Bigg Boss Kannada 11 ವಿಜೇತ 'ಹಳ್ಳಿ ಹೈದ' ಹನುಮಂತ

ಟಾಪ್ ಐವರ ಪೈಕಿ ಮೊದಲಿಗೆ ಉಗ್ರಂ ಮಂಜು ಹೊರಹೋಗಿದ್ದರು. ಬಿಗ್ ಬಾಸ್ ಆರಂಭದಲ್ಲಿ ಉಗ್ರಂ ಮಂಜು ಉತ್ತಮವಾಗಿ ಆಡುತ್ತಿದ್ದು ಟ್ರೋಫಿ ಗೆಲ್ಲುವ ಭರವಸೆ ಮೂಡಿಸಿದ್ದರು.
Bigg Boss Kannada 11 ವಿಜೇತ 'ಹಳ್ಳಿ ಹೈದ' ಹನುಮಂತ
Updated on

ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಜೇತರಾಗಿ ಹನುಮಂತ ಹೊರಹೊಮ್ಮಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಎಂಟ್ರಿಕೊಟ್ಟಿದ್ದ ಹನುಮಂತ ವಿಜೇತರಾಗಿ ಹೊರಹೊಮ್ಮಿರುವುದು ಅಚ್ಚರಿ ಮೂಡಿಸಿದೆ.

ಟಾಪ್ ಐವರ ಪೈಕಿ ಮೊದಲಿಗೆ ಉಗ್ರಂ ಮಂಜು ಹೊರಹೋಗಿದ್ದರು. ಬಿಗ್ ಬಾಸ್ ಆರಂಭದಲ್ಲಿ ಉಗ್ರಂ ಮಂಜು ಉತ್ತಮವಾಗಿ ಆಡುತ್ತಿದ್ದು ಟ್ರೋಫಿ ಗೆಲ್ಲುವ ಭರವಸೆ ಮೂಡಿಸಿದ್ದರು. ಆದರೆ ವೈಲ್ಡ್ ಕಾರ್ಡ್ ಮೂಲಕ ಹನುಮಂತ ಮತ್ತು ರಜತ್ ಎಂಟ್ರಿ ನಂತರ ಮಂಜು ಉತ್ಸಾಹ ಕಳೆದುಕೊಂಡಿದ್ದರು. ಬರಬರುತ್ತಾ ಅವರ ಆಟ ಮಂಕಾಯಿತು. ಇನ್ನು ಟಾಪ್ ನಾಲ್ಕರಲ್ಲಿ ಹನುಮಂತ, ರಜತ್, ತ್ರಿವಿಕ್ರಮ್ ಮತ್ತು ಮೋಕ್ಷಿತ ಇದ್ದರು. ಈ ಪೈಕಿ ಮೋಕ್ಷಿತ ಹೊರಬಂದರು. ಈ ಮೂಲಕ ಈ ಬಾರಿಯೂ ಮಹಿಳೆಯೊಬ್ಬರು ಟ್ರೋಫಿ ಗೆಲ್ಲುವ ಭರವಸೆ ಕಮರಿತು.

ಇನ್ನು ಟಾಪ್ ಮೂವರಲ್ಲಿ ಘಟಾನುಘಟಿಗಳೇ ಇದ್ದರು. ಆದರೆ ರಜತ್ 2ನೇ ರನ್ನರ್ ಅಪ್ ಆಗಿ ಹೊರಬಂದರು. ಅಂತಿಮವಾಗಿ ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ಅವರು ಹನುಮಂತ ಮತ್ತು ತ್ರಿವಿಕ್ರಮ್ ಅವರ ಕೈಗಳನ್ನು ಇಡಿದಿದ್ದರು. ಅಂತಿಮವಾಗಿ ಹನುಮಂತನ ಕೈ ಅನ್ನು ಎತ್ತುವ ಮೂಲಕ ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಜೇತರನ್ನು ಘೋಷಿಸಿದರು. ಬಿಗ್ ಬಾಸ್ ವಿಜೇತರಿಗೆ 50 ಲಕ್ಷ ರೂ. ಬಹುಮಾನ ಸಿಗಲಿದೆ.

Bigg Boss Kannada 11 ವಿಜೇತ 'ಹಳ್ಳಿ ಹೈದ' ಹನುಮಂತ
ವಸಿಷ್ಠ-ಹರಿಪ್ರಿಯಾ ದಂಪತಿಗೆ ಗಂಡು ಮಗು ಜನನ!

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com