‘ಲಕ್ಕುಂಡಿ - ಶಿಲ್ಪಕಲೆಯ ತೊಟ್ಟಿಲುʼ ಸ್ತಬ್ಧಚಿತ್ರಕ್ಕೆ ವೋಟ್ ಮಾಡಿ: ಸಿಎಂ ಸಿದ್ದರಾಮಯ್ಯ ಮನವಿ

ಅಪಾರ ಜನರ ಮೆಚ್ಚುಗೆಗೆ ಪಾತ್ರವಾಗಿರುವ ನಮ್ಮ ರಾಜ್ಯದ ಸ್ತಬ್ಧಚಿತ್ರಕ್ಕೆ ವೋಟ್ ಮಾಡಿ ಬೆಂಬಲಿಸುವಂತೆ ಸಮಸ್ತ ಕನ್ನಡಿಗರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ.
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ದೆಹಲಿಯಲ್ಲಿ ಜನವರಿ 26 ರಂದು ನಡೆದ 76ನೇ ಗಣರಾಜ್ಯೋತ್ಸವದ ಅಂಗವಾಗಿ ಪಥಸಂಚಲನದಲ್ಲಿ ಭಾಗವಹಿಸಿದ್ದ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳನ್ನು ಜನಾಭಿಪ್ರಾಯ ಆಧರಿಸಿ ಪ್ರಶಸ್ತಿಗೆ ಪರಿಗಣಿಸಲು ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯವು ಆನ್ ಲೈನ್ ನಲ್ಲಿ ವೋಟ್ ಮಾಡಲು ಅವಕಾಶ ಕಲ್ಪಿಸಿದೆ.

ಈ ಬಾರಿ ಕರ್ನಾಟಕವು ‘ಲಕ್ಕುಂಡಿ: ಶಿಲ್ಪಕಲೆಯ ತೊಟ್ಟಿಲುʼ ಎಂಬ ಸ್ತಬ್ಧಚಿತ್ರದೊಂದಿಗೆ ಭಾಗವಹಿಸಿತ್ತು. ಅಪಾರ ಜನರ ಮೆಚ್ಚುಗೆಗೆ ಪಾತ್ರವಾಗಿರುವ ನಮ್ಮ ರಾಜ್ಯದ ಈ ಸ್ತಬ್ಧಚಿತ್ರಕ್ಕೆ ವೋಟ್ ಮಾಡಿ ಬೆಂಬಲಿಸುವಂತೆ ಸಮಸ್ತ ಕನ್ನಡಿಗರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರವು ಅತ್ಯುತ್ತಮ ಸ್ತಬ್ಧಚಿತ್ರದ ಆಯ್ಕೆಗಾಗಿ ಸಾರ್ವಜನಿಕರು ಆನ್ ಲೈನ್, ಇಮೇಲ್ ಮತ್ತು ಎಸ್ಎಂಎಸ್ ಮೂಲಕ ವೋಟ್ ಮಾಡಲು ಅವಕಾಶ ಕಲ್ಪಿಸಿದೆ. ಜನವರಿ 28ರ ಮಧ್ಯರಾತ್ರಿ 12ರ ವರೆಗೆ ವೋಟ್ ಮಾಡಲು ಅವಕಾಶವಿದೆ. ಸಾರ್ವಜನಿಕರು ನಿಗದಿತ ಅವಧಿಯೊಳಗೆ ವೋಟ್ ಮಾಡಿ ರಾಜ್ಯದ ಸ್ತಬ್ಧಚಿತ್ರವನ್ನು ಬೆಂಬಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಕೇಳಿಕೊಂಡಿದ್ದಾರೆ.

ವೋಟ್ ಮಾಡುವ ವಿಧಾನದ ಬಗ್ಗೆ ಈ ಕೆಳಗಿನ ಕಿರುಚಿತ್ರವು ನಿಮಗೆ ನೆರವಾಗಲಿದೆ. ಇದನ್ನು ಅನುಸರಿಸಿ, Lakkundi Cradle of stone Craft ವಿಷಯದ ಸ್ತಬ್ಧಚಿತ್ರಕ್ಕೆ ಹೆಚ್ಚು ಹೆಚ್ಚು ವೋಟ್ ಮಾಡುವ ಮೂಲಕ ಬೆಂಬಲ ಹಾಗೂ ಮೆಚ್ಚುಗೆ ಸೂಚಿಸಬೇಕೆಂದು ಮನವಿ ಮಾಡುತ್ತೇನೆ.

CM Siddaramaiah
ಗಣರಾಜ್ಯೋತ್ಸವ ಪರೇಡ್ 2025: ಪಥಸಂಚಲನಕ್ಕೆ 'ಲಕ್ಕುಂಡಿ' ಸ್ತಬ್ಧಚಿತ್ರ ಸಿದ್ಧ

https://mygov.in/group-poll/vote-your-favourite-tableau-and-marching-contingent-republic-day-parade-2025/ ಲಿಂಕ್ ಅನ್ನು ಕ್ಲಿಕ್ ಮಾಡಿ, Login to participate ಮೇಲೆ ಕ್ಲಿಕ್ ಮಾಡಿ, ತಮ್ಮ ನೋಂದಾಯಿತ ಮೊಬೈಲ್ ನಂಬರ್ ಅಥವಾ ಇಮೇಲ್ ವಿವರ ನಮೂದಿಸಿ, ತಾವು ಸ್ವೀಕರಿಸುವ ಒಟಿಪಿ ನಮೂದಿಸಿ, ನಂತರ Resend. OTP/ Submitted ಇದರಲ್ಲಿ submitt ಕ್ಲಿಕ್ ಮಾಡಿ, ಎಲ್ಲಾ ಸ್ತಬ್ಧಚಿತ್ರಗಳ ಮಾಹಿತಿ ಕಾಣುತ್ತದೆ. Lakkundi : cradle of stone craft ಕ್ಲಿಕ್ ಮಾಡಿ ತಮ್ಮ ಮತವನ್ನು ದಾಖಲಿಸಬಹುದು.

ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ MYGOVPOLL 357037,12 ಟೈಫ್ ಮಾಡಿ 7738299899 ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಓಟ್ ಮಾಡಬಹುದಾಗಿದೆ. ‌

ನೀವು ವೋಟ್ ಮಾಡಿ, ನಿಮ್ಮ ಕುಟುಂಬ ಸದಸ್ಯರು, ಆತ್ಮೀಯರ ಮೂಲಕವೂ ವೋಟ್‌ ಮಾಡಿಸಿ, ಕರ್ನಾಟಕದ ಸ್ತಬ್ಧಚಿತ್ರವು ಪ್ರಶಸ್ತಿ ಗೆದ್ದು ರಾಷ್ಟ್ರಮಟ್ಟದಲ್ಲಿ ನಾಡಿನ ಕೀರ್ತಿಪತಾಕೆ ಹಾರಿಸಲು ನಮ್ಮೊಂದಿಗೆ ಕೈಜೋಡಿಸಿ ಎಂದು ಸಿಎಂ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com