ಜಲಜೀವನ್​ ಮಿಷನ್​ಗೆ ಕೊಡುಗೆ ನೀಡಿದ ರಾಜ್ಯದ ಜಲ ಯೋಧರಿಗೆ ಗಣರಾಜ್ಯೋತ್ಸವಕ್ಕೆ ಆಹ್ವಾನ!

ಈ ಮಿಷನ್ ಮೂಲಕ ನೀರಿನ ಹರಿವು ಹೆಚ್ಚಿಸುವಲ್ಲಿ ಮತ್ತು ಗ್ರಾಮೀಣ ಸಮುದಾಯಗಳ ಜೀವನವನ್ನು ಸುಧಾರಿಸುವಲ್ಲಿ ಈ ಯೋಧರು ಮಾಡಿದ ಅವಿರತ ಪ್ರಯತ್ನಗಳಿಗಾಗಿ ಈ ಜಲ ಯೋಧರನ್ನು ಆಯ್ಕೆ ಮಾಡಲಾಗಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ದೆಹಲಿಯಲ್ಲಿ ನಡೆಯಲಿರುವ 76ನೇ ಗಣರಾಜ್ಯೋತ್ಸವಕ್ಕೆ ಕರ್ನಾಟಕದ ವಿಶೇಷ ಜಲ ಯೋಧರನ್ನು ಆಯ್ಕೆ ಮಾಡಿ ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿದೆ.

ದೇಶದಾದ್ಯಂತ ಮನೆಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಗುರಿ ಹೊಂದಿರುವ ಈ ಮಿಷನ್ ಮೂಲಕ ನೀರಿನ ಹರಿವು ಹೆಚ್ಚಿಸುವಲ್ಲಿ ಮತ್ತು ಗ್ರಾಮೀಣ ಸಮುದಾಯಗಳ ಜೀವನವನ್ನು ಸುಧಾರಿಸುವಲ್ಲಿ ಈ ಯೋಧರು ಮಾಡಿದ ಅವಿರತ ಪ್ರಯತ್ನಗಳಿಗಾಗಿ ಈ ಜಲ ಯೋಧರನ್ನು ಆಯ್ಕೆ ಮಾಡಲಾಗಿದೆ.

ಉಡುಪಿ ಜಿಲ್ಲೆಯ ಬಡಗಬೆಟ್ಟು ಗ್ರಾಮದ ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಕೋಟ್ಯಾನ್; ಕಲಬುರಗಿಯ ಗಂಜಲಖೇಡ ಗ್ರಾಮದ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ್ ಪಾಟೀಲ್; ಚಿತ್ರದುರ್ಗದ ಕೆರೆ ಕೊಂಡಾಪುರದ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ (ವಿಡಬ್ಲ್ಯೂಎಸ್‌ಸಿ) ಅಧ್ಯಕ್ಷ ಅನಂತಮ್ಮ; ಕೊಪ್ಪಳ ತಾಲ್ಲೂಕಿನ ಕೋಳೂರು ಗ್ರಾಮದ ಶಿವಮ್ಮ; ಮತ್ತು ಬಾಗಲಕೋಟೆಯ ಹಲಗಲಿಯ ವಿಡಬ್ಲ್ಯೂಎಸ್‌ಸಿ ಅಧ್ಯಕ್ಷ ವಿರಪ್ಪ ರಾಮಪ್ಪ ಚಿಕ್ಕೂರು ಅವರುಗಳು ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ನಂತರ ಜನವರಿ 27 ರಂದು ಕೇಂದ್ರ ಜಲಶಕ್ತಿ ಸಚಿವ ಶ್ರೀ ಸಿ.ಆರ್. ಪಾಟೀಲ್ ಅವರನ್ನು ಭೇಟಿಯಾಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com