisement