ಕೊಟ್ಟೋನು ಕೋಡಂಗಿ, ಈಸ್ಕೋಂಡೊನು...?: Ozone Urbana ಗ್ರೂಪ್ ದೋಖಾ; 65 ಫ್ಲ್ಯಾಟ್ ಗಳು ಎರಡೆರಡು ಬಾರಿ ಮಾರಾಟ!

ದೇವನಹಳ್ಳಿಯಲ್ಲಿರುವ 'ಓಜೋನ್ ಅರ್ಬಾನಾ' ಯೋಜನೆಯ ಫ್ಲಾಟ್‌ಗಳ ಮಾಲೀಕರು 65 ಫ್ಲಾಟ್‌ಗಳನ್ನು 'ಡಬಲ್ ಮಾರಾಟ' ಮಾಡಿದ್ದಾರೆ ಎಂದು ಗ್ರಾಹಕರು ಆರೋಪಿಸಿದ್ದಾರೆ. 1,800 ಫ್ಲಾಟ್‌ಗಳ ಈ ಪ್ರಾಜೆಕ್ಟ್ ಅನ್ನು 2018 ರಲ್ಲಿ ಖರೀದಿದಾರರಿಗೆ ಹಸ್ತಾಂತರಿಸಬೇಕಿತ್ತು.
ಕೊಟ್ಟೋನು ಕೋಡಂಗಿ, ಈಸ್ಕೋಂಡೊನು...?: Ozone Urbana ಗ್ರೂಪ್ ದೋಖಾ; 65 ಫ್ಲ್ಯಾಟ್ ಗಳು ಎರಡೆರಡು ಬಾರಿ ಮಾರಾಟ!
Updated on

ಬೆಂಗಳೂರು: ಬೆಂಗಳೂರು ಮೂಲದ ಓಜೋನ್ ಗ್ರೂಪ್ ಮತ್ತು ಅದರ ಸಹೋದರ ಸಂಸ್ಥೆಗಳು ಅತಿದೊಡ್ಡ ಸುಸ್ತಿದಾರರು ಎಂದು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (RERA) ತನ್ನ ವೆಬ್‌ಸೈಟ್‌ನಲ್ಲಿ ಹೈಲೈಟ್ ಮಾಡಿರುವುದರಿಂದ, ಮನೆ ಖರೀದಿದಾರರು ಅವರ ವಿರುದ್ಧ 201 ಪ್ರಕರಣಗಳನ್ನು ದಾಖಲಿಸಿದ್ದು, ಸುಮಾರು 178.83 ಕೋಟಿ ರೂ. ಪರಿಹಾರವನ್ನು ಪಾವತಿಸಬೇಕಾಗಿದೆ.

ದೇವನಹಳ್ಳಿಯಲ್ಲಿರುವ 'ಓಜೋನ್ ಅರ್ಬಾನಾ' ಯೋಜನೆಯ ಫ್ಲಾಟ್‌ಗಳ ಮಾಲೀಕರು 65 ಫ್ಲಾಟ್‌ಗಳನ್ನು 'ಡಬಲ್ ಮಾರಾಟ' ಮಾಡಿದ್ದಾರೆ ಎಂದು ಗ್ರಾಹಕರು ಆರೋಪಿಸಿದ್ದಾರೆ. 1,800 ಫ್ಲಾಟ್‌ಗಳ ಈ ಪ್ರಾಜೆಕ್ಟ್ ಅನ್ನು 2018 ರಲ್ಲಿ ಖರೀದಿದಾರರಿಗೆ ಹಸ್ತಾಂತರಿಸಬೇಕಿತ್ತು, ಆದರೆ ಗಡುವಿನ ಏಳು ವರ್ಷಗಳ ನಂತರ ಭಾಗಶಃ ಪೂರ್ಣಗೊಂಡಿದೆ.

ನಾನು 2017 ರಲ್ಲಿ 'ಅವೆನ್ಯೂ' ಬ್ಲಾಕ್‌ನಲ್ಲಿ 87 ಲಕ್ಷ ರೂ.ಗೆ 2BHK ಫ್ಲಾಟ್ ಖರೀದಿಸಿದೆ, ಅದರಲ್ಲಿ 68 ಲಕ್ಷ ರೂ. ಬ್ಯಾಂಕ್ ಸಾಲವಾಗಿತ್ತು. ಕೇವಲ ಶೇ. 55 ಕೆಲಸ ಪೂರ್ಣಗೊಂಡಿದ್ದು, 2018 ರಲ್ಲಿ ಅದನ್ನು ನಿಲ್ಲಿಸಲಾಯಿತು. ಓಝೋನ್ ಗ್ರೂಪ್ ಮನೆ ಖರೀದಿದಾರರಿಗೆ ಅಜಾಗರೂಕತೆಯಿಂದ ಒಂದು ಮೇಲ್ ಕಳುಹಿಸಿತ್ತು, ಅದರಲ್ಲಿ 65 ಯೂನಿಟ್‌ಗಳನ್ನು ಮರು ಮಾರಾಟ ಮಾಡಲಾಗಿದೆ ಎಂಬ ಅಂಶವನ್ನು ಉಲ್ಲೇಖಿಸಲಾಗಿತ್ತು. ಅನೇಕರು ಇನ್ನೂ ತಮ್ಮ ಗೃಹ ಸಾಲಗಳಿಗೆ ಇಎಂಐ ಪಾವತಿಸುತ್ತಿದ್ದಾರೆ ಎಂದು ಖರೀದಿದಾರರಾದ ಬಿಪುಲ್ ಭಟ್ಟಾಚಾರ್ಯ ಅವರು TNIE ಗೆ ತಿಳಿಸಿದ್ದಾರೆ.

ನಾನು 2014 ರಲ್ಲಿ ಓಝೋನ್ ಅರ್ಬಾನಾದಲ್ಲಿ ಮೂರು 3BHK ಫ್ಲಾಟ್‌ಗಳನ್ನು 70 ಲಕ್ಷ, 80 ಲಕ್ಷ ಮತ್ತು 1.3 ಕೋಟಿ ರೂ. ನೀಡಿ ಖರೀದಿಸಿದೆ. ನಾನು ಈಗಾಗಲೇ ಅವುಗಳಲ್ಲಿ ಎರಡಕ್ಕೆ ಪೂರ್ಣವಾಗಿ ಹಣ ಪಾವತಿಸಿದ್ದೇನೆ. 1.3 ಕೋಟಿ ರೂ.ಗಳ ಫ್ಲಾಟ್‌ಗೆ 60 ಲಕ್ಷ ರೂ.ಗಳನ್ನು ಪಾವತಿಸಿದ್ದೇನೆ. 2024 ರಲ್ಲಿ, ನಾನು ಪೂರ್ಣವಾಗಿ ಪಾವತಿಸಿದ ಫ್ಲಾಟ್‌ಗಳು ತಲಾ 1.2 ಕೋಟಿ ರೂ.ಗಳಿಗೂ ಹೆಚ್ಚು ಬೆಲೆಗೆ ಮಾರಾಟವಾಗಿವೆ ಎಂದು ನನಗೆ ತಿಳಿದುಬಂದಿತು.

ಒಂದು ಫ್ಲ್ಯಾಟ್ ಹಿರಿಯ ನಾಗರಿಕ ದಂಪತಿಗೆ ಮತ್ತು ಇನ್ನೊಂದನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಾರೆ . ಈ ಬಗ್ಗೆ ನಾನು ಅವರನ್ನು ವಿಚಾರಿಸಿದಾಗ ಅದರ ಬದಲು ಬೇರೆ ಫ್ಲ್ಯಾಟ್ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ ಎಂದು ಹೆಸರು ಹೇಳಲು ಬಯಸದ ಖರೀದಿದಾರರೊಬ್ಬರು ತಮ್ಮ ನೋವು ಹಂಚಿಕೊಂಡಿದ್ದಾರೆ.

ಕೊಟ್ಟೋನು ಕೋಡಂಗಿ, ಈಸ್ಕೋಂಡೊನು...?: Ozone Urbana ಗ್ರೂಪ್ ದೋಖಾ; 65 ಫ್ಲ್ಯಾಟ್ ಗಳು ಎರಡೆರಡು ಬಾರಿ ಮಾರಾಟ!
Ozone Urbana Infra Developers Limited ವಿರುದ್ಧ FIR; 3,300 ಕೋಟಿ ರೂ ವಂಚನೆ ಆರೋಪ

ಇಲ್ಲಿ ಸುಮಾರು 200 ಮಾಲೀಕರು ತಮ್ಮ ಫ್ಲಾಟ್‌ಗಳನ್ನು ಆಕ್ರಮಿಸಿಕೊಂಡಿದ್ದಾರೆ, ಆದರೂ ಅವರಿಗೆ ಆಕ್ಯುಪೆನ್ಸಿ ಪ್ರಮಾಣಪತ್ರ, ಶಾಶ್ವತ ವಿದ್ಯುತ್ ಅಥವಾ ನೀರಿನ ಸಂಪರ್ಕವಿಲ್ಲ ಎಂದು ಅವರು ಹೇಳಿದರು.

ಫ್ಲ್ಯಾಟ್ ಹಸ್ತಾಂತರಿಸುವವರೆಗೆ ಪೂರ್ವ-ಇಎಂಐ ಪಾವತಿಸಲು ಬಿಲ್ಡರ್ ತ್ರಿಪಕ್ಷೀಯ ಒಪ್ಪಂದವನ್ನು ಗೌರವಿಸಲಿಲ್ಲ. ನಾನು 67 ಲಕ್ಷ ರೂ. ಗೃಹ ಸಾಲವನ್ನು ಪಡೆದುಕೊಂಡಿದ್ದೇನೆ ಮತ್ತು ಅದನ್ನು ಇನ್ನೂ ಪಾವತಿಸುತ್ತಿದ್ದೇನೆ. ಆರ್‌ಇಆರ್‌ಎ ಯೋಜನೆಗೆ ವಿಸ್ತರಣೆಯನ್ನು ನೀಡಿಲ್ಲ. ನಾನು ಮೋಸ ಹೋಗಿದ್ದೇನೆ ಮತ್ತು ಇನ್ನು ಮುಂದೆ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದಿಲ್ಲ ಎಂದು ಮತ್ತೊಬ್ಬ ಗ್ರಾಹಕ ರೋಹಿತ್ ಪಟೇಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಓಜೋನ್ ಅರ್ಬಾನಾ ಖರೀದಿದಾರರ ಕಲ್ಯಾಣ ಸಂಘದ ಪ್ರತಿನಿಧಿಯೊಬ್ಬರು ಮಾತನಾಡಿ “ಡಿಸೆಂಬರ್ 7, 2024 ರಂದು ತಹಶೀಲ್ದಾರ್ ಜಿಲ್ಲಾ ಕಂದಾಯ ಅಧಿಕಾರಿಗೆ 109.98 ಕೋಟಿ ರೂ.ಗಳ ವಸೂಲಾತಿ ಮೊತ್ತವನ್ನು ಏಳು ದಿನಗಳಲ್ಲಿ ಠೇವಣಿ ಇಡುವಂತೆ ಆದೇಶ ಹೊರಡಿಸಿದ್ದರೂ, ಬಿಲ್ಡರ್ ಅದನ್ನು ಪಾವತಿಸಿಲ್ಲ. ಓಜೋನ್ ಇನ್ಫ್ರಾ ಆಸ್ತಿಯನ್ನು ಹರಾಜು ಮಾಡಲಾಗುವುದು, ಆದರೂ ಇನ್ನೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ತಿಳಿಸಿದ್ದಾರೆ.

ಮನೆ ಖರೀದಿದಾರರ ಕಳವಳಗಳನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಅವುಗಳನ್ನು ಪರಿಹರಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಉಳಿದ ಘಟಕಗಳನ್ನು ಖರೀದಿಸಲು ಆಸಕ್ತಿ ವ್ಯಕ್ತಪಡಿಸಿರುವ ಸಂಭಾವ್ಯ ಹೂಡಿಕೆದಾರರು ಮತ್ತು ಹೊಸ ಗ್ರಾಹಕರನ್ನು ನಾವು ಗುರುತಿಸಿದ್ದೇವೆ, ಅಸ್ತಿತ್ವದಲ್ಲಿರುವ ಹೂಡಿಕೆದಾರರು ಬಯಸಿದರೆ ನಿರ್ಗಮಿಸಲು ಅವಕಾಶವನ್ನು ಒದಗಿಸುತ್ತೇವೆ.

ಹೆಚ್ಚುವರಿಯಾಗಿ, ಕಂಪನಿಯು RERA ವಿಸ್ತರಣೆಗೆ ಅರ್ಜಿ ಸಲ್ಲಿಸಿದೆ ಮತ್ತು ಅನುಮೋದನೆಗಾಗಿ ಕಾಯುತ್ತಿದೆ, ಇದು ಗೃಹ ಸಾಲಗಳಿಗಾಗಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳನ್ನು ಸಂಪರ್ಕಿಸಲು ಮತ್ತು ಯೋಜನೆಯ ಪೂರ್ಣಗೊಳಿಸುವಿಕೆಯನ್ನು ತ್ವರಿತಗೊಳಿಸಲು ಯೋಜನಾ ಹಣಕಾಸು ಪಡೆಯಲು ನಮಗೆ ಅನುವು ಮಾಡಿಕೊಡುತ್ತದೆ ಎಂದು ಓಜೋನ್ ಗ್ರೂಪ್ ತನ್ನ ಅಧಿಕೃತ ಪ್ರತಿಕ್ರಿಯೆಯಲ್ಲಿ, ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com