ಬೆಂಗಳೂರು ಅರಮನೆ ಭೂಮಿಯನ್ನು ಬಳಸಿಕೊಳ್ಳಲು ಸರ್ಕಾರಕ್ಕೆ ಅಧಿಕಾರ: ಸುಗ್ರೀವಾಜ್ಞೆಗೆ ರಾಜ್ಯಪಾಲರ ಒಪ್ಪಿಗೆ

ಬೆಂಗಳೂರು ಅರಮನೆಯ 472 ಎಕರೆ 16 ಗುಂಟೆಗಳ ಸಂಪೂರ್ಣ ವಿಸ್ತೀರ್ಣದ ಒಟ್ಟು ಮೌಲ್ಯವನ್ನು ಕಾಯ್ದೆಯ ಪ್ರಕಾರ 11 ಕೋಟಿ ರೂಪಾಯಿಗಳಿಗೆ ನಿರ್ಧರಿಸಲಾಗಿದೆ ಎಂದು ಸುಗ್ರೀವಾಜ್ಞೆ ವಿವರಿಸುತ್ತದೆ.
Bengaluru palace
ಬೆಂಗಳೂರು ಅರಮನೆ
Updated on

ಬೆಂಗಳೂರು: ರಾಜ್ಯ ಸರ್ಕಾರ ಅಂಗೀಕರಿಸಿದ ಬೆಂಗಳೂರು ಅರಮನೆ (ಭೂಮಿ ಬಳಕೆ ಮತ್ತು ನಿಯಂತ್ರಣ) ಸುಗ್ರೀವಾಜ್ಞೆ, 2025 ಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಒಪ್ಪಿಗೆ ಸೂಚಿಸಿದ್ದು, ರಾಜ್ಯ ಗೆಜೆಟ್‌ನಲ್ಲಿ ಪ್ರಕಟವಾಗಿದೆ.

ಇದರೊಂದಿಗೆ, ಹಿಂದಿನ ಮೈಸೂರು ರಾಜಮನೆತನ ಸೇರಿದ ಬೆಂಗಳೂರು ಅರಮನೆಯ ಭೂಮಿಯ ಬಳಕೆ ಮತ್ತು ನಿಯಂತ್ರಣ-ಬೆಂಗಳೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ, 1996 (ಕರ್ನಾಟಕ ಕಾಯ್ದೆ 18, 1996) ಅಡಿಯಲ್ಲಿ, ಈಗ ರಾಜ್ಯ ಸರ್ಕಾರಕ್ಕೆ ಸೇರಿದೆ.

ಜಯಮಹಲ್ ಮತ್ತು ಬಳ್ಳಾರಿ ರಸ್ತೆಯ 2 ಕಿ.ಮೀ. ಉದ್ದದ ಅಗಲೀಕರಣಕ್ಕಾಗಿ 15 ಎಕರೆ 17.5 ಗುಂಟೆ ಭೂಮಿಯನ್ನು ಬಳಸಿಕೊಳ್ಳಲು ಸರ್ಕಾರವು ರಾಜಮನೆತನಕ್ಕೆ ಪರಿಹಾರವಾಗಿ 3,014 ಕೋಟಿ ರೂಪಾಯಿಗಳನ್ನು ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಡಿಸೆಂಬರ್ 10, 2024 ರಂದು ನೀಡಿದ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟವು ಈ ಸುಗ್ರೀವಾಜ್ಞೆಯನ್ನು ಪ್ರಕಟಿಸಲು ನಿರ್ಧರಿಸಿತ್ತು. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಬೇಕಾದರೆ, ಅದು ರಾಜ್ಯದ ಖಜಾನೆಗೆ ಹೊರೆಯಾಗುತ್ತದೆ ಎಂದು ಸರ್ಕಾರ ವಾದಿಸಿತು. ಸರ್ಕಾರ ರಸ್ತೆ ಅಗಲೀಕರಣ ಕಾರ್ಯವನ್ನು ಪುನರಾರಂಭಿಸುತ್ತದೆಯೇ ಅಥವಾ ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪಿಗಾಗಿ ಕಾಯುತ್ತದೆಯೇ ಎಂಬುದು ಕುತೂಹಲಕಾರಿಯಾಗಿದೆ.

ಬೆಂಗಳೂರು ಅರಮನೆಯ 472 ಎಕರೆ 16 ಗುಂಟೆಗಳ ಸಂಪೂರ್ಣ ವಿಸ್ತೀರ್ಣದ ಒಟ್ಟು ಮೌಲ್ಯವನ್ನು ಕಾಯ್ದೆಯ ಪ್ರಕಾರ 11 ಕೋಟಿ ರೂಪಾಯಿಗಳಿಗೆ ನಿರ್ಧರಿಸಲಾಗಿದೆ ಎಂದು ಸುಗ್ರೀವಾಜ್ಞೆ ವಿವರಿಸುತ್ತದೆ. ಇದರ ಸಾಂವಿಧಾನಿಕ ಸಿಂಧುತ್ವವನ್ನು ಹೈಕೋರ್ಟ್ ಎತ್ತಿಹಿಡಿದಿದೆ ಮತ್ತು ಸುಪ್ರೀಂ ಕೋರ್ಟ್ ಕಾಯ್ದೆಯ ಕಾರ್ಯಾಚರಣೆಗೆ ಯಾವುದೇ ತಡೆ ನೀಡಿಲ್ಲ.

Bengaluru palace
ಸಾರ್ವಜನಿಕ ಹಿತದೃಷ್ಟಿಗೆ ನಮ್ಮ ಆಸ್ತಿಯೇ ಬೇಕೆ?; ಸರ್ಕಾರ TDR ಪ್ರಮಾಣಪತ್ರ ನೀಡಲಿ: ಯದುವೀರ್ ಒಡೆಯರ್

ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ (ಸಂಖ್ಯೆ 688 / 2021 ಇತ್ಯಾದಿ) ಸರ್ಕಾರಕ್ಕೆ ಬೆಂಗಳೂರು ಅರಮನೆಯ ಈ ಉದ್ದೇಶಕ್ಕಾಗಿ ಮೀಸಲಿಟ್ಟ ಭಾಗವನ್ನು ಕರ್ನಾಟಕ ಸ್ಟ್ಯಾಂಪ್ ಕಾಯ್ದೆ, 1957 ರ ಸೆಕ್ಷನ್ 45ಬಿ (ಕರ್ನಾಟಕ ಕಾಯ್ದೆ 34 / 1957) ಪ್ರಕಾರ ಪಕ್ಕದ ಪ್ರದೇಶಗಳ ಚಾಲ್ತಿಯಲ್ಲಿರುವ ಮಾರ್ಗದರ್ಶನ ಮೌಲ್ಯಕ್ಕೆ ಅನುಗುಣವಾಗಿ ಮೌಲ್ಯಮಾಪನ ಮಾಡಿ, ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳನ್ನು (TDR) ನೀಡುವಂತೆ ನಿರ್ದೇಶಿಸಿದೆ.

ಈಗ ವಿಧಾನಸಭೆ ಮತ್ತು ಪರಿಷತ್ತು ಅಧಿವೇಶನದಲ್ಲಿಲ್ಲದ ಕಾರಣ, ಸಂವಿಧಾನದ 213 (1) ನೇ ವಿಧಿಯ ಅಡಿಯಲ್ಲಿ ಅಧಿಕಾರವನ್ನು ಚಲಾಯಿಸಲು ಅಗತ್ಯ ಮತ್ತು ಅನುಕೂಲಕರವಾದ ಸಂದರ್ಭಗಳು ಅಸ್ತಿತ್ವದಲ್ಲಿವೆ ಎಂದು ರಾಜ್ಯಪಾಲರು ಮನದಟ್ಟಾಗಿದ್ದಾರೆ. ಜನವರಿ 27, 2025 ರಂದು ಸುಗ್ರೀವಾಜ್ಞೆ ಜಾರಿಗೆ ಬರಲಿದೆ ಎಂದು ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com