
ಸುಳ್ಳು ಮಾಹಿತಿ ನೀಡುವ ಫೋಟೊ ಹಂಚಿಕೊಂಡಿದ್ದಕ್ಕಾಗಿ ಪ್ರಶಾಂತ್ ಸಂಬರ್ಗಿ (Prashanth Sambargi) ವಿರುದ್ಧ ನಟ ಪ್ರಕಾಶ್ ರಾಜ್ ಪ್ರಕರಣ ದಾಖಲಿಸುವುದಾಗಿ ಟ್ವೀಟ್ ಮಾಡಿದ್ದಾರೆ.
Mahakumbh 2025 ರಲ್ಲಿ ನಟ ಪ್ರಕಾಶ್ ರಾಜ್ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ ಎಂಬಂತೆ ಕಾಣುವ ಫೋಟೋವನ್ನು ಕೃತಕ ಬುದ್ಧಿಮತ್ತೆ ಟೂಲ್ (AI) ಬಳಸಿ ರಚಿಸಲಾಗಿತ್ತು. ಈ AI ಫೋಟೋ ಎಲ್ಲೆಡೆ ವೈರಲ್ ಆಗತೊಡಗಿದೆ.
ಪ್ರಕಾಶ್ ರಾಜ್ ಗೆ ಸಂಬಂಧಿಸಿದ AI ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪ್ರಶಾಂತ್ ಸಂಬರ್ಗಿ, ಕುಂಭಮೇಳದಲ್ಲಿ ನಟ ಪ್ರಕಾಶ್ ರಾಜ್ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು, ಅವರ ಪಾಪಗಳನ್ನು ಮನ್ನಿಸಲಾಗುತ್ತದೆ. ಪಾಪ ಕಳೆಯುತ್ತದೆ ಎಂಬ ಆಶಾಭಾವನೆ ಇದೆ ಎಂದು ಶೀರ್ಷಿಕೆ ನೀಡಿದ್ದರು.
ಪ್ರಶಾಂತ್ ಸಂಬರ್ಗಿ ಪೋಸ್ಟ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಪ್ರಕಾಶ್ ರಾಜ್ "ಸುಳ್ಳು ಸುದ್ದಿ “ಸುಳ್ಳ ರಾಜ” ನ ಹೇಡಿಗಳ ಸೈನ್ಯಕ್ಕೆ.. ಅವರ ಪವಿತ್ರ ಪೂಜೆಯಲ್ಲೂ ಸುಳ್ಳು ಸುದ್ದಿ ಹಬ್ಬಿಸಿ ಹೊಲಸು ಮಾಡುವುದೇ ಕೆಲಸ.. police complaint ದಾಖಲಾಗಿದೆ.. ಕೋರ್ಟಿನ ಕಟಕಟೆಯಲ್ಲಿ ಏನು ಮಾಡುತ್ತಾರೋ ನೋಡೋಣ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Advertisement